fbpx
ಭವಿಷ್ಯ

ನಿಮ್ಮ ಮನೆಯಲ್ಲಿ ಲಕ್ಷ್ಮಿದೇವಿ ನೆಲೆಸಿ ನೀವು ಧನ ಸಂಪತ್ತಿನ ಒಡೆಯರಾಗಬೇಕಾದ್ರೆ ಹೀಗೆ ಮಾಡಿ

ಯಾವ ಮನೆಯಲ್ಲಿ ಈ ಸಮಯದಲ್ಲಿ ಕಸವನ್ನು ಗುಡಿಸುತ್ತಾರೋ, ಅವರು ಶ್ರೀಮಂತರಾಗುತ್ತಾರೆ, ಧನ ಸಂಪತ್ತಿನ ಒಡೆಯರಾಗುತ್ತಾರೆ.
ನಮಗೆ ಅರಿಯದೆ, ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳದೆ, ನಮ್ಮ ಅಜ್ಞಾನದಿಂದ ಕೆಲವೊಂದು ಬಾರಿ ನಾವು ತಪ್ಪುಗಳನ್ನು ಮಾಡಿಬಿಡುತ್ತೇವೆ. ನಂತರ ಆ ತಪ್ಪುಗಳಿಂದ ಕೆಲವು ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗುತ್ತದೆ.ಸಾಮಾನ್ಯವಾಗಿ ಮಹಿಳೆಯರು ಮನೆಯಲ್ಲಿ ಕಸ ಗುಡಿಸಲು ಯಾವಾಗ ಬೇಕೋ ಅವಾಗ ಆರಂಭಿಸುತ್ತಾರೆ. ಆದರೆ ಇದು ಅವರ ಕುಟುಂಬದ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು. ವಾಸ್ತುಶಾಸ್ತ್ರದ ಅನುಸಾರ ಕಸವನ್ನು ಗುಡಿಸಿದರೆ ನಿಮಗೆ ತುಂಬಾ ಹೆಚ್ಚಿನ ಲಾಭವಾಗುವುದು.

 

 

 

ಸಮಯಕ್ಕೆ ವಿರುದ್ಧವಾಗಿ ಕಸವನ್ನು ಗುಡಿಸಿದರೆ ನಿಮ್ಮ ಮನೆಯಲ್ಲಿ ಆರ್ಥಿಕ ನಷ್ಟಕ್ಕೆ ದಾರಿ ಮಾಡಿಕೊಟ್ಟ ಹಾಗೆ ಆಗುತ್ತದೆ. ನಮ್ಮ ಪೌರಾಣಿಕ ಶಾಸ್ತ್ರಗಳ ಅನುಸಾರ ಕಸ ಗುಡಿಸಲು ಸಹಾಯ ಸರಿಯಾದ ಸಮಯ ಹೇಳಿದ್ದಾರೆ. ಅದೇ ಸಮಯದಲ್ಲಿ ಕಸ ಗುಡಿಸಿದರು ಮಾತ್ರ ಲಕ್ಷ್ಮಿ ದೇವಿಯ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.ಮತ್ತು ಅಂತವರ ಮನೆಗೆ ಲಕ್ಷ್ಮೀ ದೇವಿಯ ಆಗಮನವಾಗುತ್ತದೆ. ಮತ್ತು ಮನೆಯಲ್ಲಿ ಧನ,ಸಿರಿ ಸಂಪತ್ತು ಅಭಿವೃದ್ದಿಯಾಗಿ ಸಮೃದ್ಧಿಯಾಗಿ ನೆಲೆಸುತ್ತದೆ. ಕಸ ಗುಡಿಸಲು ಶುಭ ಸಮಯ ಬೆಳಗ್ಗೆ 4 ಗಂಟೆಯಿಂದ 5 ಗಂಟೆಯ ಒಳಗಾಗಿ ಮನೆಯಲ್ಲಿ ಕಸವನ್ನು ಗುಡಿಸಿ ಸ್ವಚ್ಛಗೊಳಿಸಬೇಕು. ಈ ಸಮಯದಲ್ಲಿ ಧನಾತ್ಮಕ ಶಕ್ತಿ ನಿಮ್ಮ ಸುತ್ತ ಮುತ್ತಲು ಹೆಚ್ಚಾಗಿರುತ್ತದೆ ಮತ್ತು ಅದು ಬ್ರಹ್ಮ ಮುಹುರ್ತವಾಗಿದೆ, ಆದ್ದರಿಂದ ಈ ಸಮಯದಲ್ಲಿ ಕಸ ಗುಡಿಸಿದರೆ ನಿಮ್ಮ ಮನೆಯಲ್ಲಿರುವ ಎಲ್ಲಾ ಸಮಸ್ಯೆಗಳು ತೊಲಗಿ ಹೋಗಿ ದರಿದ್ರತೆಯು ನಿವಾರಣೆಯಾಗುತ್ತದೆ ಮತ್ತು ಇದರ ನಂತರದ ಸಮಯ ಮಾತೆ ಲಕ್ಷ್ಮಿ ದೇವಿಯ ಆಗಮನದ ಸಮಯವು ಆಗಿರುತ್ತದೆ. ಆದ್ದರಿಂದ ಮನೆಯು ಸ್ವಚ್ಛವಾಗಿದ್ದರೆ ಲಕ್ಷ್ಮಿ ದೇವಿಯು ಮನೆಗೆ ಖುಷಿಯಾಗಿ ಪ್ರವೇಶಿಸುತ್ತಾಳೆ.
ಯಾವ ಮಹಿಳೆ ಮತ್ತು ಪುರುಷರು ಈ ಸಮಯದಲ್ಲಿ ಮನೆಯಲ್ಲಿ ಕಸವನ್ನು ಗುಡಿಸುತ್ತರೋ ಆ ಮನೆಯಲ್ಲಿ ಲಕ್ಷ್ಮಿ ವಾಸವಾಗಿರುತ್ತಾಳೆ ಮತ್ತು ಎಂದಿಗೂ ಆ ಮನೆಯಲ್ಲಿ ಹಣದ ಕೊರತೆ ಅಥವಾ ಎದುರಾಗುವುದಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top