fbpx
ಭವಿಷ್ಯ

ಬೆಳ್ಳಿಯಿಂದ ಮಾಡಿದ ಈ 5 ವಸ್ತುಗಳಿಗೆ ಧನವನ್ನು ಆಕರ್ಷಿಸುವ ಶಕ್ತಿ ಇದೆಯಂತೆ ಅದಕ್ಕೆ ತಪ್ಪದೆ ಈ ವಸ್ತುಗಳನ್ನೂ ಮನೆಗೆ ತಂದು ಕುಬೇರರಾಗಿ.

ಬೆಳ್ಳಿಯಿಂದ ಮಾಡಿದ ಈ 5 ವಸ್ತುಗಳು ಧನವನ್ನು ಆಕರ್ಷಿಸುವ ಶಕ್ತಿ ಇದೆ ಯಾವುವು ಆ 5 ವಸ್ತುಗಳು ? ಬನ್ನಿ ನೋಡೋಣ.
ನೀವು ನಿಮ್ಮ ಮನೆಗೆ ಈ 5 ಬೆಳ್ಳಿಯ ವಸ್ತುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ಕೊಂಡುಕೊಂಡು ಮನೆಗೆ ತಂದರೆ ನಿಮ್ಮ ಮನೆಯಲ್ಲಿ ಚಮತ್ಕಾರ ವಾದಂತಹ ಅದ್ಭುತ ನಡೆಯುತ್ತದೆ.ನಿಮ್ಮ ಮನೆಯಲ್ಲಿ ಸುಖ, ಸಮೃದ್ಧಿ ,ಶಾಂತಿ ನೆಲೆಸಬೇಕಾದರೆ ಬೆಳ್ಳಿಯಿಂದ ಮಾಡಿದ ಈ ಶುಭವಾದ ವಸ್ತುಗಳನ್ನು ತಂದು ಇಟ್ಟುಕೊಂಡರೆ ,ನೀವು ಅಪಾರವಾದ ಧನ ಸಂಪತ್ತಿನ ಒಡೆಯರಾಗಬಹುದು. ನೀವು ಈ 5 ಬೆಳ್ಳಿಯ ವಸ್ತುಗಳಲ್ಲಿ ಯಾವುದಾದರೂ ಒಂದನ್ನು ಮನೆಯಲ್ಲಿ ತಂದು ಇಡುವುದರಿಂದ ಯಾವುದೇ ರೀತಿಯ ದುರ್ಘಟನೆಗಳು, ಗ್ರಹ, ನಕ್ಷತ್ರದ ದುಷ್ಟ ಪ್ರಭಾವಗಳಿಂದ ರಕ್ಷಣೆ ಸಿಗುತ್ತದೆ.ದುಷ್ಟತೆಯಿಂದ ರಕ್ಷಿಸಿಕೊಳ್ಳಬಹುದು, ನಿಮ್ಮನ್ನು ನೀವು ಅವುಗಳಿಂದ ರಕ್ಷಿಸಿಕೊಳ್ಳಬಹುದು. ನಿಮ್ಮ ಮನೆಯಲ್ಲಿ ಬೆಳ್ಳಿಯ ಈ ಕೆಲವು ವಸ್ತುಗಳನ್ನು ಇಡುವುದರಿಂದ ನಿಮಗೆ ಶುಭವಾಗುತ್ತದೆ. ಬೆಳ್ಳಿಯ ಯಾವ ರೂಪದ ವಸ್ತುಗಳನ್ನು ಇಡಬಹುದು ? ಮತ್ತು ಎಲ್ಲಿ ಇಡಬೇಕು ? ಎಂಬುದನ್ನು ಈಗ ತಿಳಿದುಕೊಳ್ಳೋಣ ಬನ್ನಿ.

 

ಬೆಳ್ಳಿಯ ಒಂದು ಚೌಕಾಕಾರದ ತುಂಡು: ಬೆಳ್ಳಿಯ ಒಂದು ಚೌಕಾಕಾರದ ತುಂಡನ್ನು ಮನೆಯಲ್ಲಿ ಇರಿಸಿದರೆ ವೃತ್ತಿ ಮತ್ತು ವ್ಯಾಪಾರದಲ್ಲಿ ಪ್ರಗತಿಯಾಗುತ್ತದೆ . ಅಧಿಕವಾಗಿ ಧನಲಾಭ ಹೆಚ್ಚಾಗುತ್ತದೆ, ಲಕ್ಷ್ಮಿ ದೇವಿಯ ಕೃಪೆ ಕೂಡ ಅಧಿಕವಾಗಲಿದೆ , ಬೆಳ್ಳಿಯ ಒಂದು ಚೌಕಾಕಾರದ ತುಂಡನ್ನು ನೀವು ಹಣವನ್ನು ಇಡುವ ನಿಮ್ಮ ತಿಜೋರಿಯಲ್ಲಿ ಇಡಬಹುದು ಅಥವಾ ನೀವು ವಾಸ ಮಾಡುವ ಸ್ಥಳದಲ್ಲಿ ಇಡಬಹುದು.
ಬೆಳ್ಳಿಯಿಂದ ಮಾಡಿದ ಸರ:ಬೆಳ್ಳಿಯಿಂದ ಮಾಡಿದ ಸರವನ್ನು ಶುಕ್ಲ ಪಕ್ಷದ ದಿನಗಳಲ್ಲಿ ಸೋಮವಾರದ ದಿನ ಬೆಳಗ್ಗೆ ಬೆಳ್ಳಿಯ ಸರವನ್ನು ನೀವು ಧರಿಸಬೇಕು. ಆದರೆ ನಿಮ್ಮ ಪ್ರಥಮ ಭಾವ ಜನ್ಮ ಜಾತಕ ಜನ್ಮ ಕುಂಡಲಿಯ ಪ್ರಥಮ ಭಾವದಲ್ಲಿ ರಾಹು ಇದ್ದರೆ ಬೆಳ್ಳಿಯ ಸರವನ್ನು ನಿಮ್ಮ ಕುತ್ತಿಗೆಯಲ್ಲಿ ಹಾಕಿಕೊಳ್ಳುವುದರಿಂದ ಒಳ್ಳೆಯ ಉತ್ತಮವಾದ ಲಾಭವಾಗುತ್ತದೆ. ನಿಮ್ಮ ದುಃಖಗಳು ಕೂಡ ದೂರವಾಗುತ್ತವೆ.

 

ಬೆಳ್ಳಿಯ ಆನೆ:ಶಾಸ್ತ್ರಗಳ ಅನುಸಾರ ಬೆಳ್ಳಿಯ ಆನೆ ವ್ಯಾಪಾರದಲ್ಲಿ ನಿಮಗೆ ದುಪ್ಪಟ್ಟು ಲಾಭವನ್ನು ತಂದುಕೊಡುತ್ತದೆ. ಬೆಳ್ಳಿಯಿಂದ ಮಾಡಿದ ಆನೆಯನ್ನು ಅವಶ್ಯವಾಗಿ ನೀವು ಇಟ್ಟುಕೊಳ್ಳಬೇಕು. ಬೆಳ್ಳಿಯ ಆನೆಯನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮಹಾಲಕ್ಷ್ಮಿ ದೇವಿ ಪ್ರಸನ್ನಳಾಗುತ್ತಾಳೆ. ಇದರ ಜೊತೆಗೆ ಗಣೇಶನ ಕೃಪೆಯು ಕೂಡ ನಿಮಗೆ ಲಭಿಸುತ್ತದೆ.ಈ 2 ದೇವತೆಗಳಿಂದ ನಿಮಗೆ ಹಣ, ಧನ ಸಂಪತ್ತು, ಎಲ್ಲವೂ ಸಹ ಲಭಿಸುತ್ತದೆ.

 

 

 

ಬೆಳ್ಳಿಯಿಂದ ಮಾಡಿದ ಚಿಕ್ಕ ಡಬ್ಬ:ನಿಮ್ಮ ತಿಜೋರಿಯಲ್ಲಿ ಬೆಳ್ಳಿಯಿಂದ ಮಾಡಿದ ಡಬ್ಬದಲ್ಲಿ ನೀರನ್ನು ತುಂಬಿಸಿ ಇಟ್ಟುಕೊಳ್ಳಿ ಮತ್ತೆ ನೀರು ಹಿಂಗಿ ಬತ್ತಿ ಒಣಗಿ ಹೋದರೆ ಮತ್ತೆ ನೀರನ್ನು ತುಂಬಿಸಿ ಅಲ್ಲಿಯೇ ಅದೇ ಸ್ಥಳದಲ್ಲಿ ಇಡಿ.ಆದರೆ ಒಂದು ಮಾತನ್ನು ಗಮನದಲ್ಲಿರಿಸಿಕೊಳ್ಳಿ ನಿಮ್ಮ ಜನ್ಮ ಜಾತಕ ಅಥವಾ ಜನ್ಮ ಕುಂಡಲಿಯ ನಾಲ್ಕನೇ ಭಾವದಲ್ಲಿ ರಾಹು ಇದ್ದರೆ ಅದೇ ಬೆಳ್ಳಿಯ ಡಬ್ಬದಲ್ಲಿ ಸಕ್ಕರೆಯನ್ನು ಹಾಕಿ ಮನೆಯ ಹೊರಗೆ ಮಣ್ಣಿನಲ್ಲಿ ಹೂತು ಹಾಕಬೇಕು. ಈ ರೀತಿ ಮಾಡುವುದರಿಂದ ನಿಮಗೆ ಪರಿಣಾಮಗಳು ಒಳ್ಳೆಯದೇ ಆಗುತ್ತದೆ,ಉತ್ತಮ ಪರಿಣಾಮಗಳು ಸಿಗುತ್ತವೆ.

ಬೆಳ್ಳಿಯ ಲೋಟ:ಬೆಳ್ಳಿಯ ಲೋಟದಲ್ಲಿ ನೀರನ್ನು ಕುಡಿಯುವುದರಿಂದ ಒಳ್ಳೆಯದಾಗುತ್ತದೆ. ಯಾವ ವ್ಯಕ್ತಿಗಳು ಭಾವನಾತ್ಮಕ ಸಮಸ್ಯೆಗಳಲ್ಲಿ ಮುಳುಗಿರುತ್ತಾರೆ ಅಥವಾ ಅವರ ಜೀವನದಲ್ಲಿ ಭಾವನಾತ್ಮಕ ಸಮಸ್ಯೆಗಳು ಹೆಚ್ಚಾಗಿದ್ದರೆ ಅಂಥವರು ಈ ಬೆಳ್ಳಿಯ ಲೋಟದಲ್ಲಿ ನೀರು ಕುಡಿಯುವ ಪ್ರಯೋಗವನ್ನು ಸಮಾಧಾನವಾಗಿ ಮಾಡಬೇಕು. ಯಾವ ವ್ಯಕ್ತಿ ಬೆಳ್ಳಿಯ ಲೋಟದಲ್ಲಿ ನೀರನ್ನು ಕುಡಿಯುತ್ತಾರೋ, ಅಂಥವರ ಮನೆಯಲ್ಲಿ ಸಕಾರಾತ್ಮಕವಾದ ಪರಿಣಾಮಗಳು ಕಾಣಿಸುತ್ತವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top