ಸಮಾಚಾರ

ತಮ್ಮ ಮೇಲೆ ಕುಮಾರ ಬಂಗಾರಪ್ಪ ಮಾಡಿರುವ ಮೀಟೂ ಆರೋಪಕ್ಕೆ ಸಿಎಂ ಎಚ್​ಡಿಕೆ ಹೇಳಿದ್ದು ಇಷ್ಟು.

ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿಯಂತೆ ಎದ್ದಿರುವ #MeToo ಅಭಿಯಾನ ವಿವಾದದ ಕೇಂದ್ರ ಬಿಂದುವಾಗುತ್ತಿವೆ.ಈ ಮೀಟೂ ಅಭಿಯಾನ ಇದೀಗ ರಾಜಕೀಯ ರಂಗಕ್ಕೂ ಪ್ರವೇಶಿಸಲು ಬಿಜೆಪಿ ಮುಖಂಡ, ಶಾಸಕ ಕುಮಾರ್ ಬಂಗಾರಪ್ಪ ವೇದಿಕೆ ಹಾಕಿಕೊಟ್ಟಿದ್ದಾರೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರೇ ನೀವೂ ಕೂಡಾ ಮೀ ಟೂ ಅಭಿಯಾನದಲ್ಲಿ ಸಿಕ್ಕಿಹಾಕಿಕೊಳ್ಳುತ್ತೀರಿ ಎಚ್ಚರ ಎಂದು ಹೇಳುವ ಮೂಲಕ ಬಾಂಬ್ ಸಿಡಿಸಿದ್ದಾರೆ.

ಸಿಎಂ ತಿರುಗೇಟು:-
ಕುಮಾರ್ ಬಂಗಾರಪ್ಪ ಅವ್ರ ಹೇಳಿಕೆಗೆ ಉಡುಪಿಯಲ್ಲಿ ಮಾತನಾಡಿದ ಅವರು “ರಾಜಕೀಯ ವಿಚಾರ ಇದ್ದರೆ ಚರ್ಚೆ ಮಾಡೋಣ. ಚುನಾವಣೆ ಸಂದರ್ಭದಲ್ಲಿ ವೈಯಕ್ತಿಕ ವಿಚಾರದ ಬಗ್ಗೆ ಚರ್ಚೆ ಮಾಡುವುದಿಲ್ಲ. ಇದು ಕುಮಾರ ಬಂಗಾರಪ್ಪ ಅವರ ಕೀಳು ಅಭಿರುಚಿಯನ್ನು ತೋರಿಸುತ್ತದೆ. ಅವರ ಆರೋಪದ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ರಾಜಕೀಯ ವಿಚಾರ ಇದ್ದರೆ ಚರ್ಚೆ ಮಾಡೋಣ. ಅದನ್ನು ಬಿಟ್ಟು ವೈಯಕ್ತಿಕ ವಿಚಾರಗಳನ್ನು ಇಟ್ಟುಕೊಂಡು ರಾಜಕೀಯ ಮಾಡುವುದು ಬೇಡ” ಎಂದು ಶಾಸಕ ಕುಮಾರ ಬಂಗಾರಪ್ಪ ಅವರ ಮೀ ಟೂ ಎಚ್ಚರಿಕೆಗೆ ಸಿಎಂ ತಿರುಗೇಟು ನೀಡಿದರು.

ಬಂಗಾರಪ್ಪ ಹೇಳಿದ್ದು ಏನು?
ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು “ಹೆಸರು ರಾಧಿಕಾ ಕುಮಾರಸ್ವಾಮಿ ಅಂತ ಬಳಸಿಕೊಳ್ಳುತ್ತಿದ್ದಾರೆ, ಬರ್ತ್​​​ಡೇ ಮಾಡಿಕೊಂಡಿರುವ ಫೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡು ಪೋಸ್ ಕೊಟ್ಟಿದ್ದಾರೆ. ಮೀಟೂ ವಿಚಾರದಲ್ಲಿ ಮುಂದೊಂದು ದಿನ ರಾಧಿಕಾ ಕುಮಾರಸ್ವಾಮಿಯವರೇ ಮುಂದೆ ಬರಬಹುದು. ಹೀಗಾಗಿ ಯಾರಿಗೆ ಶೋಷಣೆಯಾಗಿದೆಯೋ ಅವರು ದೂರು ನೀಡಿದರೆ, ನೀವೂ ಕೂಡಾ ಮೀ ಟೂ ಆರೋಪದಡಿ ಸಿಲುಕಿಕೊಳ್ಳುತ್ತೀರಿ ,, ಅವರು ನಿಮ್ಮ ಕುಟುಂಬದವರಾದರೆ, ನೀವು ಅವರನ್ನು‌ ಸಾರ್ವಜನಿಕವಾಗಿ ಪರಿಚಯೀಸಿ” ಎಂದು ವಾಗ್ದಾಳಿ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top