fbpx
ಸಮಾಚಾರ

ಈ ಪರ್ವತದಲ್ಲಿ ಜಗತ್ತಿನ ಯಾವುದೇ ಮಹಿಳೆಯರಿಗೆ ಪ್ರವೇಶವಿಲ್ಲ,ಅದರ ಹಿಂದಿರುವ ಕುತೂಹಲಕರ ಕಾರಣ ಏನ್ ಗೊತ್ತಾ

ಶಬರಿಮಲೆಯು ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶವನ್ನು ಅನಾದಿಕಾಲದಿಂದಲೂ ನಿಷೇಧಿಸಲಾಗಿದೆ . ಅದು ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಶಬರಿಮಲೆ ಮಹಿಳೆಯರ ಪ್ರವೇಶಕ್ಕೆ ಮುಂದಾದರು ಆದರೆ ಶಬರಿಮಲೆಯ ಮೂಲ ಮಹಿಳೆಯರು ಈ ಪ್ರಯತ್ನವನ್ನು ವಿಫಲಗೊಳಿಸಿದರು .ಶಬರಿಮಲೆಗೆ ಮಾತ್ರವಲ್ಲ ಈ ಒಂದು ಪರ್ವತಕ್ಕೆ ಹೆಣ್ಣು ಕಾಲಿಡುವಂತಿಲ್ಲ, ಹೆಣ್ಣು ಮಾತ್ರವಲ್ಲ ಹೆಣ್ಣು ಪ್ರಾಣಿಗಳಿಗೂ ಕೂಡ ಇಲ್ಲಿ ಪ್ರವೇಶವನ್ನು ನಿಷೇಧಿಸಲಾಗಿದೆ. ಹೌದು ಇಲ್ಲಿ ಒಂದು ಪರ್ವತವಿದೆ. ಅದಕ್ಕೆ ಜಗತ್ತಿನ ಯಾವುದೇ ಮಹಿಳೆಯರಿಗೆ ಪ್ರವೇಶವಿಲ್ಲ. ಕೇವಲ ಇಂದೂ ಮಹಿಳೆಯರಿಗೆ ಮಾತ್ರವಲ್ಲ, ಜಗತ್ತಿನ ಯಾವುದೇ ಧರ್ಮದ ಮಹಿಳೆಯರಿಗೆ ಇಲ್ಲಿ ಪ್ರವೇಶವಿಲ್ಲ ಎಂಬುದೇ ವಿಶೇಷ .ಅಷ್ಟಕ್ಕೂ ಯಾವುದು ಈ ಪರ್ವತ ? ಎಂಬುದು ಗೊತ್ತೇ ?

 

 

 

ಇದು ಗ್ರೀಕ್ ದೇಶದಲ್ಲಿರುವ ಪವಿತ್ರ ಮೌಂಟ್ ಎಂತಸ್ ಪರ್ವತ. ಇದು ಕ್ರಿಶ್ಚಿಯನ್ನರ ಪವಿತ್ರ ಪರ್ವತವಾಗಿದೆ. ಇಲ್ಲಿ ಕ್ರಿಶ್ಚಿಯನ್ ಸಂತರು ನೆಲೆಸಿದ್ದಾರೆ ಎಂದು ಇತಿಹಾಸವಿದೆ. ಕಳೆದ 1,000 ವರ್ಷಗಳಿಂದಲೂ ಈ ಪರ್ವತಕ್ಕೆ ಜಗತ್ತಿನ ಯಾವುದೇ ಮಹಿಳೆಯರ ಪ್ರವೇಶವನ್ನು ನಿರಾಕರಿಸಲಾಗಿದೆ. ಇದಕ್ಕೆ ಕಾರಣವನ್ನು ನೀಡಲಾಗಿದ್ದು ಕ್ರಿಶ್ಚಿಯನ್ ಸಂತರ ಬ್ರಹ್ಮಚರ್ಯ ಪಾಲನೆಗಾಗಿ ಇಲ್ಲಿ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಮಹಿಳೆಯರ ಪ್ರವೇಶ ನಿರಾಕರಣೆಯ ಕುರಿತು ಐತಿಹ್ಯವೊಂದು ಚಾಲ್ತಿಯಲ್ಲಿದ್ದು, ವರ್ಜಿನ್ ಮೇರಿ ಸಿಪ್ರೆಸ್ ಗೆ ಹೋಗುವ ವೇಳೆ ಗಾಳಿಯಲ್ಲಿ ಹಾರಿ ಮೌಂಟನ್ ಎಂತರ್ಸ್ ಪರ್ವತಕ್ಕೆ ಬರುತ್ತಾಳೆ.ಹಾಗಾಗಿ ಇಲ್ಲಿನ ಸೌಂದರ್ಯಕ್ಕೆ ಮಾರುಹೋಗಿ ಪರ್ವತವನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ತಮ್ಮ ಮಗನಲ್ಲಿ ಮನವಿ ಮಾಡಿಕೊಳ್ಳುತ್ತಾಳೆ.

ಮೌಂಟ್ ಅಂತಸ್ ಪರ್ವತದಲ್ಲಿ ನೆಲೆಸಿದ್ದ ಮೇರಿಯಿಂದಾಗಿ ಈ ಪ್ರದೇಶವನ್ನು ದಿ ಗಾರ್ಡನ್ ಆಫ್ ದಿ ಮದರ್ ಆಫ್ ಗಾಡ್ ಎಂದು ಕರೆಯಲಾಗುತ್ತದೆ.ಒಟ್ಟಾರೆಯಾಗಿ ಶಬರಿಮಲೆಗೆ ತೆರಳಲು ಬಯಸುತ್ತಿರುವ ಮಹಿಳೆಯರು ಈ ಪರ್ವತದ ಬಗ್ಗೆ ಒಮ್ಮೆ ತಿಳಿದುಕೊಳ್ಳಲೇಬೇಕು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top