ಮನೋರಂಜನೆ

ದುನಿಯಾ ವಿಜಯ್ ವಿರುದ್ಧ ಅಪರೂಪದಲ್ಲೇ ಅಪರೂಪದ ಪ್ರಕರಣ ದಾಖಲಿಸಿಕೊಂಡ ಪೊಲೀಸರು.

ನಟ ದುನಿಯಾ ವಿಜಯ್ ವಿರುದ್ದ ಪೊಲೀಸರು ಅಪರೂಪದಲ್ಲಿಯೇ ಅಪರೂಪ ಎನ್ನಬಹುದಾದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪದೇ ಪದೇ ಕೌಟುಂಬಿಕ ಕಲಹ ವಿಚಾರವಾಗಿ ಠಾಣೆ ಮೇಟ್ಟಿಲೇರುತ್ತಿರುವ ನಟ ದುನಿಯಾ ವಿಜಯ್‌ ಕುಟುಂಬದ ವಿರುದ್ಧ ಗಿರಿನಗರ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ನಟ ದುನಿಯಾ ವಿಜಯ್‌, ಅವರ ಮೊದಲ ಪತ್ನಿ ನಾಗರತ್ನ, ಎರಡನೇ ಪತ್ನಿ ಕೀರ್ತಿಗೌಡ, ನಾಗರತ್ನ ಸಹೋದರ, ವಿಜಯ್‌ ಪೋಷಕರು ಹಾಗೂ ಚಾಲಕ ಸೇರಿ 7 ಮಂದಿ ವಿರುದ್ಧ ಸಿಆರ್‌ಪಿಸಿ 107ರ‌ಡಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಪೊಲೀಸರು ಆರೋಪಿಗಳಿಂದ 20 ಲಕ್ಷ ಬಾಂಡ್ ಬರೆಸಿಕೊಳ್ಳಲು ಚಿಂತನೆ ನಡೆಸಿದ್ದಾರೆ. ಈ ಪ್ರಕರಣದಡಿಯಲ್ಲಿ ಕುಟುಂಬದಿಂದ ಕಾನೂನು ಸುವ್ಯವಸ್ಥೆ ಶಾಂತಿಗೆ ಭಂಗ ತಂದರೆ 20 ಲಕ್ಷ ಮೌಲ್ಯದ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ.

ಒಂದು ವೇಳೆ ಇದನ್ನು ಮೀರಿ ಮತ್ತೂಮ್ಮೆ ಗಲಾಟೆ ಮಾಡುವುದು, ಶಾಂತಿ ಸೌಹಾರ್ದತೆಗೆ ಧಕ್ಕೆ ತರುವುದು ಮಾಡಿದರೆ ಭಾರತೀಯ ದಂಡ ಸಂಹಿತೆ(ಐಪಿಸಿ) ಅಡಿಯಲ್ಲಿ ಮತ್ತೂಂದು ಎಫ್ಐಆರ್‌ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top