ಸಿನಿಮಾ

ಬಿಗ್​ಬಾಸ್​ ಮನೆಯಿಂದ ಹೊರ ಹೋಗಲು 2ನೇ ವಾರವೂ 11 ಜನ ನಾಮಿನೇಟ್​.

ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡದ 6ನೇ ಸೀಸನ್’ಗೆ ಎಂಟ್ರಿ ಕೊಟ್ಟಿದ್ದ ಒಟ್ಟು 17 ಮಂದಿ ಪೈಕಿ ಈಗಾಗಲೇ ಅಧಿಕೃತವಾಗಿ ಮನೆಯ ಮೊದಲ ವಾರದ ಎಲಿಮಿನೇಷನ್ ಆಗಿದ್ದು ರಕ್ಷಿತಾ ರೈ ಎಲಿಮಿನೇಟ್ ಆಗಿದ್ದಾರೆ. ಅಂತೆಯೇ 2ನೇ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಬರೋಬ್ಬರಿ ಮತ್ತೆ ಹನ್ನೊಂದು ಮಂದಿ ನಾಮಿನೇಟ್ ಆಗುವ ಮೂಲಕ ಮೊದಲ ಕುತೂಹಲ ಕೆರಳಿಸಿದೆ.

 

 

ಹೃದಯದ ಚಿತ್ರ ಕೊಟ್ಟು ಅದಕ್ಕೆ ಚುಚ್ಚಿ ನಾಮಿನೇಶನ್ ಗೆ ಹೆಸರು ಸುಚಿಸಲು ಕೇಳಿಕೊಳ್ಳಲಾಗಿತ್ತು. ಸ್ಪರ್ಧಿಗಳು ಅವರವರ ಅಭಿಪ್ರಾಯ ಹೇಳಿಕೊಂಡರು. ಹೃದಯಕ್ಕೆ ಚುಚ್ಚುವ ನಾಮಿನೇಶನ್ ಪ್ರಕ್ರಿಯೆಯಲ್ಲಿ 8 ಜನ ನಾಮಿನೇಶನ್ ಗೆ ಗುರಿಯಾದರು. ರಶ್ಮಿ-7 ಮತ, ಸ್ನೇಹ-6 ಮತ, ಆದಂ-4 ಮತಗಳು, ರಾಕೇಶ್-3ಮತಗಳು, ಸೋನು-3 ಮತಗಳು, ಕವಿತಾ -2 ಮತಗಳು, ಅಕ್ಷತಾ-2 ಮತಗಳು, ಶಶಿ-2 ಮತಗಳು

ನಂತರ ಬಿಗ್​ಬಾಸ್ ಮನೆಯ ಕ್ಯಾಪ್ಟನ್ ರವಿ ಅವರಿಗೆ ವಿಶೇಷ ಜವಾಬ್ದಾರಿ ನೀಡಿದರು. ಸೋಮಾರಿತನ, ಮನೆಯ ಚಟುವಟಿಕೆಗಳಲ್ಲಿ ಕಡಿಮೆ ಭಾಗವಹಿಸುವಿಕೆ, ಟಾಸ್ಕ್‌ಗಳಲ್ಲಿ ಕಳಪೆ ಪ್ರದರ್ಶನ ಕಂಡು ಬಂದಲ್ಲಿ ಮೂರು ಮಂದಿಯನ್ನು ನೇರವಾಗಿ ನಾಮಿನೇಟ್ ಮಾಡಬಹುದು ಎಂಬ ವಿಶೇಷ ಜವಾಬ್ದಾರಿ ನೀಡಿದರು. ಈ ಮಾನದಂಡದ ಆದರದ ಮೇಲೆ ‘ರವಿ’ ಅವರಿಂದ ನಯನಾ, ರೀಮಾ ಮತ್ತು ಆ್ಯಂಡಿ ನೇರವಾಗಿ ನಾಮಿನೇಟ್ ಆದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top