ಸಮಾಚಾರ

ಮುಖ್ಯಮಂತ್ರಿ HD ಕುಮಾರಸ್ವಾಮಿ ಮೇಲೂ Metoo ಬಾಂಬ್ ಸಿಡಿಸಿದ ಕುಮಾರ್ ಬಂಗಾರಪ್ಪ.

ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿಯಂತೆ ಎದ್ದಿರುವ #MeToo ಅಭಿಯಾನ ವಿವಾದದ ಕೇಂದ್ರ ಬಿಂದುವಾಗುತ್ತಿವೆ.ಈ ಮೀಟೂ ಅಭಿಯಾನ ಇದೀಗ ರಾಜಕೀಯ ರಂಗಕ್ಕೂ ಪ್ರವೇಶಿಸಲು ಬಿಜೆಪಿ ಮುಖಂಡ, ಶಾಸಕ ಕುಮಾರ್ ಬಂಗಾರಪ್ಪ ವೇದಿಕೆ ಹಾಕಿಕೊಟ್ಟಿದ್ದಾರೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರೇ ನೀವೂ ಕೂಡಾ ಮೀ ಟೂ ಅಭಿಯಾನದಲ್ಲಿ ಸಿಕ್ಕಿಹಾಕಿಕೊಳ್ಳುತ್ತೀರಿ ಎಚ್ಚರ ಎಂದು ಹೇಳುವ ಮೂಲಕ ಬಾಂಬ್ ಸಿಡಿಸಿದ್ದಾರೆ.

ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು “ಹೆಸರು ರಾಧಿಕಾ ಕುಮಾರಸ್ವಾಮಿ ಅಂತ ಬಳಸಿಕೊಳ್ಳುತ್ತಿದ್ದಾರೆ, ಬರ್ತ್​​​ಡೇ ಮಾಡಿಕೊಂಡಿರುವ ಫೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡು ಪೋಸ್ ಕೊಟ್ಟಿದ್ದಾರೆ. ಮೀಟೂ ವಿಚಾರದಲ್ಲಿ ಮುಂದೊಂದು ದಿನ ರಾಧಿಕಾ ಕುಮಾರಸ್ವಾಮಿಯವರೇ ಮುಂದೆ ಬರಬಹುದು. ಹೀಗಾಗಿ ಯಾರಿಗೆ ಶೋಷಣೆಯಾಗಿದೆಯೋ ಅವರು ದೂರು ನೀಡಿದರೆ, ನೀವೂ ಕೂಡಾ ಮೀ ಟೂ ಆರೋಪದಡಿ ಸಿಲುಕಿಕೊಳ್ಳುತ್ತೀರಿ ,, ಅವರು ನಿಮ್ಮ ಕುಟುಂಬದವರಾದರೆ, ನೀವು ಅವರನ್ನು‌ ಸಾರ್ವಜನಿಕವಾಗಿ ಪರಿಚಯೀಸಿ” ಎಂದು ವಾಗ್ದಾಳಿ ಮಾಡಿದ್ದಾರೆ.

ನನ್ನ ವೈಯಕ್ತಿಕ ವಿಚಾರಕ್ಕೆ ಬಂದಿದ್ದಕ್ಕೆ, ನಾನು ಅವರ ವೈಯಕ್ತಿಕ ವಿಚಾರ ಮಾತನಾಡುತ್ತಿರುವೆ ಎಂದು ಹೇಳಿರುವ ಅವರು ಸಿಎಂ ಕುಮಾರಸ್ವಾಮಿಯಿಂದ ಶೋಷಣೆಗೆ ಒಳಗಾದವರು ಅವರ ವಿರುದ್ಧ ಹೇಳಿಕೆ ನೀಡಲು ಶೀಘ್ರದಲ್ಲೇ ಮುಂದೆ ಬರುತ್ತಾರೆ. ಸದ್ಯದಲ್ಲೇ ಅವರು ಮೀಟೂ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳಲಿದ್ದಾರೆ ಎಂದು ಬಿಜೆಪಿ ನಾಯಕ ಕುಮಾರ್​ ಬಂಗಾರಪ್ಪ ಗಂಭೀರ ಆರೋಪ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top