ಮನೋರಂಜನೆ

ತಲೆಮರೆಸಿಕೊಂಡಿರುವ ವಿಜಿ ಪತ್ನಿ ನಾಗರತ್ನಗೆ ಡಿಸಿಪಿ ಅಣ್ಣಾಮಲೈ ಖಡಕ್ ವಾರ್ನಿಂಗ್.

ದುನಿಯಾ ವಿಜಿ ಎರಡನೇ ಪತ್ನಿ ಕೀರ್ತಿಗೌಡ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಪತ್ನಿ ನಾಗರತ್ನ ನಾಪತ್ತೆಯಾಗಿದ್ದಾರೆ. ಇವತ್ತಿಗೆ ಎರಡು ದಿನವಾದರೂ ನಾಗರತ್ನ ಪತ್ತೆಯಾಗದೇ ಇರೋದು ಗಿರಿನಗರ ಪೊಲೀಸರಿಗೆ ತಲೆನೋವಾಗಿದೆ. ಘಟನೆ ಸಂಬಂಧ ಸೆರೆಸಿಕ್ಕ ಸಿಸಿಟಿವಿ ವಿಡಿಯೋ ಆಧರಿಸಿ ಡಿಸಿಪಿ ಅಣ್ಣಾಮಲೈ ಅವರು ನಾಗರತ್ನ ಅವರನ್ನು ಬಂಧಿಸುವಂತೆ ಗಿರಿನಗರ ಇನ್ ಸ್ಪೆಕ್ಟರ್ ಕೊಟ್ರೇಶಿ ಅವರಿಗೆ ಸೂಚನೆ ನೀಡಿದ್ದಾರೆ.

“ಅವರಿಗಾಗಿ ಪೊಲೀಸರ ಶೋಧ ಕಾರ್ಯ ಮುಂದುವರೆದಿದೆ, ಕೀರ್ತಿಗೌಡ ಮೇಲೆ ಹಲ್ಲೆ ಮಾಡಿದ ಸಿಸಿಟಿವಿ ದೃಶ್ಯಗಳು ಬಿಡುಗಡೆಯಾದ ದಿನದಿಂದ ನಾಗರತ್ನ ನಾಪತ್ತೆಯಾಗಿದ್ದಾರೆ. ಹೀಗಾಗಿ ಒಂದು ವಾರದ ಒಳಗೆ ಉತ್ತರ ನೀಡಬೇಕೆಂದು ಸೂಚನೆ ನೀಡಿದ್ದೇವೆ” ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾ ಮಲೈ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹಲವು ವಿವಾದಗಳ ಮೂಲಕ ಸುದ್ದಿ ಆಗುತ್ತಿರುವ ದುನಿಯಾ ವಿಜಯ್ ಹಾಗೂ ಅವರ ಕುಟುಂಬಕ್ಕೆ ಎಚ್ಚರಿಕೆ ನೀಡಿರುವ ಅಣ್ಣಾಮಲೈ ಅವರು ಪರಸ್ಪರ ಕಿತ್ತಾಡಿಕೊಳ್ಳುವುದು ಬೇಡವೆಂದು ಎಚ್ಚರಿಕೆ ನೀಡಿದ್ದಾರೆ.ಎರಡು ಕುಟುಂಬಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಸಿಆರ್ ಪಿಸಿ ಕಲಂ 107 ನೋಟಿಸ್ ಜಾರಿ ಒಂದು ವಾರದೊಳಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top