ಭವಿಷ್ಯ

ನಿಮ್ಮ ಮನೆಗೆ ದರಿದ್ರ ಬರುವುದಕ್ಕೆ ನೀವು ತಿಳಿದೋ ಅಥವಾ ತಿಳಿದೆನೋ ಮಾಡಿರೋ ಈ ತಪ್ಪುಗಳು ಕಾರಣ ಇರಬಹುದು ಒಂದ್ಸಲ ನೋಡ್ಕೊಳ್ಳಿ

ಮನೆಗೆ ದಾರಿದ್ರ್ಯತನ ಕಾಡುವ ಹಾಗೆ ಮಾಡುವ ಸಂಗತಿಗಳು ಯಾವುವು ಗೊತ್ತೇ ?
ದುಡ್ಡೇ ದೊಡ್ಡಪ್ಪ ಎಂದಿದ್ದಾರೆ ಹಿರಿಯರು. ದುಡ್ಡು ಇಲ್ಲದೆ ಹೋದರೆ ಯಾವ ಕೆಲಸವನ್ನು ಮಾಡುವುದಕ್ಕೆ ಆಗುವುದಿಲ್ಲ. ಯಾರಿಗೂ ಹೇಳುವುದಕ್ಕೆ ಆಗುವುದಿಲ್ಲ . ಕೆಲವೊಮ್ಮೆ ಮಾನವನ ಸಂಬಂಧಗಳು ಕೂಡ ಹಣವನ್ನು ಆಧರಿಸಿವೆ ಎಂದರೆ ತಪ್ಪಿಲ್ಲ. ಯಾಕೆಂದರೆ ದೂರದ ಸಂಬಂಧಗಳು ಹಣದ ಆಧಾರದ ಮೇಲೆ ಹತ್ತಿರ ಆಗುತ್ತವೆ. ಹತ್ತಿರದ ಸಂಬಂಧಗಳು ದೂರ ಆಗುವ ಸಾಧ್ಯತೆಗಳು ಕೂಡ ಸಾಕಷ್ಟು ಇರುತ್ತವೆ. ಈ ಹಣವನ್ನು ಆದರಿಸಿ ಕೆಲವೊಂದು ವಿಷಯಗಳು ನಡೆಯುತ್ತವೆ. ನಾವು ನಮ್ಮ ಜೀವನದಲ್ಲಿ ನೋಡುತ್ತಾ ಇರುತ್ತೇವೆ. ಹೀಗೆ ಯಾವುದೇ ಕೆಲಸ ಮಾಡಲು ಹಮ್ಮಿಕೊಳ್ಳಲು ಹಣ ಬೇಕೇಬೇಕು. ಹೀಗಾಗಿ ಹಣದ ಅಗತ್ಯ ಪ್ರತಿಯೊಬ್ಬರಿಗೂ ಇದೆ. ಇನ್ನೂ ಮನೆಯಲ್ಲಿ ಎಷ್ಟು ಸಂಪಾದನೆ ಮಾಡಿದರೂ ನೀರಿನಂತೆ ಹಣ ಖರ್ಚಾಗುತ್ತಿರುತ್ತದೆ. ಜೀವನದಲ್ಲಿ ಬೇಜಾರು ವಿರುಕ್ತಿ ಬರುವುದು ಸಹಜ.

ಬಂದ ಹಣ ಬಂದಂತೆ ನೀರಿನಂತೆ ಖರ್ಚಾಗುತ್ತಿತ್ತು, ಯಾರು ತಾನೆ ಏನು ಮಾಡುವುದಕ್ಕೆ ಆಗುತ್ತದೆ ? ಈ ಕೆಲವು ಎಚ್ಚರಿಕೆಗಳನ್ನು ತೆಗೆದುಕೊಂಡು ಈ ಉಪಾಯಗಳನ್ನು ಮಾಡುವುದರಿಂದ ಮನೆಯಲ್ಲಿ ಹಣದ ಉಳಿವನ್ನು ಮಾಡಿಕೊಳ್ಳಬಹುದು. ಅದು ಹೇಗೆ ಎಂದರೆ ಈ ಕೆಲವು ಉಪಾಯಗಳು ಹಾಗೂ ಪರಿಹಾರಗಳನ್ನು ನಾವು ಬಹು ಸುಲಭವಾಗಿ ಹಾಗೂ ಜಾಗರೂಕತೆಯಿಂದ ಈ ಕೆಲಸಗಳನ್ನು ಮಾಡಿ ನೋಡಿ ಮನೆಯಲ್ಲಿ ಧನ ಸಂಪತ್ತು ಸಮೃದ್ಧಿಯಾಗಿ ಉಳಿಯುವಂತೆ ಆಗುತ್ತದೆ. ಪ್ರತಿಯೊಂದು ಮನೆಯಲ್ಲೂ ತುಳಸಿ ಗಿಡ ಇರಬೇಕು. ಪ್ರಧಾನ ಬಾಗಿಲ ಮುಂದೆ ತುಳಸಿ ವೃಂದಾವನವನ್ನು ಮನೆಯಲ್ಲಿ ಇಟ್ಟುಕೊಂಡು ಪ್ರತಿದಿನ ಬೆಳಗ್ಗೆ ಹಾಗೂ ಸಾಯಂಕಾಲ ನೀರೆರೆದು ದೀಪಾರಾಧನೆ ಮಾಡಬೇಕು. ಹೀಗೆ ಪ್ರತಿದಿನ ತುಳಸಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಸಿರಿ, ಸಂಪತ್ತು ತಾಂಡವವಾಡುತ್ತದೆ. ಶ್ರೀ ಮಹಾಲಕ್ಷ್ಮಿ ದೇವಿಯ ಅನುಗ್ರಹವಾಗುತ್ತದೆ.

 

 

 

ಮನೆಯಲ್ಲಿ ನವಿಲಿನ ಗರಿಯನ್ನು ಇಟ್ಟುಕೊಳ್ಳಿ, ಇದರಿಂದ ಶ್ರೀ ಮಹಾಲಕ್ಷ್ಮಿಯ ಸಂಪೂರ್ಣ ಅನುಗ್ರಹ ಉಂಟಾಗುತ್ತದೆ. ಬಹಳಷ್ಟು ಜನರಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಕಸವನ್ನು ಗುಡಿಸುವ ಪೊರಕೆಯನ್ನು ಎಲ್ಲೆಂದರಲ್ಲಿ ಬಿಡುತ್ತಾರೆ. ಆದರೆ ಬೇರೆಯವರ ಕಣ್ಣಿಗೆ ಕಾಣದಂತೆ ಪೊರಕೆಯನ್ನು ಇಟ್ಟು ನೋಡಿ ನಿಮ್ಮ ಮನೆಯಲ್ಲಿ ದನದ ಹೊಳೆಯ ಉಂಟಾಗುತ್ತದೆ. ಹಾಗೆ ಕಸದ ಪರಕೆಯನ್ನು ಶ್ರೀ ಮಹಾಲಕ್ಷ್ಮಿಯ ಸ್ವರೂಪ ಎಂದು ಹೇಳಲಾಗುತ್ತದೆ.ಕೆಲವರು ಕಾಲಿನಿಂದ ಒದೆಯುತ್ತಾರೆ, ಪೊರಕೆಯನ್ನು ಎಲ್ಲೆಂದರಲ್ಲಿ ಹಾಕುವುದು ಕೂಡಾ ಉತ್ತಮವಲ್ಲ, ಇದರಿಂದ ದಾರಿದ್ರ್ಯ ಕಾಡುತ್ತದೆ ಎಂದು ಹೇಳಲಾಗುತ್ತದೆ.

ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಕೆಲವರಿಗೆ ಎಣ್ಣೆಯನ್ನು ಕೊಡುತ್ತೇವೆ ಅಥವಾ ನಮ್ಮವರು ಎಂದು ಬಂಧು ಬಾಂಧವರಿಗೆ ತಲೆಗೆ ಎಣ್ಣೆಯನ್ನು ಹಚ್ಚುತ್ತಾ ಇರುತ್ತೇವೆ. ಹೀಗೆ ಎಣ್ಣೆಯನ್ನು ಹಚ್ಚುತ್ತಿದ್ದರೂ ಕೂಡುತ್ತಿದ್ದರು ಕೂಡ ದಟ್ಟ ದರಿದ್ರ ಉಂಟಾಗುತ್ತದೆ. ಮನೆಯಲ್ಲಿ ದರಿದ್ರ ಲಕ್ಷ್ಮಿ ತಾಂಡವವಾಡುತ್ತದೆ ಎಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಧಾನ್ಯದ ಸಮೃದ್ಧಿಯ ಕೊರತೆ ಉಂಟಾಗುತ್ತದೆ. ಆದ್ದರಿಂದ ಈ ಎಚ್ಚರಿಕೆಯನ್ನು ತಪ್ಪದೆ ತೆಗೆದುಕೊಳ್ಳಬೇಕು.ಮನೆಯು ಪ್ರಶಾಂತ ವಾಗಿರಬೇಕು, ಶಾಂತಿಯಿಂದ ಕೂಡಿರಬೇಕು ಎಂದರೆ ಈ ಕೆಲವು ಉಪಾಯಗಳನ್ನು ತಪ್ಪದೇ ಮಾಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಶಾಂತಿ ನೆಮ್ಮದಿ ಧನ ,ಕನಕ, ಸಂಪತ್ತು ಕೂಡ ಮನೆಯಲ್ಲಿ ಉಂಟಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top