ಭವಿಷ್ಯ

30 ಅಕ್ಟೋಬರ್ ರಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಲು ಮುಂದೆ ಓದಿ

ಮಂಗಳವಾರ, ೩೦ ಅಕ್ಟೋಬರ್ ೨೦೧೮
ಸೂರ್ಯೋದಯ : ೦೬:೩೫
ಸೂರ್ಯಾಸ್ತ : ೧೭:೩೩
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಆಶ್ವಯುಜ

ಪಕ್ಷ : ಕೃಷ್ಣ ಪಕ್ಷ
ತಿಥಿ : ಷಷ್ಠೀ – ೧೩:೦೮ ವರೆಗೆ
ನಕ್ಷತ್ರ : ಪುನರ್ವಸು – ೨೭:೫೧+ ವರೆಗೆ
ಯೋಗ : ಸಿದ್ದಿ – ೧೭:೧೬ ವರೆಗೆ
ಸೂರ್ಯ ರಾಶಿ : ತುಲಾ

ಅಭಿಜಿತ್ ಮುಹುರ್ತ:೧೧:೪೨ – ೧೨:೨೬
ಅಮೃತಕಾಲ : ೨೫:೩೫+ – ೨೭:೦೬+
ರಾಹು ಕಾಲ:೧೪:೪೯ – ೧೬:೧೧
ಗುಳಿಕ ಕಾಲ:೧೨:೦೪ – ೧೩:೨೬
ಯಮಗಂಡ:೦೯:೧೯ – ೧೦:೪೨

‘ಸಮಯವೇ ದುಡ್ಡು’ ಎಂದು ಅನುಭಾವಿಗಳು ಹೇಳುತ್ತಾರೆ. ನನ್ನ ಸಮಯ ಸರಿಯಿಲ್ಲ ಎಂದು ಪರಿತಪಿಸುತ್ತಾ ಕಾಲಹರಣ ಮಾಡದಿರಿ. ಯಾವುದಾದರೊಂದು ಸಕಾರಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ. ಆನಂದವನ್ನು ಹೊಂದಿ.

ನಿಮ್ಮ ಬಂಧುಬಳಗದವರಿಂದ ಮತ್ತು ಆತ್ಮೀಯ ಗೆಳೆಯರಿಂದ ಬೆಂಬಲ ಸಿಗುವುದು. ಆದರೆ ಎಲ್ಲರೊಡನೆ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳದಿರಿ. ಕೆಲವೊಂದು ವಿಷಯಗಳನ್ನು ಗೌಪ್ಯವಾಗಿ ಇಡುವುದು ಉತ್ತಮ.

ವಿನಾಕಾರಣ ಮನೆಯಲ್ಲಿ ಮನಸ್ತಾಪದ ಸಂದರ್ಭಗಳು ಎದುರಾಗುವ ಸಂದರ್ಭವಿರುತ್ತದೆ. ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಬೇಡಿ. ತಪ್ಪು ಮಾಡುವುದು ಮನುಜ ಸ್ವಭಾವ. ಅಂತಹ ವ್ಯಕ್ತಿಗಳನ್ನು ಕ್ಷ ಮಿಸಿಬಿಡಿ.

ನೀರಿನಂತೆ ಹಣ ಖರ್ಚಾಗುವುದು. ಆದಾಗ್ಯೂ ಅದರಿಂದ ಹೆಚ್ಚಿನ ಲಾಭವನ್ನು ಪಡೆಯುವಿರಿ. ಚಿತ್ತ ಚಾಂಚಲ್ಯ ಉಂಟಾಗುವ ಸಾಧ್ಯತೆ ಇದೆ. ಸುಬ್ರಮಣ್ಯ ಸ್ವಾಮಿಯ ಪ್ರಾರ್ಥನೆ ಮಾಡಿ.

 

ಷ್ಟಪಡುವ ಮನಸ್ಸಿದೆ. ಆದರೆ ಬೆಂಬಲಿಸಬೇಕಾದ ಗೆಳೆಯರು ಕೈಕೊಡುವ ಸಾಧ್ಯತೆ ಇರುತ್ತದೆ. ಆದರೆ ನಿಮ್ಮ ಆತ್ಮಬಲ ಮತ್ತು ನಿಮಗಿರುವ ದೈವಬಲದ ಮೇಲೆ ಎಲ್ಲಾ ಕಾರ್ಯವೂ ಸುಲಲಿತವಾಗುವುದು.

 

ಸಮಯ ಸಾಧಕರನ್ನು ಎಷ್ಟೆಂದು ದೂರ ಇಡುತ್ತೀರಿ? ಆದರೂ ನಿಮ್ಮ ತಾರ್ಕಿಕ ಹೆಜ್ಜೆಗಳು ಅವರಿಗೆ ಪಾಠವನ್ನು ಕಲಿಸುವುದು ಮತ್ತು ಅವರು ನಿಮ್ಮಿಂದ ದೂರ ಸರಿಯಲು ಸಹಕಾರಿಯಾಗುವುದು.

 

ನೀವು ಬಹು ಚಾಣಾಕ್ಷ ರು. ಅಂತೆಯೇ ನಿಮ್ಮ ತಾರ್ಕಿಕ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡರೆ ಧನಲಾಭ ತಾನೇ ತಾನಾಗಿ ಬರುವುದು. ಮಕ್ಕಳು ನಿಮ್ಮ ವಿಷಯದ ಬಗ್ಗೆ ಅಸಡ್ಡೆ ತೋರುವ ಸಾಧ್ಯತೆ ಇದೆ. ಶಿವನ ಆರಾಧನೆ ಮಾಡಿ.

 

ಅಪಮಾನ ಮಾಡುವ ಜನರನ್ನು ಅಸಮಾಧಾನ ತೋರದೆ ಉಪೇಕ್ಷಿಸಿರಿ. ಧೈರ್ಯಂ ಸರ್ವತ್ರ ಸಾಧನಂ. ಅಪಮಾನವಾದರೆ ಒಳ್ಳೆಯದು ಎಂದು ದಾಸರು ಹಾಡಿದ್ದಾರೆ. ಇದರಿಂದ ನಿಮಗೆ ಸತ್ಯದ ದಾರಿ ತಿಳಿಯುವುದು.

 

ತಾಳ್ಮೆಯೊಂದೇ ನಿಮ್ಮನ್ನು ರಕ್ಷಿಸುವ ವಜ್ರಾಯುಧವಾಗಿರುತ್ತದೆ. ಸಹೋದರ ಸಂಗಡ ಮನಸ್ತಾಪ, ಕಲಹಗಳು ಸಂಭವಿಸುವ ಸಂದರ್ಭವಿದೆ. ಆತ್ಮೀಯರ ಸಂಗಡ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡು, ತಾಳ್ಮೆಯಿಂದ ವರ್ತಿಸಿ. ಶುಭವಾಗುವುದು.

ನಿಮಗೆ ಕಾಲ ಕಾಲಕ್ಕೆ ಹಿರಿಯರಿಂದ ಸೂಕ್ತ ಮಾರ್ಗದರ್ಶನ ಸಿಗುವುದರಿಂದ ನಿಮ್ಮ ಮನೋಕಾಮನೆಗಳನ್ನು ಪೂರೈಸಿಕೊಳ್ಳಲು ಸಾಕಷ್ಟು ಅವಕಾಶಗಳು ದೊರೆಯುವವು. ಅಂತಹ ಸುಂದರ ಅವಕಾಶಗಳನ್ನು ಹಾಳು ಮಾಡಿಕೊಳ್ಳಬೇಡಿ.

 

ನಿಮ್ಮಿಂದ ನಿಮ್ಮ ಕುಟುಂಬದ ಜನರು ನಾಲ್ಕು ಒಳ್ಳೆಯ ಮಾತುಗಳನ್ನು ನಿರೀಕ್ಷಿಸಿರುತ್ತಾರೆ. ಆದರೆ ಎಲ್ಲಾ ವಿಷಯದಲ್ಲೂ ತಪ್ಪನ್ನು ಹುಡುಕುವ ನಿಮ್ಮ ಸ್ವಭಾವದಿಂದಾಗಿ ನಿಮ್ಮ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳುವಿರಿ. ಹಾಗಾಗದಂತೆ ಎಚ್ಚರ ವಹಿಸಿ.

ನೀವು ಬಯಸಿದ್ದು ನಿಮಗೆ ದಕ್ಕುವ ಸಂಭವವಿದೆ. ಇದಕ್ಕೆ ಗುರು ಹಿರಿಯರ ಆಶೀರ್ವಾದ ಕಾರಣ. ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹಾರ ಸಲ್ಲದು. ಆದಷ್ಟು ವಿಷ್ಣುಸಹಸ್ರನಾಮ ಪಾರಾಯಣ ಮಾಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top