ಮನೋರಂಜನೆ

ಗುರುಪ್ರಸಾದ್ ಬಂಡವಾಳ ಬಯಲು ಮಾಡಿದ ಪತ್ನಿ- ಸ್ವಂತ ಮಗಳನ್ನೇ ಮಧ್ಯರಾತ್ರಿ ಹೊರಗಟ್ಟಿದ್ಯಾಕೆ ಗುರು?

ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ನಟಿಯರ ವಿರುದ್ಧ ಅಬ್ಬರಿಸಿ ಬೊಬ್ಬರಿದಿದ್ದ ಮಠ ಚಿತ್ರದ ನಿರ್ದೇಶಕ ಗುರುಪ್ರಸಾದ್ ವಿರುದ್ಧ ಸ್ವತಃ ಅವರ ಮಾಜಿ ಪತ್ನಿ ಆರತಿ ಅವ್ರೇ ಹರಿಹಾಯ್ದಿದ್ದಾರೆ.. ಮೀಟೂ ಅಭಿಯಾನದಲ್ಲಿ ತಮ್ಮ ನೋವುಗಳನ್ನ ಹೇಳಿಕೊಳ್ಳುತ್ತಿರುವ ಹೆಣ್ಣುಮಕ್ಕಳ ಬಗ್ಗೆ ಹಗುರವಾಗಿ ಗುರುಪ್ರಸಾದ್ ಮಾತನಾಡಿದ್ದ ಬಗ್ಗೆ ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿರುವ ಅವ್ರ ಪತ್ನಿ ಆರತಿ ಗುರು ಪ್ರಸಾದ್ ಬಗ್ಗೆ ಯಾರಿಗೂ ಗೊತ್ತಿಲ್ಲದ ವಿಚಾರಗಳನ್ನ ಹಂಚಿಕೊಂಡಿದ್ದಾರೆ.

ಗುರುಪ್ರಸಾದ್ ನೀಡಿದ ಪತಿವ್ರತೆ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಆರತಿಯವರು “ಅವರಿಗೂ ಸ್ವಂತ ಮಗಳಿದ್ದಾಳೆ,. ಎಲ್ಲಾ ಹೆಣ್ಣು ಮಕ್ಕಳು ಸರಿಯಿಲ್ಲ ಅಂತ ಒಬ್ಬ ಅಪ್ಪನಾಗಿ ಹೇಳೋದಕ್ಕೂ ಮುಂಚೆ ಚೆನ್ನಾಗಿ ಯೋಚನೆ ಮಾಡಬೇಕು.. ಈ ರೀತಿ ಹೇಳಿದ್ದಾರೆ ಅಂದ್ರೆ ಆತನಿಗೆ ಮಗಳ ಬಗ್ಗೆ ಯೋಚನೆಯಿಲ್ಲ ಅಂತ ಅರ್ಥ, ಅಪ್ಪನಾಗಿ ನಡೆದುಕೊಳ್ಳುತ್ತಿಲ್ಲ ಎಂದು ಅರ್ಥ”

ಆತ ತನ್ನ ಸ್ವಂತ 14 ವರ್ಷದ ಮಗಳನ್ನು ಹೆಂಡ್ತಿ ಸಮೇತ ಮಧ್ಯರಾತ್ರಿ ಆಚೆ ಹಾಕಿದ್ದರು. ಅಂದು ಯಾವುದೇ ರಗಳೆ ರಂಪ ಮಾಡದೇ ನನ್ನ ಮಗಳ ಜೊತೆ ಮನೆಯಿಂದ ಹೊರ ಬಂದಿದ್ದೇನೆ. ಇಂಥವರ ಬಾಯಿಂದ ಇವತ್ತು ‘ಹೆಣ್ಣು ಮಗು’ ಎಂಬ ಪದ ಬರುತ್ತಿದೆ. ಒಬ್ಬ ಅಪ್ಪನಾಗಿಯೂ ಗುರು ಅವರ ಜವಾಬ್ದಾರಿಯನ್ನು ನಿಭಾಯಿಸುತ್ತಿಲ್ಲ. ಅವರ ಮಗಳನ್ನು ಬಂದು ನೋಡುವುದಿಲ್ಲ..

“ತನ್ನ ಸ್ವಂತ ಮಗಳ ಮೇಲೆಯೇ ಕಾಳಜಿಯಿಲ್ಲದ ಗುರುಪ್ರಸಾದ್ ನಟಿಯರ ಸುರಕ್ಷತೆ, ಮತ್ತು ಪಾವಿತ್ರ್ಯತೆ ಬಗ್ಗೆ ಮಾತನಾಡುವುದು ನಾನು ಒಪ್ಪುವುದಿಲ್ಲ… ಯಾವುದೇ ವ್ಯಕ್ತಿ ಯಾರ ಬಗ್ಗೆಯೂ ಮಾತನಾಡಿದರೂ ಅದು ಒಪ್ಪುವಂತಹ ವಿಷಯವಲ್ಲ” ಎಂದು ಗುರುಪ್ರಸಾದ್ ಅವರ ಪತ್ನಿ ಆರತಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ಗುರುಪ್ರಸಾದ್ ಹೇಳಿದ್ದು ಏನು?
ಮೀಟೂ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡವರ ವಿರುದ್ಧ ತಮ್ಮ ಆಕ್ರೋಶವನ್ನು ಗುರುಪ್ರಸಾದ್ ಮಂಗಳವಾರ ಹೊರಹಾಕಿದ್ದರು. ಕೆಲ ನಟಿಯರು ಮೀಟೂ ಹೆಸರಿನಲ್ಲಿ ಇನ್ನೊಬ್ಬರ ಮೇಲೆ ಆರೋಪ ಮಾಡುತ್ತಾ, ತಾವು ಪತಿವ್ರತೆ ಅಂತ ತೋರಿಸಿಕೊಳ್ಳುವುದಕ್ಕೆ ಹೊರಟಿದ್ದಾರೆ. ತಮ್ಮ ಮದುವೆ ಹಾಗೂ ಗಂಡಂದಿರ ಹೆಸರನ್ನು ಮುಚ್ಚಿಟ್ಟು ವ್ಯವಹಾರ ಮಾಡಿಕೊಂಡು, ಈಗ ಮೀಟೂ ಅಂತಿದ್ದೀರಾಲ್ಲ ಯಾಕೆ,” ಎಂದು ಗುರು ಪ್ರಸಾದ್‌ ಪ್ರಶ್ನಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top