ಮನೋರಂಜನೆ

ಒಂದು ವೇಳೆ ಬಿಗ್‌ಬಾಸ್‌ ಮನೆಯೊಳಗೆ ರಕ್ಷಿತಾ ಹೋದರೆ ಏನಾಗುತ್ತೆ? ಪ್ರೇಮ್ ಹೇಳ್ತಾರೆ ಕೇಳಿ.

ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡದ 6ನೇ ಸೀಸನ್’ಗೆ ಎಂಟ್ರಿ ಕೊಟ್ಟಿದ್ದ ಒಟ್ಟು 17 ಮಂದಿ ಪೈಕಿ ಈಗಾಗಲೇ ಅಧಿಕೃತವಾಗಿ ಮನೆಯ ಮೊದಲ ವಾರದ ಎಲಿಮಿನೇಷನ್ ಆಗಿದ್ದು ರಕ್ಷಿತಾ ರೈ ಎಲಿಮಿನೇಟ್ ಆಗಿದ್ದಾರೆ. ಮನೆಯ ಒಳಗೆ ಇರುವ ಸ್ಪರ್ಧಿಗಳಿಗೆ ಆಗಾಗ ಪ್ರತಿ ಸ್ಪರ್ಧಿಗಳಿಂದಲೇ ಸರ್ಪ್ರೈಸ್ ನೀಡಲಾಗುತ್ತಿರುತ್ತೆ ಅಂತೆಯೇ ಈ ಬಾರಿಯ ‘ಬಿಗ್​ಬಾಸ್​’ ಮನೆಯ ಒಳಗಿರುವ ಎಲ್ಲರಿಗೂ ನಿರ್ದೇಶಕ ಪ್ರೇಮ್ ಹಾಗೂ ಶಿವರಾಜ್​ಕುಮಾರ್ ಮನೆ ಒಳಗೆ ಅತಿಥಿಗಳಾಗಿ ಎಂಟ್ರಿ ನೀಡಿ, ರಂಜಿಸಿದ್ದಾರೆ.

 

 

ಬಿಗ್ ಬಾಸ್ ಮನೆಯೊಳಗೆ ಹೋಗಿ ಬಂದ ಶಿವರಾಜ್ ಕುಮಾರ್ ಮತ್ತು ಪ್ರೇಮ್ ರನ್ನು ಅಭಿಪ್ರಾಯ ಹಂಚಿಕೊಳ್ಳಲು ಸುದೀಪ್ ವೇದಿಕೆ ಬಳಿಗೆ ಕರೆದರು. ಇಬ್ಪರು ಸ್ಟಾರ್​​​ಗಳು ನಗ್ತಾ ನಗ್ತಾ ಒಬ್ಬರ ಕಾಲೊಬ್ಬರು ಎಳೆದುಕೊಳ್ತಾ , ತಮಾಷೆ ಮಾಡ್ತಾ ಹರಟೆ ಹೊಡೆದದ್ದು ಕಣ್ಣಿಗೆ ಹಬ್ಬದಂತಿತ್ತು. ಇದೇ ಸಂದರ್ಭದಲ್ಲಿ ವಿಲನ್ ನಿರ್ಮಾಪಕ ಮನೋಹರ್, ನಟ ಶ್ರೀಕಾಂತ್ ಕೂಡ ವೇದಿಕೆಗೆ ಆಗಮಿಸಿದ್ದರು.

ನಂತರ ಪ್ರಶ್ನೆ ಕೇಳುತ್ತಾ ರಕ್ಷಿತಾ ಅವರನ್ನು ಮನೆಯೊಳಗೆ ಬಿಟ್ಟರೆ ಏನಾಗುತ್ತದೆ? ಎಂದು ಪ್ರೇಮ್ ಬಳಿ ಕೇಳಿದರು. ಇದಕ್ಕೆ ಪ್ರೇಮ್ ಕೊಟ್ಟ ಉತ್ತರ ಮಜವಾಗಿತ್ತು. ‘ರಕ್ಷಿತಾ ಮನೆಯೊಳಗೆ ಹೋದರೆ ಮುಗೀತು ಕತೆ, ಇರೋ ಬರೋ ಕ್ಯಾಮರಾಗಳನ್ನೆಲ್ಲಾ ಆಕೆ ಒಡೆದು ಹಾಕುತ್ತಾರೆ’ ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top