ಸಮಾಚಾರ

ಸಿದ್ದು ಪುತ್ರನ ಸಾವಿನ ಬಗ್ಗೆ ರೆಡ್ಡಿ ನೀಡಿದ ಹೇಳಿಕೆಗೆ ಬಿಜೆಪಿ ನಾಯಕ ಸುರೇಶ್‌ಕುಮಾರ್‌ ಖಂಡನೆ.

ಮಾಜಿ ಸಿಎಂ ಸಿದ್ದರಾಮಯ್ಯರ ಪುತ್ರನ ಸಾವಿನ ಬಗ್ಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ನೀಡಿರುವ ಹೇಳಿಕೆಗೆ ಬಿಜೆಪಿ ನಾಯಕರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಜನಾರ್ದನ ರೆಡ್ಡಿ ಹೇಳಿಕೆೆಯನ್ನ ಹಲವು ನಾಯಕರು ಖಂಡಿಸಿದ್ದಾರೆ.. ಮಾಜಿ ಸಚಿವ, ಹಾಲಿ ಶಾಸಕ ಸುರೇಶ್‌ ಕುಮಾರ್‌ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ವಿರೋಧಿ ಬಣದ ನಾಯಕರ ಮಗನ ಸಾವೂ ಚುನಾವಣಾ ಸಂದರ್ಭದಲ್ಲಿ ಪ್ರಚಾರದ ಸರಕಾಗಿರುವುದು ಅತ್ಯಂತ ಅಮಾನವೀಯ. ಮಗನನ್ನು ಕಳೆದುಕೊಂಡ ಆ ಸಂಕಟ ಯಾರಿಗೂ ಬರದಿರಲಿ,.‌ ಮನುಷ್ಯತ್ವ ಕಳೆದುಕೊಳ್ಳದಿರೋಣ.,ಕರ್ನಾಟಕದ (ಚುನಾವಣಾ) ರಾಜಕೀಯದ ಸಂವಾದ ಇನ್ನಷ್ಟು ಕೆಳಮಟ್ಟಕ್ಕೆ ಇಳಿಯುವ ಮೊದಲು ಸಂಬಂಧಪಟ್ಟವರೆಲ್ಲರೂ ಎಚ್ಚರಗೊಳ್ಳುವುದು ಈ ಕ್ಷಣದ ಅಗತ್ಯ.‌ ಇಲ್ಲದಿದ್ದರೆ ಇನ್ನಷ್ಟು ಅಪಾಯಕರ ಪದಗಳ ವಿಜೃಂಭಣೆಯ ಕಾಣಲಿದ್ದೇವೆ!” ಎಂದು ಟ್ವೀಟ್ ಮಾಡುವ ಮೂಲಕ ರೆಡ್ಡಿ ಹೇಳಿಕೆಗೆ ಸುರೇಶ್ ಕುಮಾರ್ ಖಂಡನೆ ವ್ಯಕ್ತಪಡಿಸಿದ್ದಾರೆ.

ರೆಡ್ಡಿ ಹೇಳಿದ್ದು ಏನು?
ಸಿದ್ದರಾಮಯ್ಯ ನನಗೆ ಮಾಡಿದ ಮೋಸಕ್ಕೆ ದೇವರು ಅವರ ಮಗನನ್ನ ದೂರ ಮಾಡಿದ್ದಾನೆ. ಅನ್ಯಾಯವಾಗಿ ಜೈಲಿಗೆ ಕಳುಹಿಸಿದರು. ಪೊಲೀಸನ ಮಗ ಅಕ್ರಮ ಮಾಡಲು ಸಾಧ್ಯವಿಲ್ಲ’ ಎಂದು ಜನಾರ್ದನ ರೆಡ್ಡಿ ಹೇಳಿಕೆ ನೀಡಿದ್ದರು.

ಪ್ರತಿಕ್ರಿಯೆ ನೀಡಿದ್ದ ಸಿದ್ದು:
ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯ ‘ನನ್ನ ಮಗನ ಸಾವು ನನಗೆ ದೇವರು ಕೊಟ್ಟ ಶಿಕ್ಷೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ. ನಿಮ್ಮ ಪಾಪಗಳಿಗಾಗಿ ದೇವರು ನಿಮ್ಮ ಮಕ್ಕಳಿಗೆ ಶಿಕ್ಷೆ ನೀಡದಿರಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ’ ಎಂದು ಟ್ವೀಟ್ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top