ಅರೋಗ್ಯ

ಮೆದುಳು ಚುರುಕಾಗ್ಬೇಕಾ ಹಾಗಾದ್ರೆ ದಿನಕ್ಕೊಂದು ಆಕ್ರೋಡು ತಿನ್ಬೇಕು ಅಷ್ಟೇ ಅಲ್ಲ ಈ 7 ಅದ್ಬುತ ಲಾಭ ಪಡ್ಕೋತೀರಾ.

ದಿನಕ್ಕೊಂದು ಆಕ್ರೋಡು ತಿನ್ನುತ್ತಿದ್ದರೆ ನಿಮ್ಮ ದೇಹದಲ್ಲಿ ಈ ಲಾಭಗಳನ್ನು ಕಂಡುಕೊಳ್ಳಬಹುದು .ಆಕ್ರೋಡುಗಳಲ್ಲಿ ಪ್ರೊಟೀನ್ , ಕೊಬ್ಬಿನ ಅಂಶ, ಫೈಬರ್ , ಆಂಟಿ ಆಕ್ಸಿಡೆಂಟ್ , ವಿಟಮಿನ್ ಹಾಗೂ ಖನಿಜಾಂಶಗಳು ಹೇರಳವಾಗಿವೆ ಮುಖ್ಯವಾಗಿ ಆಕ್ರೋಡುಗಳಲ್ಲಿ ಒಮೆಗಾ ೩ ಕೊಬ್ಬಿನಾಂಶಗಳು ಸಾಕಷ್ಟು ಪ್ರಮಾಣದಲ್ಲಿವೆ ದಿನಕ್ಕೆ ಒಂದು ಆಕ್ರೋಡು ತಿನ್ನಬೇಕು ಎಂದು ವೈದ್ಯರು ಏಕೆ ಹೇಳುತ್ತಾರೆ ತಿಳಿದುಕೊಳ್ಳೋಣ ಬನ್ನಿ .

 

 

 

ಮೆದುಳಿನ ಆರೋಗ್ಯವನ್ನು ವೃದ್ಧಿಸುತ್ತದೆ:ಆಕ್ರೋಡುಗಳಲ್ಲಿ ಒಮೆಗಾ ೩ ಕೊಬ್ಬಿನಾಂಶಗಳು ಹೇರಳವಾಗಿದೆ . ಆಕ್ರೋಡುಗಳಲ್ಲಿರುವ ಪಾಲಿಫಿನಾಲ್ ಎಂಬುವ ಆಂಟಿ ಆಕ್ಸಿಡೆಂಟ್ ಅಂಶಗಳು ಮೆದುಳಿನ ಯಾವುದೇ ಸಮಸ್ಯೆಗಳಿಗೂ ಪರಿಹಾರ ದೊರಕಿಸಿಕೊಡುತ್ತದೆ ಹಾಗೆ ವಯಸ್ಸಾದವರಲ್ಲಿ ಅತಿ ಹೆಚ್ಚಾಗಿ ಕಾಡುವ ಮರೆವಿನ ಸಮಸ್ಯೆಗೂ ಇದು ರಾಮಬಾಣ.

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ:ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು ಈ ಆರೋಗ್ಯಕರ ಬೀಜಗಳು ಉತ್ತಮ ಪ್ರಮಾಣದ ಪಾಲಿಫಿನಾಲ್ಗಳನ್ನು ಮತ್ತು ಫೈಟೊಕೆಮಿಕಲ್ಗಳನ್ನು ಹೊಂದಿರುತ್ತವೆ, ಅವುಗಳು ಸ್ತನ, ಕರುಳು ಮತ್ತು ವೃಷಣ ಕ್ಯಾನ್ಸರ್ ವಿರುದ್ಧ ರಕ್ಷಿಸುವ ಗುಣಗಳನ್ನು ಹೊಂದಿವೆ.

ಹೃದಯದ ಆರೋಗ್ಯ ಸುಧಾರಿಸುತ್ತದೆ:ಒಮೇಗಾ -3 ಕೊಬ್ಬಿನಾಮ್ಲಗಳು, ವಿಟಮಿನ್ ಇ, ಮೆಗ್ನೀಸಿಯಮ್ ಮತ್ತು ಫೋಲೇಟ್ಗಳನ್ನು ಹೊಂದಿರುತ್ತವೆ. ಈ ಎಲ್ಲಾ ಪೋಷಕಾಂಶಗಳು ನಿಮ್ಮ ಹೃದಯದ ಆರೋಗ್ಯಕ್ಕೆ ಒಳ್ಳೆಯದು.ಅಲ್ಲದೆ ವಾಲ್ನಟ್ಗಳಲ್ಲಿ ಹೃದಯ-ಆರೋಗ್ಯಕರ ಏಕವರ್ಧಿತ ಕೊಬ್ಬಿನ ಅಂಶವಿದ್ದು (Mono Saturated fattyAcids) ಇದು ‘ಉತ್ತಮ’ ಕೊಲೆಸ್ಟರಾಲ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಕಡಿಮೆ-ಸಾಂದ್ರತೆಯ ಲಿಪೊಪ್ರೋಟೀನ್ (LDL ಅಥವಾ ‘ಕೆಟ್ಟ’ ಕೊಲೆಸ್ಟರಾಲ್) ಮಟ್ಟವನ್ನು ಕಡಿಮೆ ಮಾಡುತ್ತದೆ.

ಮಧುಮೇಹ ನಿಯಂತ್ರಿಸುತ್ತದೆ:ಮಧುಮೇಹ ಹೊಂದಿರುವ ಜನರು ನಿಯಮಿತವಾಗಿ ವಾಲ್ನಟ್ಗಳನ್ನು ತಿನ್ನುವುದು ನಿಮ್ಮ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ, ಎಂಡೋಥೀಲಿಯಲ್ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ನಿಮ್ಮ ಹೃದಯದ ಅಪಾಯವನ್ನು ಕಡಿಮೆ ಮಾಡುತ್ತದೆ ಅಲ್ಲದೆ, ವಾಲ್ನಟ್ಗಳಲ್ಲಿ ಇರುವ ಪ್ರೋಟೀನ್ ಮತ್ತು ಫೈಬರ್ ತೂಕ ಕಡಿಮೆಯಾಗಲು ಸಹಾಯ ಮಾಡುತ್ತದೆ , ಸ್ಥೂಲಕಾಯತೆಯು ಮಧುಮೇಹಕ್ಕೆ ಸಂಬಂಧಿಸಿದ ತೊಂದರೆಗಳನ್ನು ಹೆಚ್ಚಿಸುತ್ತದೆ.

ತೂಕ ಕಡಿಮೆಯಾಗಲು ಸಹಾಯ ಮಾಡುತ್ತದೆ:ಆರೋಗ್ಯಕರ ಒಮೆಗಾ -6 ಮತ್ತು ಒಮೆಗಾ -9 ಕೊಬ್ಬಿನಾಮ್ಲ , ಆಲ್ಫಾ-ಲಿನೋಲೆನಿಕ್ ಅಂಶಗಳು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಮೂಳೆಯನ್ನು ಗಟ್ಟಿಗೊಳಿಸುತ್ತದೆ:ವಾಲ್ನಟ್ ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಶ್ರೀಮಂತವಾಗಿರುವುದರಿಂದ ಮೂಳೆಗಳ ಸವೆತವನ್ನು ತಡೆಗಟ್ಟಿ ಆಸ್ಟಿಯೊಪೊರೋಸಿಸ್ ವಿರುದ್ಧ ರಕ್ಷಿಸುತ್ತದೆ ಮೂಳೆ ಆರೋಗ್ಯವನ್ನು ಉತ್ತೇಜಿಸುವ ತಾಮ್ರ, ಮೆಗ್ನೀಸಿಯಮ್ ಮತ್ತು ಮ್ಯಾಂಗನೀಸ್ನಂಥ ಪ್ರಮುಖ ಖನಿಜಗಳನ್ನು ಹೊಂದಿರುತ್ತದೆ.

ಲಿವರ್ ಕಾಪಾಡುತ್ತದೆ:ವಾಲ್ನಟ್ ನಿಮ್ಮ ಯಕೃತ್ತಿನ ಆರೋಗ್ಯಕ್ಕೆ ಬಹಳ ಒಳ್ಳೆಯದು, ಅಮೈನೊ ಆಸಿಡ್ ಎಲ್-ಅರ್ಜಿನೈನ್ ಹೆಚ್ಚಿನ ಪ್ರಮಾಣದ ಅಮೋನಿಯವನ್ನು ಹೊರಗಟ್ಟಲು ಸಹಾಯ ಮಾಡುತ್ತದೆ.ವಾಲ್ನಟ್ಸ್ನಲ್ಲಿನ ಗ್ಲುಟಾಥಿಯೋನ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳ ಉತ್ತಮ ಪ್ರಮಾಣವು ನೈಸರ್ಗಿಕ ಯಕೃತ್ತು-ಶುದ್ಧೀಕರಣ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top