ಮನೋರಂಜನೆ

‘ಲಕ್ಷ್ಮೀಬಾರಮ್ಮ’ ಖ್ಯಾತಿಯ ಚಿನ್ನು ಅಲಿಯಾಸ್ ರಶ್ಮಿ ಪ್ರಭಾಕರ್ ಜೀವನದ ದುರಂತ ಕಥೆ

ರಶ್ಮಿ ಪ್ರಭಾಕರ್ ಅವರು ಫೆಬ್ರವರಿ 16 ರಂದು ಕರ್ನಾಟಕದ ಹೊಸಕೋಟೆಯಲ್ಲಿ ಪ್ರಭಾಕರ್ ಮತ್ತು ರೇವತಿಯವರ ಮೊದಲ ಪುತ್ರಿಯಾಗಿ ಜನಿಸಿದರು. ರಶ್ಮಿ ತಮ್ಮ ಪದವಿಯನ್ನು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಮುಗಿಸಿ ನಂತರ ಅವರ ವೃತ್ತಿ ಜೀವನವನ್ನು ಕನ್ನಡ ಕಿರುತೆರೆ ಹಾಗು ಹಿರಿತೆರೆಯ ಮೂಲಕ ಶುರು ಮಾಡಿದ್ರು.ರಶ್ಮಿ ಪ್ರಭಾಕರ್ ಹೋಂಬಲೆ ಫಿಲ್ಮ್ಸ್ ನಿರ್ಮಿಸಿದ ಮಾಸ್ಟರ್ ಪೀಸ್ ಚಿತ್ರದಲ್ಲಿ ಯಶ್ ರವರ ಜೊತೆ ನಟಿಸಿದ್ದಾರೆ ,ಮೂಕಾ ಹಕ್ಕಿ, ಬಿಬಿ 5, ಮಧುಬಾಲಾ ಹಾಗೂ ಮಹಾಕಾವ್ಯ. ಚಿತ್ರಗಳಲ್ಲಿ ನಟಿಸಿದ್ದಾರೆ , ಅಷ್ಟೇ ಅಲ್ಲದೆ ಜನಪ್ರಿಯ ಧಾರಾವಾಹಿಗಳಾದ ಜೈ ಆಂಜನೇಯ, ಜೀವನಾ ಚೈತ್ರ, ಶುಭಾ ವಿವಾಹ ಮತ್ತು ಅರುಂಧತಿ ಯಲ್ಲೂ ನಟಿಸಿ ಸಾಕಷ್ಟು ಹೆಸರು ಮಾಡಿದವರು ರಶ್ಮಿ ಈಗ ಸಧ್ಯಕ್ಕೆ ಕನ್ನಡದ ತುಂಬಾ ಫೇಮಸ್ ಧಾರವಾಹಿ ಲಕ್ಷ್ಮಿ ಬಾರಮ್ಮ ದಲ್ಲಿ ಚಿನ್ನು ಪಾತ್ರಧಾರಿಯಾಗಿ ನಟನೆ ಮಾಡುತ್ತಿರುವ ರಶ್ಮಿ ಎಲ್ಲ ಪ್ರೇಕ್ಷಕರ ಫೇವರಿಟ್ ನಟಿ .

ಈ ಮುದ್ದು ಮುಖದ ಚೆಲುವೆಗ ಜೀವನದಲ್ಲಿ ನಡೆದಿತ್ತು ಒಂದು ನಡೆಯಬಾರದ ವಿಧಿ ಆಟ,ಒಂದು ಮಟ್ಟಿಗೆ ತನ್ನ ಜೀವನವನ್ನೇ ಹಾಳುಮಾಡಿ ಬಿಟ್ಟಿತ್ತು ಆ ಕಹಿ ಘಟನೆ .ಏನ್ ಆ ಘಟನೆ ಅಂತೀರಾ ,ಶಿವರಾತ್ರಿ ಹಬ್ಬವನ್ನು ಆಚರಣೆ ಮಾಡಿ ಸುಣ್ಣದ ಡಬ್ಬದ ಜೊತೆ ಸುಮ್ನೆ ಆಟವಾಡುವಾಗ ಸುಣ್ಣ ಇವರ ಎರಡು ಕಣ್ಣುಗಳಿಗೆ ಬಿತ್ತಂತೆ ತಕ್ಷಣ ಎರಡು ಕಣ್ಣುಗಳು ನೋವಲು ಶುರು ಆಯಿತಂತೆ ಕೊನೆಗೆ ರಶ್ಮಿ ತನ್ನ ಎರಡು ಕಣ್ಣುಗಳಿಂದ ಸುಣ್ಣ ಹೊರ ತೆಗೆದು ನೀರಿನಲ್ಲಿ ತೊಳೆದ್ರು ದುರದೃಷ್ಟವಶ ರಶ್ಮಿ ತನ್ನ ಎಡ ಕಣ್ಣನ್ನು ಪೂರ್ತಿಯಾಗಿ ಕಳೆದುಕೊಂಡುಬಿಟ್ಟರು .

 

 

 

ಆಗದ್ರೆ ಮತ್ತೆ ರಶ್ಮಿ ಹೇಗೆ ಧಾರವಾಹಿಯಲ್ಲಿ ನಟನೆ ಮಾಡುತಿದ್ದರೆ ಎಂದು ನೀವು ಕೇಳಬಹುದು ,ಈ ಘಟನೆ ನಡೆದು ವರ್ಷಗಳೇ ಕಳೆದಿದೆ ,ರಶ್ಮಿರವರ ಬಲ ಕಣ್ಣು ಚೆನ್ನಾಗಿ ಕಾಣುತ್ತೆ ,ತನ್ನ ಜೀವನದಲ್ಲಿ ಇಷ್ಟು ಕೆಟ್ಟ ಕಹಿ ಘಟನೆ ಆದ್ರೂ ಹೆದರಲಿಲ್ಲ ರಶ್ಮಿ ಪ್ರಭಾಕರ್ ,ತನ್ನ ಬಾಲ್ಯದ ಆಸೆ ಹಾಗು ಕನಸು ತಾನು ಒಳ್ಳೆಯ ನಟಿಯಾಗಿ ಈ ಸಮಾಜದಲ್ಲಿ ನಿಲ್ಲಬೇಕು ಅಂತ ಇದಕ್ಕೆ ಪ್ರೇರಣಿ ನಟಿ ಸೌಂದರ್ಯ , ಸೌಂದರ್ಯ ರಶ್ಮಿಯವರ ಸಂಬಂಧಿಯಂತೆ ಅವರ ನಟನೆಯನ್ನು ನೋಡುತ ಬೆಳೆದ ರಶ್ಮಿ ಯವರಿಗೆ ತಾನು ಒಬ್ಬ ಒಳ್ಳೆಯಾಗಿ ನಟಿಯಬೇಕು ಎಂದು ಕನಸು ಕಾಣಲು ಕಾರಣವಂತೆ .ಅದಕ್ಕಾಗಿ ಹುಟ್ಟಿದ ಊರನ್ನು ಬಿಟ್ಟು ಬೆಂಗಳೂರಿಗೆ ಬಂದು ಮೊದಲು ಒಂದು ನ್ಯೂಸ್ ಚಾನೆಲ್ಗೆ ಕೆಲಸಕ್ಕೆ ಸೇರಿದರಂತೆ ನಂತರ ಇವರಿಗೆ ಧಾರಾವಾಹಿಯಲ್ಲಿ ಅವಕಾಶಗಳು ಹುಡುಕಿ ಬಂದವಂತೆ ,ಕೆಲವರು ಇವರ ಎಡ ಕಣ್ಣು ಚಿಕ್ಕದಾಗಿ ಇರುವ ಕಾರಣದಿಂದ ಇವರಿಗೆ ಅವಕಾಶ ಕೊಡಲು ಹಿಂದೆ ಮುಂದೆ ನೋಡುತ್ತಿದ್ದರಂತೆ ಆದ್ರೂ ಛಲ ಬಿಡದ ರಶ್ಮಿ ಪ್ರಭಾಕರ್ ಒಂದಲ್ಲ ಒಂದು ದಿನ ನಾನು ಮುಖ್ಯ ನಾಯಕಿಯಾಗಿ ಮಾಡುತೀನಿ ಎಂದು ಅವರ ಮನಸಿನಲ್ಲಿ ಚಾಲೆಂಜ್ ಹಾಕಿಕೊಂಡರಂತೆ ಇಂದು ಅವರ ಮಾತಿನಂತೆ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಮುಖ್ಯ ಪಾತ್ರ ಮಾಡುತ್ತಿರುವುದಲ್ಲದೆ ಪ್ರೇಕ್ಷಕರ ಮನೆ ಮನೆ ಮಾತಾಗಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top