fbpx
ದೇವರು

ಕುಲದೇವತೆಯ ಪೂಜೆ ಮತ್ತು ಆರಾಧನೆ ಯಾಕೆ ಮಾಡಬೇಕು,ಯಾವ ಸಮಯದಲ್ಲಿ ಮಾಡಿದ್ರೆ ಶ್ರೇಷ್ಠ,ಇದ್ರಿಂದ ಆಗೋ ಲಾಭ ಏನ್ ಗೊತ್ತಾ

ಯಾವ ಸಮಯದಲ್ಲಿ ಪೂಜೆಯನ್ನು ? ಯಾವ ಎಲ್ಲಾ ನಿಯಮಗಳನ್ನು ಪಾಲನೆ ಮಾಡಬೇಕು ? ಕೆಲವರು ಬೆಳಗ್ಗೆ, ಮಧ್ಯಾಹ್ನ ,ಸಂಜೆ ಈ ರೀತಿ ಪೂಜೆಯನ್ನು ಮಾಡುತ್ತಾ ಇರುತ್ತಾರೆ. ಪ್ರಮುಖವಾಗಿ ನೋಡುವುದಾದರೆ ಗೋಧೂಳಿ ಲಗ್ನದಲ್ಲಿ ಮತ್ತು ಬ್ರಾಹ್ಮೀ ಲಗ್ನದಲ್ಲಿ ಪೂಜೆಯನ್ನು ಮಾಡಬೇಕು, ಶಿವನ ಆರಾಧನೆಯನ್ನು ಮಾಡಬೇಕು ಎಂದು ಹೇಳಲಾಗುತ್ತದೆ. ಆಗ ಅವರ ಇಷ್ಟಾರ್ಥಗಳು ಎಲ್ಲವೂ ಸಿದ್ಧಿಸುತ್ತದೆ ಎಂದು ಹೇಳುತ್ತಾರೆ. ಬನ್ನಿ ಇದರ ಬಗ್ಗೆ ತಿಳಿದುಕೊಳ್ಳೋಣ.

ಮನುಷ್ಯ ಎಂದ ಮೇಲೆ ದೈವ ಶಕ್ತಿಯಿಂದಲೇ ಈ ಭೂಮಿಯ ಮೇಲೆ ಜೀವನ ಮಾಡಬೇಕು. ಬೆಳಗ್ಗೆ ಹಾಸಿಗೆಯಿಂದ ಏಳುವುದರಿಂದ ಹಿಡಿದು ಕೂಡ ಭಗವಂತನ ನಾಮ ಸ್ಮರಣೆಯನ್ನು ಮಾಡು ಎಂದು ನಮ್ಮ ಧರ್ಮ ಹೇಳುತ್ತದೆ. ಹಾಸಿಗೆಯಿಂದ ಏಳುವಾಗ ನಿಮ್ಮ ಕೈ ನೋಡಿಕೊಂಡು ಈ ಮಂತ್ರವನ್ನು ಹೇಳಬೇಕು “ಕರಾಗ್ರೇ ವಸತೇ ಲಕ್ಷ್ಮೀ, ಕರಮಧ್ಯೇ ಸರಸ್ವತಿ, ಕರಮೂಲೆ ಸ್ಥಿತೆ ಗೌರಿ ,ಪ್ರಭಾತೆ ಕರದರ್ಶನಂ” ,ತನ್ನ ಕರದಲ್ಲಿ ತ್ರಿಶಕ್ತಿ ದೇವತೆಯನ್ನು ದರ್ಶನ ಮಾಡಿಕೊಂಡು ಹಾಸಿಗೆಯಿಂದ ಮೇಲೇಳು ಎಂದು ಹೇಳುತ್ತದೆ ನಮ್ಮ ಶಾಸ್ತ್ರ.ಆದರೆ ವ್ಯವಸ್ಥಿತವಾಗಿ ದೇವತಾ ಆರಾಧನೆ ಮಾಡುವುದು, ಮನುಷ್ಯನಾದ ಪ್ರತಿಯೊಬ್ಬರ ಕರ್ತವ್ಯವೂ ಹೌದು. ದೇವತಾ ಆರಾಧನೆ ಪೂಜೆ ಎನ್ನುವುದು ಕರ್ತವ್ಯವನ್ನು ಆದಷ್ಟು ಸೂರ್ಯೋದಯಕ್ಕೆ ಮಾಡುವ ಕೆಲಸವನ್ನು ಮಾಡಬೇಕು ಮತ್ತು ಸೂರ್ಯ ನಮಸ್ಕಾರವನ್ನು ಸಹ ಮಾಡಬೇಕು.

 

 

 

ಗೋಧೂಳಿ ಸಮಯದಲ್ಲಿ ಶಿವನ ಆರಾಧನೆ ಶ್ರೇಷ್ಠ .
ಗೋಧೂಳಿ ಸಮಯದಲ್ಲಿ ಶಿವನ ಆರಾಧನೆ ತುಂಬಾ ಶ್ರೇಷ್ಠ, ಯಾಕೆಂದರೆ ಶಿವನ ಸಹೋದರಿ ಮಹಾಲಕ್ಷ್ಮಿ. ಮಹಾಲಕ್ಷ್ಮಿ ದೇವಿಯ ಅನುಗ್ರಹ ನಮಗೆ ಬೇಕು. ಕಲಿಯುಗದಲ್ಲಿ ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಹಣ ಎನ್ನುವುದು ಬೇಕು. ಲಕ್ಷ್ಮಿ ದೇವಿಯ ಅನುಗ್ರಹ ಇಲ್ಲ ಎಂದರೆ ದರಿದ್ರತೆ ಎನ್ನುವುದು ತಾಂಡವವಾಡುತ್ತದೆ. ದರಿದ್ರತೆ ದೂರವಾಗಬೇಕು ಎಂದರೆ ಈ ಸಮಯದಲ್ಲಿ ವ್ಯವಸ್ಥಿತವಾಗಿ ಶಿವಾಲಯಕ್ಕೆ ಹೋಗಿ ನಮನವನ್ನು ಸಲ್ಲಿಸಬೇಕು ಅಥವಾ ಮನೆಯಲ್ಲಿ ಶಿವನ ಆರಾಧನೆಯನ್ನು ಮಾಡಬೇಕು. ಅದಕ್ಕೆ ತ್ರಿಕಾಲ ಶಿವಪೂಜೆ ಎಂದು ಸಹ ಹೇಳುತ್ತೇವೆ.ಪ್ರಾತಃಕಾಲದಲ್ಲಿ, ಮಧ್ಯಾಹ್ನದ ಕಾಲದಲ್ಲಿ , ಸಾಯಂಕಾಲದ ಕಾಲದಲ್ಲಿ ಶಿವ ಪೂಜೆಯನ್ನು ಯಾರು ಮಾಡುತ್ತಾರೋ ಅಂಥವರಿಗೆ ಮಹಾಲಕ್ಷ್ಮಿ ದೇವಿಯ ಅನುಗ್ರಹ ಎನ್ನುವುದು ಪ್ರಾಪ್ತಿಯಾಗುತ್ತದೆ.

ಎಲ್ಲರೂ ಪ್ರಾತಃ ಕಾಲದಲ್ಲಿ ನಿಮ್ಮ ನಿಮ್ಮ ಕುಲದೇವತೆಯರನ್ನು ಆರಾಧನೆ ಮಾಡಬೇಕು. ನಿಮ್ಮ ಮನೆಗೆ ನೀವೇ ಯಜಮಾನರು ನಾವು ಯಾಕೆ ಪೂಜೆ ಮಾಡಬೇಕು ? ಎಂದು ಅಂದುಕೊಳ್ಳುತ್ತಾರೆ. ಆದರೆ ಅದು ತಪ್ಪು. ಈ ಭೂಮಿಯ ಮೇಲೆ ನಾವು ಬಂದಿದ್ದೇವೆ ಎಂದರೆ ಅದಕ್ಕೆ ಕಾರಣ ನಮ್ಮ ಕುಲ ದೇವರು.ಕುಲ ದೇವರ ಅನುಗ್ರಹ ಈ ಭೂಮಿಯ ಮೇಲೆ ಜೀವನ ಮಾಡುವುದಕ್ಕೆ ನಮಗೆ ಬೇಕು. ಆದ್ದರಿಂದ ಪ್ರಾತಃ ಕಾಲದಲ್ಲಿ ಕುಲದೇವತೆಯ ಆರಾಧನೆ ಮಾಡಿ.
ಕೆಲವರು ಆಧ್ಯಾತ್ಮಿಕ ಚಿಂತಕರು, ಆಧ್ಯಾತ್ಮವನ್ನು ಅನುಸರಣೆ ಮಾಡುತ್ತಾರೆ.ಮಬೆಯಲ್ಲಿ ವಿಗ್ರಹ, ಸಾಲಿಗ್ರಾಮಗಳನ್ನು ಇಟ್ಟು ಪ್ರತಿನಿತ್ಯ ಅಭಿಷೇಕವನ್ನು ಮಾಡುತ್ತಾರೆ. ಜೊತೆಗೆ ತ್ರಿಕಾಲ ಸಂಧ್ಯಾ ವಂದನೆಯನ್ನು ಕೂಡ ಮಾಡುತ್ತಾರೆ. ಈ ರೀತಿ ವ್ಯವಸ್ಥಿತವಾಗಿ ನಿಯಮ ಬದ್ಧವಾಗಿ ಆಚರಣೆ ಮಾಡುತ್ತಾ ಬಂದಾಗ ಆ ದೈವಾನುಗ್ರಹ ನಿಮಗೆ ಪ್ರಾಪ್ತಿಯಾಗುತ್ತದೆ ಮತ್ತು ಕುಲದೇವರ ಅನುಗ್ರಹವು ಕೂಡ ಪ್ರಾಪ್ತಿಯಾಗಿ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top