fbpx
ದೇವರು

ಭಾರತದ ಮೊದಲ ದೇವಿ ದೇವಸ್ಥಾನ ಇಲ್ಲಿಗೆ ಹೋದ್ರೆ ಸಂತಾನ ಸಮಸ್ಯೆ , ಹಣ ಕಾಸಿನ ಸಮಸ್ಯೆ ದೂರ ಆಗುತ್ತೆ ಅನ್ನೋ ನಂಬಿಕೆ ಇದೆ

ಭಾರತದಲ್ಲಿರುವ ಅತೀ ಪುರಾತನವಾದ ಹಿಂದೂ ಧರ್ಮದ ಪ್ರಥಮ ದೇವಿ ದೇವಾಲಯ.

ನವರಾತ್ರಿ ದಿನಗಳ ಈ ಸಮಯದಲ್ಲಿ ನಮ್ಮ ಭಾರತದಲ್ಲಿರುವ ಹಿಂದೂ ಧರ್ಮದ ಪುರಾತನ , ಪ್ರಥಮ, ಪ್ರಸಿದ್ಧ ದೇವಿ ದೇವಾಲಯವು ಯಾವುದೆಂದು ತಿಳಿದುಕೊಳ್ಳೋಣ ಬನ್ನಿ.ದೇವಾಲಯಗಳನ್ನು ನಾವು ದಿನನಿತ್ಯ ನೋಡುತ್ತಲೇ ಇರುತ್ತೇವೆ. ಒಂದೊಂದು ದೇವಾಲಯವು ಸಹ ತನ್ನದೇ ಆದ ವಿಶೇಷತೆಗಳನ್ನು ಒಳಗೊಂಡಿವೆ.ಇವೆಲ್ಲವನ್ನು ನೋಡಿದರೆ ದೇವಾಲಯವು ಹೇಗೆ ಉಗಮವಾಯಿತು ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿಯೂ ಕಾಡುತ್ತದೆ.ಯಾರು ದೇವಾಲಯಗಳನ್ನು ನಿರ್ಮಾಣ ಮಾಡಬೇಕೆಂದು ಹೇಳಿದರು .ದೇವತೆಗಳ ಮೂರ್ತಿಯನ್ನು ಆರಾಧಿಸಬೇಕು ಎಂದು ಯಾರು ಹೇಳಿದರು ? ಎಂಬ ಪುರಾತನ ಶಾಸನಗಳ ಮೂಲಕ ಯಾವ ರಾಜರು ಯಾವ ಯಾವ ದೇವಾಲಯಗಳನ್ನು ಸ್ಥಾಪನೆ ಮಾಡಿದರು ಎಂಬುದನ್ನು ನಾವು ಜನರಿಂದ ಕೇಳುತ್ತೇವೆ ಮತ್ತು ನೋಡುತ್ತೇವೆ ಸಹ.

ಸಾಮಾನ್ಯವಾಗಿ ಶಿವನನ್ನು ಲಿಂಗ ಸ್ವರೂಪಿಯಾಗಿ ಪೂಜೆಗಳನ್ನು ಮಾಡುತ್ತಿದ್ದರು.ನಂತರ ಇತರೆ ದೇವತೆಗಳ ಮೂರ್ತಿಗಳು ಸಹ ಉಗಮ ಗೊಂಡವು.ಮೊಟ್ಟ ಮೊದಲು ದೇವಿಗೆ ದೇವಾಲಯವು ಎಲ್ಲಿ ನಿರ್ಮಾಣ ಮಾಡಿದರು.ಆ ದೇವಾಲಯ ಯಾವುದು ? ಎಂಬುದನ್ನು ತಿಳಿಯೋಣ.ಭಾರತದಲ್ಲಿ ಮೊಟ್ಟ ಮೊದಲ ದೇವಿ ದೇವಾಲಯ ಇರುವುದು ಬಿಹಾರ ರಾಜ್ಯದ ಕೈಮಾರ ಜಿಲ್ಲೆಯ ಕೌರಾದ ಮುಂಡೇಶ್ವರಿ ಬೆಟ್ಟದ ಮೇಲೆ.ಆ ಬೆಟ್ಟದ ಮೇಲೆ ಇರುವ ಪ್ರಸಿದ್ದವಾದ ದೇವಾಲಯದ ಹೆಸರು ಮುಂಡೇಶ್ವರಿ ದೇವಿ ದೇವಾಲಯವಿದೆ. ಇದೊಂದು ಪ್ರಸಿದ್ಧ ಹಿಂದೂ ದೇವಾಲಯ.ಈ ದೇವಾಲಯದ ಗರ್ಭಗುಡಿಯಲ್ಲಿ ಮಹಾ ಶಿವನು ತನ್ನ ಪತ್ನಿಯಾದ ಶಕ್ತಿಯೊಂದಿಗೆ ನೆಲೆಸಿದ್ದಾನೆ.ಇದು ಭಾರತದಲ್ಲಿರೋ ಅತ್ಯಂತ ಪುರಾತನವಾದ ಮೊದಲ ಹಿಂದೂ ಧರ್ಮದ ದೇವಿ ದೇವಾಲಯವೆಂದು ಖ್ಯಾತಿಯನ್ನು ಗಳಿಸಿದೆ.

 

 

 

ಈ ಪುರಾತನವಾದ ದೇವಿ ದೇವಾಲಯವನ್ನು ಬಿಹಾರದ ಧಾರ್ಮಿಕ ಸಂಘ ಮಂಡಳಿಯು 1915 ನೇ ಇಸವಿಯಲ್ಲಿ ತನ್ನ ಅಧೀನದಲ್ಲಿ ಇಟ್ಟುಕೊಂಡು ದೇವಸ್ಥಾನವನ್ನು ಸಂರಕ್ಷಣೆ ಮಾಡಿದೆ.ಮುಂಡೇಶ್ವರಿ ದೇವಿ ದೇವಾಲಯವು ಮುಂಡೇಶ್ವರಿ ಬೆಟ್ಟದ ಮೇಲೆ ಇದೆ.ಇದು ಸುಮಾರು 608 ಅಡಿ ಅಂದರೆ 185 ಮೀಟರ್ ಎತ್ತರದಲ್ಲಿದೆ.ಈ ಮುಂಡೇಶ್ವರಿ ಬೆಟ್ಟದ ಮೇಲೆ ಅನೇಕ ಪುರಾತತ್ವ ಶಾಸನಗಳನ್ನು ಕಾಣಬಹುದಾಗಿದೆ. ಈ ದೇವಾಲಯವು ಸುಮಾರು 107 ನೇ ಇಸವಿಯಲ್ಲಿ ನಿರ್ಮಾಣ ಮಾಡಿರಬಹುದೆಂದು ಲೆಕ್ಕಾಚಾರ ಹಾಕಲಾಗಿದೆ.ಈ ದೇವಾಲಯವನ್ನು ನಗರಾ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.

 

 

 

ಈ ದೇವಾಲಯದಲ್ಲಿ ದೇವಿ ದುರ್ಗಿಯ ಸ್ವರೂಪಿಯಾಗಿದ್ದು,ಹತ್ತು ಕೈಗಳನ್ನು ಹೊಂದಿದ್ದು,ಸಿಂಹದ ಮೇಲೆ ಕುಳಿತಿದ್ದು,ಮಹಿಷಾಸುರ ಮರ್ದಿನಿಯ ರೂಪದಲ್ಲಿ ಇಲ್ಲಿ ದೇವಿಯು ದರ್ಶನವನ್ನು ನೀಡುತ್ತಾಳೆ.ಇಲ್ಲಿ ಆಶ್ಚರ್ಯ ಏನೆಂದರೇ ಮಹಾಶಿವನು ಕೂಡ ನಾಲ್ಕು ಮುಖಗಳನ್ನು ಹೊಂದಿದ್ದಾನೆ.ಜೊತೆಗೆ ಅಪರೂಪದ ಅಷ್ಟಭುಜ ಆಕೃತಿಯನ್ನು ಹೊಂದಿದ್ದು. ಈ ದೇವಾಲಯವನ್ನು ಕಲ್ಲಿನಿಂದ ನಿರ್ಮಾಣ ಮಾಡಲಾಗಿದೆ.ಈ ಅದ್ಭುತವಾದ ದೇವಾಲಯವು ಬಿಹಾರದ ನಾಗರ ಎಂಬ ವಾಸ್ತು ಶಿಲ್ಪವನ್ನು ಹೊಂದಿದೆ.ಈ ದೇವಾಲಯವು ನಾಲ್ಕು ಬಾಗಗಳಲ್ಲಿಯೂ ಕಿಟಕಿಗಳನ್ನು ಬಾಗಿಲುಗಳನ್ನು ಹೊಂದಿದೆ.ದೇವಾಲಯದ ಗೋಪುರವು ಗಾಳಿಯಿಂದ ನಾಶ ಹೊಂದಿದ್ದರೂ ಕೂಡ ನವೀಕರಣದ ಭಾಗವಾಗಿ ಛಾವಣಿಗಳಿಂದ ನಿರ್ಮಾಣ ಮಾಡಲಾಗಿದೆ.ದೇವಾಲಯದ ಒಳ ಭಾಗದಲ್ಲಿ ಸೂಕ್ಷ್ಮವಾದ ಕೆತ್ತನೆಗಳಿಂದ ಕಂಗೊಳಿಸುತ್ತಿದೆ.

ದೇವಾಲಯದ ಬಾಗಿಲಿನಲ್ಲಿ ದ್ವಾರಪಾಲಕರು ಗಂಗಾ,ಯಮುನಾ, ಮತ್ತು ಅನೇಕ ಇತರೆ ದೇವತಾ ಮೂರ್ತಿಗಳು ಕೆತ್ತಿದ ಚಿತ್ರವನ್ನು ಇಲ್ಲಿ ಕಾಣಬಹುದಾಗಿದೆ.ದೇವಾಲಯದ ಗರ್ಭಗುಡಿಯಲ್ಲಿ ಮುಂಡೇಶ್ವರಿ ಮತ್ತು ಚತುರ್ಮುಖ ಶಿವನ ಲಿಂಗವಿದೆ.ಈ ದೇವಾಲಯದ ಮತ್ತೊಂದು ವಿಶೇಷವೆಂದರೆ ವಿಬ್ಬಿನ್ನ ಶೈಲಿಯ ಎರಡು ಪಾತ್ರೆಗಳನ್ನು ಕಾಣಬಹುದಾಗಿದೆ.ಈ ದೇವಾಲಯದ ಒಳಗೆ ಇನ್ನೂ ಕೆಲವು ಮೂರ್ತಿಗಳನ್ನು ಕಾಣಬಹುದಾಗಿದೆ ಅವು ಗಣೇಶ,ಸೂರ್ಯ,ವಿಷ್ಣು.ಇವು ಜನಪ್ರಿಯವಾದ ದೇವರ ಮೂರ್ತಿಗಳು. ಎಷ್ಟೇ ಶತಕಗಳು ಉರುಳಿದರೂ ಕೂಡ ಈ ದೇವಾಲಯದಲ್ಲಿ ಪೂಜೆಗಳು ನಡೆಯುತ್ತಲೇ ಇವೆ.ಆದ್ದರಿಂದಲೇ ಜಗತ್ತಿನಲ್ಲಿಯೇ ಈ ದೇವಾಲಯ ಅತೀ ಪ್ರಾಚೀನ ದೇವಾಲಯವೆನಿಸಿದೆ.ಈ ಹಿಂದೂ ದೇವಾಲಯದಲ್ಲಿ ರಾಮನವಮಿ, ಮಹಾಶಿವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.ಇಲ್ಲಿ ನವರಾತ್ರಿಯ ಸಮಯದಲ್ಲಿ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.ಈ ದೇವಾಲಯವು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಭಕ್ತರಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

ಬಿಹಾರ ರಾಜ್ಯದಲ್ಲಿರುವ ಮುಂಡೇಶ್ವರಿ ದೇವಿ ದೇವಾಲಯಕ್ಕೆ ಪಾಟ್ನಾ,ಗಯಾ, ವಾರಣಾಸಿಯಿಂದ ರಸ್ತೆಯ ಮೂಲಕ ತಲುಪಬಹುದು.ಮೊಹಾಲಿಯಾ ಬಹುಆ ರೈಲ್ವೇ ನಿಲ್ದಾಣ ಅತ್ಯಂತ ಸಮೀಪದಲ್ಲಿದ್ದು ರೈಲ್ವೇ ನಿಲ್ದಾಣ ಇಲ್ಲಿಂದ ಕೇವಲ 22 ಕಿಲೋಮೀಟರ್ ದೂರದಲ್ಲಿದೆ.ಈ ಮಹಿಮಾನ್ವಿತ ಮುಂಡೇಶ್ವರಿ ದೇವಿಯ ದೇವಾಲಯವಿದೆ.ವಾರಣಾಸಿಯ ಲಾಲ್ ಬಹದ್ದೂರ ಶಾಸ್ತ್ರಿ ಅಂತಾರಾಷ್ಟ್ರೀಯ ರೈಲ್ವೇ ನಿಲ್ದಾಣದಿಂದ ದೇವಾಲಯವು ಸುಮಾರು 143 ಕಿಲೋಮೀಟರ್ ದೂರದಲ್ಲಿದೆ.ಹಲವಾರು ಕಡೆಗಳಿಂದ ವಿಮಾನ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು ಮುಖ್ಯವಾಗಿ ದೆಹಲಿ,ಮುಂಬೈ, ಕೊಲ್ಕತ್ತಾದಿಂದ ವಿಮಾನಗಳು ಲಭ್ಯವಿದೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top