ಮನೋರಂಜನೆ

ಪತಿಯ ಜೊತೆ ಒಟ್ಟಿಗೆ ನಟಿಸಿದ್ದರು ಶೃತಿ ಹರಿಹರನ್- ಅಷ್ಟಕ್ಕೂ ಯಾರು ಈ ರಾಮ್ ಕುಮಾರ್?

ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ದೂರು ದಾಖಲಿಸಿದ್ದ ಶೃತಿ ಹರಿಹರನ್ ತಮ್ಮ ದೂರಿನ ಪತ್ರದಲ್ಲಿ ವೈಫ್ ಆಫ್ ರಾಮ್ ಕುಮಾರ್ ಎಂದು ನಮೂದಿಸಿದ್ದು ಈ ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ. ಶೃತಿ ಹರಿಹರನ್ ಇಲ್ಲಿಯವರೆಗೂ ತಮಗೆ ಮದುವೆಯಾಗಿರುವ ವಿಚಾರವನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಇದೀಗ ದಿಢೀರ್ ಅಂತಾ ದೂರಿನ ಪತ್ರದಲ್ಲಿ ರಾಮ್ ಕುಮಾರ್ ಪತ್ನಿ ಎಂದು ನಮೂದಿಸಿದ್ದಾರೆ. ಈ ಮೂಲಕ ಶೃತಿ ಮದುವೆಯಾಗಿದ್ದಾರೆ ಎನ್ನುವ ವಿಚಾರ ಜಾಹೀರಾಗಿದೆ.

2017ರಲ್ಲೇ ಈ ಬಗ್ಗೆ ಹಲವಾರು ಸುದ್ದಿಗಳು ಹರಿದಾಡಿದ್ದವು. ಆಗಲೂ ಶ್ರುತಿ ತನ್ನ ಮದುವೆ ಬಗ್ಗೆ ಎಂದೂ ಮಾತನಾಡಿರಲಿಲ್ಲ. ತಾನು ಮದುವೆಯಾಗುವ ಹುಡುಗನ ಬಗ್ಗೆ ಕಾಲ ಬಂದಾಗ ತಿಳಿಸುತ್ತೇನೆ ಎಂದಿದ್ದರು. ಈ ಹಿಂದೆ ಶೃತಿ ಸಹ ರಾಮ್ ಕುಮಾರ್ ಜತೆ ರಿಲೇಷನ್ ಶಿಪ್ ನಲ್ಲಿರುವುದಾಗಿ ಹೇಳಿಕೊಂಡಿದ್ದರು. ಆದರೆ ಎಲ್ಲಿಯೂ ತಾವು ಮದುವೆಯಾಗಿರುವುದಾಗಿ ಶೃತಿ ಹೇಳಿರಲಿಲ್ಲ.

ಶ್ರುತಿ ಹರಿಹರನ್ ರಾಮ್ ಕುಮಾರ್ ಜೊತೆಯಲ್ಲಿ ‘ಪ್ರೇಮ’ ಎಂಬ ವಿಡಿಯೋ ಹಾಡಿನಲ್ಲಿ ಅಭಿನಯ ಮಾಡಿದ್ದರು. ಚೆನೈ ನ ಸುತ್ತಾ ಮುತ್ತ ‘ಪ್ರೇಮ’ ವಿಡಿಯೋ ಸಾಂಗ್ ಚಿತ್ರೀಕರಣ ಮಾಡಿದ್ದು, ತೆಲುಗು ಹಾಗೂ ಕನ್ನಡದಲ್ಲಿ ವಿಡಿಯೋ ಹಾಡು ಮೂಡಿ ಬಂದಿತ್ತು.

ರಾಮ್ ಕುಮಾರ್ ಅವರು ಡ್ಯಾನ್ಸ್ ಮಾಸ್ಟರ್ ಆಗಿದ್ದು ಕೆಲವು ಮಲಯಾಳಂ ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ…ರಾಮ್ ಕುಮಾರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೃತ್ಯ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ. ರಾಮ್ ಕುಮಾರ್ ಕೇರಳದ ಪ್ರಸಿದ್ಧ ಕಲರಿ ಪಟ್ಟು ಎಂದು ತಿಳಿದು ಬಂದಿದೆ. ಹ್ಯಾಪಿ ನ್ಯೂ ಇಯರ್’ ಸಿನಿಮಾ ಬಿಡುಗಡೆಯಾದ ಬಳಿಕ ಶ್ರುತಿ ಅವರು ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾಗಿ ಸುದ್ದಿ ಇದೆ. ವೈಯಕ್ತಿಕ ಕಾರಣಗಳಿಂದ ಅವರ ಮದುವೆ ಸಾರ್ವಜನಿಕವಾಗಿ ತಿಳಿಸಿರಲಿಲ್ಲ ಎಂಬುದು ಅನೇಕರ ಅನಿಸಿಕೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top