ಭವಿಷ್ಯ

ವಾರ ಭವಿಷ್ಯ ಅಕ್ಟೋಬರ್ 29 ನೇ ತಾರೀಖಿನಿಂದ ನವೆಂಬರ್ 4 ನೇ ತಾರೀಖಿನವರೆಗೆ

ಮೇಷ ರಾಶಿ

 

 

 

ಅಪರಿಚಿತರಿಂದ ದೂರವಿರಿ ಹಾಗೂ ಎಚ್ಚರಿಕೆಯಿಂದ ಇರಿ, ಉದ್ಯೋಗದಲ್ಲಿ ಪ್ರಗತಿ, ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ, ಅತಿಯಾದ ನಿದ್ರೆ,ಮಾತಿನ ಮೇಲೆ ಹಿಡಿತ ಇರಲಿ, ಮಹಿಳೆಯರಿಗೆ ವಿಶೇಷವಾಗಿ ಮಾನಸಿಕ ನೆಮ್ಮದಿ ನಿಮಗೆ ಲಭಿಸಲಿದೆ.

ಪರಿಹಾರ:ಪ್ರತಿ ದಿನ ಲಲಿತಾ ಸಹಸ್ರ ನಾಮವನ್ನು ಪಾರಾಯಣ ಮಾಡಿ ವೃದ್ಧರಿಗೆ ಸಹಾಯ ಮಾಡಿ .

ವೃಷಭ ರಾಶಿ

 

 

 

ಕುಟುಂಬದಲ್ಲಿ ಅತಿಯಾದ ಜವಾಬ್ದಾರಿ, ಎಷ್ಟೇ ಹಣ ಬಂದರೂ ಕೂಡ ಉಳಿಯುವುದಿಲ್ಲ, ಸ್ವಯಂಕೃತ ಅಪರಾಧಗಳನ್ನು ಮಾಡುವ ವಾರವಾಗುತ್ತದೆ , ವಿಪರೀತ ಹಣವನ್ನು ಖರ್ಚು ಮಾಡುತ್ತೀರ, ಮಕ್ಕಳ ವಿಚಾರದಲ್ಲಿ ನೋವು ಉಂಟಾಗಲಿದೆ, ಉಳಿತಾಯದ ಕಡೆ ಗಮನ ಹರಿಸಿ.

ಪರಿಹಾರ:ಅಷ್ಟಲಕ್ಷ್ಮಿ ಸ್ತೋತ್ರವನ್ನು ಪಾರಾಯಣ ಮಾಡಿ, ಶುಕ್ರವಾರ ಎಂಟು ಜನ ಸುಮಂಗಲಿಯರಿಗೆ ಅರಿಶಿನ-ಕುಂಕುಮವನ್ನು ಕೊಟ್ಟು ನಮಸ್ಕಾರ ಮಾಡಿ.

ಮಿಥುನ ರಾಶಿ

 

 

 

ಈ ವಾರ ಅಮೂಲ್ಯ ವಸ್ತುಗಳನ್ನು ಖರೀದಿ ಮಾಡುವಿರಿ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿಯತ್ತ ಬರುತ್ತೀರ, ಸುಖ ಭೋಜನ ಪ್ರಾಪ್ತಿ, ಪರರ ಧನ ಪ್ರಾಪ್ತಿಯಾಗಲಿದೆ, ಕಷ್ಟ ಕಾರ್ಪಣ್ಯಗಳು ಹೆಚ್ಚಾಗುತ್ತವೆ.

ಪರಿಹಾರ:ಆಂಜನೇಯ ಸ್ತೋತ್ರವನ್ನು ನಿತ್ಯ ಪಾರಾಯಣ ಮಾಡಬೇಕು,ಗೋ ಪೂಜೆಯನ್ನು ಮಾಡಿ ಹಸು ಮತ್ತು ಕರುವಿಗೆ ಬೆಲ್ಲ ಮತ್ತು ಬಾಳೆಹಣ್ಣನ್ನು ತಿನ್ನಿಸಿ, ದೀರ್ಘದಂಡ ನಮಸ್ಕಾರವನ್ನು ಮಾಡಿ.

ಕಟಕ ರಾಶಿ 

 

 

 

ಕೋರ್ಟ್ ಕೇಸ್ ಗಳಲ್ಲಿ ಜಯ ಲಭಿಸುತ್ತದೆ, ಹಿರಿಯರಲ್ಲಿ ಶ್ರದ್ಧೆ ಭಕ್ತಿ ಹೆಚ್ಚಾಗಲಿದೆ, ಸುಖ ಭೋಜನ ಪ್ರಾಪ್ತಿಯಾಗುತ್ತದೆ, ಸಣ್ಣಪುಟ್ಟ ವಿಚಾರಗಳಿಗೆ ಕಲಹಗಳನ್ನು ಮಾಡಿಕೊಳ್ಳುತ್ತೀರ, ಮಾತಿನ ಚಕಮಕಿಗೆ ಇಳಿದು ಬಿಡುತ್ತೀರ, ಇಲ್ಲಸಲ್ಲದ ಅಪವಾದಗಳು ನಿಮ್ಮ ಮೇಲೆ ಬರುತ್ತವೆ.

ಪರಿಹಾರ:ಮಾತೆ ಅನ್ನಪೂರ್ಣೇಶ್ವರಿಯ ಸ್ತೋತ್ರವನ್ನು ಪ್ರತಿ ನಿತ್ಯ ಪಾರಾಯಣ ಮಾಡಿ,ಹಸು ಮತ್ತು ಕರುವಿಗೆ ಮಂಗಳವಾರದ ದಿನ ಬೆಲ್ಲ ಮತ್ತು ಬಾಳೆಹಣ್ಣು ತಿನ್ನಿಸಿ.

ಸಿಂಹ ರಾಶಿ 

 

 

 

ಕುಟುಂಬದಲ್ಲಿ ಸೌಖ್ಯ, ತೀರ್ಥಕ್ಷೇತ್ರ ದರ್ಶನ ಮಾಡುವ ಶುಭಯೋಗ ,ಮಾನಸಿಕ ನೆಮ್ಮದಿ ಪ್ರಾಪ್ತಿಯಾಗಲಿದೆ, ಆದರೆ ಹಿತ ಶತ್ರುಗಳ ಬಾಧೆ, ಯಾರನ್ನು ನೀವು ಒಳ್ಳೆಯವರು ಎಂದು ತಿಳಿದುಕೊಂಡಿರುತ್ತೀರೋ, ಅವರೇ ನಿಮಗೆ ಶತ್ರುಗಳಾಗಿ ಪರಿವರ್ತನೆಯಾಗುತ್ತಾರೆ, ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಲಿದೆ, ಅನಗತ್ಯ ವಿಚಾರಗಳಿಂದ ಆದಷ್ಟು ದೂರವಿರಿ.

ಪರಿಹಾರ:ಶಿವ ಪಂಚಾಕ್ಷರಿ ಮಂತ್ರವಾದ “ಓಂ ನಮಃ ಶಿವಾಯ” ಈ ಮಂತ್ರವನ್ನು 108 ಬಾರಿ ಜಪಿಸಿ, ಸೋಮವಾರ ಶಿವನ ದೇವಾಲಯದಲ್ಲಿ ಬಿಲ್ವಾರ್ಚನೆಯನ್ನು ಮಾಡಿ, ದೀರ್ಘದಂಡ ನಮಸ್ಕಾರವನ್ನು ಮಾಡಿ.

ಕನ್ಯಾ ರಾಶಿ 

 

 

 

ಉದ್ಯೋಗದಲ್ಲಿ ಪ್ರಗತಿಯನ್ನು ಕಾಣುತೀರ, ಸ್ತ್ರೀಯರಿಗೆ ನೆಮ್ಮದಿಯಾದಂತಹ ವಾರ, ರೋಗ ಭಾದೆಗಳು, ಹೊಸ ಹೊಸ ರೋಗಗಳು ನಿಮ್ಮ ಶರೀರವನ್ನು ಆವರಿಸುತ್ತವೆ, ಪ್ರಿಯ ಜನರ ಭೇಟಿಯನ್ನು ಮಾಡಲಿದ್ದೀರಿ, ಅಪಕೀರ್ತಿ, ಮನೋವ್ಯಥೆ, ನಿಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳುವ ವಾರವಾಗಲಿದೆ , ಶತ್ರು ನಾಶ.

ಪರಿಹಾರ:ಗುರು ರಾಘವೇಂದ್ರರ ಆರಾಧನೆಯನ್ನು ಮಾಡಿ, ಗುರುವಾರ ಬಡ ಮಕ್ಕಳಿಗೆ ಅನ್ನದಾನ  ಮಾಡಿ.

ತುಲಾ ರಾಶಿ

 

 

 

ಕುಟುಂಬದಲ್ಲಿ ಶಾಂತಿ ನೆಮ್ಮದಿಯ ವಾತಾವರಣ, ನಾನಾ ವಿಚಾರಗಳಲ್ಲಿ ಆಸಕ್ತಿ, ಆಕಸ್ಮಿಕವಾದ ಖರ್ಚುಗಳಾಗುತ್ತವೆ, ಮಾತಿನ ಮೇಲೆ ಹಿಡಿತ ಇರಲಿ, ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ ಮಾಡಬೇಕಾಗುತ್ತದೆ, ವ್ಯಾಪಾರಿಗಳಿಗೆ ಲಾಭ , ಇತರರ ಮಾತಿಗೆ ಮರುಳಾಗಬೇಡಿ.

ಪರಿಹಾರ:ಪ್ರತಿನಿತ್ಯ ಅಶ್ವತ ವೃಕ್ಷ ಪ್ರದಕ್ಷಿಣೆಯನ್ನು ಮಾಡಿ, ಶನಿವಾರ ಸಿಹಿ ನೈವೇದ್ಯವನ್ನು ಅರ್ಪಿಸಿ, ಬಡ ಮಕ್ಕಳಿಗೆ ವಿನಿಯೋಗವನ್ನು ಮಾಡಿ.

ವೃಶ್ಚಿಕ ರಾಶಿ

 

 

 

ಸಹೋದ್ಯೋಗಿಗಳ ಜೊತೆ ಸ್ನೇಹದಿಂದ ವರ್ತಿಸಿ, ದೂರ ಪ್ರಯಾಣ ಮಾಡಬೇಕಾಗುತ್ತದೆ, ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ, ಗುರಿ ಸಾಧನೆಗೆ ಪರಿಶ್ರಮ ಪಡಬೇಕಾಗುತ್ತದೆ, ಶುಭ ಕಾರ್ಯಕ್ಕೆ ಇದು ಒಳ್ಳೆಯ ಸಮಯವಾಗಿದೆ.

ಪರಿಹಾರ:ಪ್ರತಿನಿತ್ಯ ಸೂರ್ಯ ನಮಸ್ಕಾರವನ್ನು ಮಾಡಿ, ಕಣ್ಣಿಲ್ಲದೆ ಇರುವ ಅಂಧ ಮಕ್ಕಳಿಗೆ ಕೈಲಾದ ಸೇವೆಯನ್ನು ಮಾಡಿ.

ಧನಸ್ಸು ರಾಶಿ

 

 

 

ಕೆಲಸ ಕಾರ್ಯಗಳಲ್ಲಿ ಪ್ರಗತಿ, ಹಳೆ ಸಾಲ ಮರು ಪಾವತಿಯಾಗಲಿದೆ, ಶುಭ ಸುದ್ದಿ ಕೇಳಿ ಬರಲಿದೆ , ಮನಃಶಾಂತಿ, ಅಧಿಕ ತಿರುಗಾಟ, ಮನಸ್ಸಿನಲ್ಲಿ ಏನೋ ಒಂದು ರೀತಿಯ ಗೊಂದಲಮಯವಾದ ವಾತಾವರಣ ಸೃಷ್ಟಿಯಾಗುತ್ತದೆ, ಶತ್ರುಗಳ ಬಾದೆ ಅಧಿಕವಾಗಲಿದೆ.

ಪರಿಹಾರ:ಪ್ರತಿನಿತ್ಯ ಗಣಪತಿ ಸ್ತೋತ್ರವಾದ “ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ” ಈ ಗಣಪತಿ ಸ್ತೋತ್ರವನ್ನು 21 ಬಾರಿ ಜಪವನ್ನು ಮಾಡಿ, ಪ್ರತಿನಿತ್ಯ ಗಣೇಶನಿಗೆ 21 ನಮಸ್ಕಾರವನ್ನು ಮಾಡಿ.

ಮಕರ ರಾಶಿ 

 

 

 

ಅಲ್ಪ ಆದಾಯ ಅಧಿಕ ಖರ್ಚು, ನೀಚ ಜನರಿಂದ ದೂರವಿರಿ, ಹಣಕಾಸು ನಷ್ಟ , ಧನಹಾನಿ, ವೃತಾ ತಿರುಗಾಟ , ಮನಸ್ಸಿಗೆ ಚಿಂತೆ ,ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ, ಅನಾರೋಗ್ಯ ಪೀಡಿತರಾಗಬೇಕಾಗುತ್ತದೆ, ಕೈಹಾಕಿದ ಕೆಲಸ ಕಾರ್ಯಗಳು ನಿಧಾನವಾಗಿ ಸಾಗಲಿವೆ.

ಪರಿಹಾರ:ಪ್ರತಿನಿತ್ಯ ಹನುಮಾನ್ ಚಾಲೀಸವನ್ನು ಪಾರಾಯಣ ಮಾಡಿ, ವಟು ಬ್ರಾಹ್ಮಣರಿಗೆ ಸ್ವಯಂಪಾಕವನ್ನು ದಾನ ಮಾಡಿ, ನಮಸ್ಕಾರವನ್ನು ಮಾಡಿ.

ಕುಂಭ ರಾಶಿ

 

 

 

ತೀರ್ಥಯಾತ್ರೆ ದರ್ಶನ ಮಾಡುವ ಶುಭಯೋಗ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಸ್ಥಿರಾಸ್ತಿ ಸಂಪಾದನೆ ಹೆಚ್ಚಾಗುತ್ತದೆ, ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ, ವಿದ್ಯಾರ್ಥಿಗಳಲ್ಲಿ ದ್ರವ್ಯಲಾಭ, ಮಿತ್ರರಲ್ಲಿ ಸ್ನೇಹ ವೃದ್ಧಿಯಾಗಲಿದೆ .

ಪರಿಹಾರ:“ಓಂ ನಮೋ ನಾರಾಯಣಾಯ ನಮಃ” ಈ ಮಂತ್ರವನ್ನು 48 ಬಾರಿ ಜಪಿಸಿ ,ವೃದ್ಧ ದಂಪತಿಗಳಿಗೆ ನಮಸ್ಕರಿಸಿ ಆಶೀರ್ವಾದವನ್ನು ಪಡೆಯಿರಿ.

ಮೀನ ರಾಶಿ 

 

 

 

ಮಾನಸಿಕ ವ್ಯಾಧಿ, ಪರರಿಂದ ಸಹಾಯ, ಯಾರನ್ನು ಹೆಚ್ಚಿಗೆ ನಂಬಬೇಡಿ, ಮಾತೃವಿನಿಂದ ಸಹಾಯ, ಕ್ರಯ ವಿಕ್ರಯಗಳಲ್ಲಿ ಲಾಭ, ಕುಟುಂಬ ಸೌಖ್ಯ, ಮಾನಸಿಕ ನೆಮ್ಮದಿ.

ಪರಿಹಾರ:ಪ್ರತಿನಿತ್ಯ ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಭೇಟಿ ನೀಡಿ, ಮಂಗಳವಾರ ನಾಟಿ ತುಳಸಿಯನ್ನು ಅರ್ಪಿಸಿ, ದೀರ್ಘದಂಡ ನಮಸ್ಕಾರವನ್ನು ಮಾಡಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top