ಮನೋರಂಜನೆ

ನಟ ಚೇತನ್​ ವಿರುದ್ಧ ಫಿಲಂ ಚೇಂಬರ್​ನಲ್ಲಿ ದೂರು ದಾಖಲು- ಏಕೆ ಗೊತ್ತಾ?

ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿಯಂತೆ ಎದ್ದಿರುವ #MeToo ಅಭಿಯಾನ ವಿವಾದದ ಕೇಂದ್ರ ಬಿಂದುವಾಗುತ್ತಿವೆ. ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪ ಸ್ಯಾಂಡಲ್‍ವುಡ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆರೋಪದ ಕುರಿತು ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆ ವಿಫಲವಾದ ಬೆನ್ನಲ್ಲೇ ಇಬ್ಬರೂ ಕಾನೂನಿನ ಮೊರೆ ಹೋಗಿದ್ದಾರೆ.. ಪ್ರಕರಣದಲ್ಲಿ ಶ್ರುತಿ ಹರಿಹರನ್ ಬೆನ್ನಿಗೆ ನಿಂತ ನಟ ಚೇತನ್‍ಗೆ ಇದೀಗ ಸಂಕಷ್ಟ ಶುರುವಾಗಿದ್ದು ವಾಣಿಜ್ಯ ಮಂಡಳಿಯಲ್ಲಿ ಅವ್ರ ವಿರುದ್ಧ ದೂರು ದಾಖಲಾಗಿದೆ.

ಅರ್ಜುನ್ ಸರ್ಜಾ ಅವ್ರ ಮ್ಯಾನೇಜರ್ ಶಿವಾರ್ಜುನ್ ಅವರು ಫಿಲಂ ಚೇಂಬರ್ ಗೆ ನಟ ಚೇತನ್ ವಿರುದ್ಧ ದೂರು ನೀಡಿದ್ದಾರೆ. ಚೇತನ್ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ಅಭಿನಯದ ‘ಪ್ರೇಮಬರಹ’ ಚಿತ್ರಕ್ಕೆ 10 ಲಕ್ಷ ರೂ. ಮುಂಗಡವಾಗಿ ಪಡೆದಿದ್ದರು. ಈಗ ಮುಂಗಡ ಹಣವನ್ನ ವಾಪಸ್ ಕೊಡದೇ ಚೇತನ್ ಸತಾಯಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅರ್ಜುನ್ ಸರ್ಜಾ ಅವರ ಮ್ಯಾನೇಜರ್ ಶಿವಾರ್ಜುನ್ ಈ ಹಣವನ್ನ ವಾಪಸ್ ಕೊಡಿಸುವಂತೆ ಫಿಲಂ ಚೇಂಬರ್ ಗೆ ದೂರು ಸಲ್ಲಿಸಿದ್ದಾರೆ.

ಫಿಲಂ ಚೇಂಬರ್ ಕಾರ್ಯದರ್ಶಿ ಬಾ.ಮಾ ಹರೀಶ್ ಶಿವಾರ್ಜುನ್ ನೀಡಿದ ದೂರು ಸ್ವೀಕರಿಸಿ​ ನಟ ಚೇತನ್ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಚೇತನ್​ ಬೀದರ್​ನಲ್ಲಿರುವುದಾಗಿ, ಇನ್ನೆರಡು ದಿನಗಳಲ್ಲಿ ಬೆಂಗಳೂರಿಗೆ ಬಂದು ಮಾತನಾಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top