fbpx
ಭವಿಷ್ಯ

ಋತುವಿಗೆ ಅನುಸಾರವಾಗಿ ಯಾವ ತಿಂಗಳು ಮದುವೆಯಾದರೆ ನಿಮ್ಮ ಜೀವನ ಹೇಗಿರುತ್ತೆ ತಿಳ್ಕೊಳ್ಳಿ .

ನೀವು ಯಾವ ತಿಂಗಳಿನಲ್ಲಿ ಮದುವೆಯಾದರೆ ನಿಮ್ಮ ಜೀವನ ಹೇಗಿರುತ್ತೆ ಎಂದು ತಿಳಿಯಲು ಇದನ್ನು ಒಮ್ಮೆ ಓದಿ.

 

 

 

ಮದುವೆಯಾಗಲು ನಮ್ಮ ಹಿರಿಯರು ಶಾಸ್ತ್ರ ಸಂಪ್ರದಾಯದ ಪ್ರಕಾರ  ಒಳ್ಳೆಯ  ಮುಹೂರ್ತ ಹಾಗೂ ಸಮಯವನ್ನು ನಿಗದಿ ಮಾದುತ್ತಾರೆ.ಯಾಕೆಂದರೆ ವೈವಾಹಿಕ ಜೀವನ ತುಂಬಾ ಚೆನ್ನಾಗಿರಬೇಕು ಹಾಗೂ ದಂಪತಿಗಳು ಸುಖವಾಗಿರಬೇಕು ಎಂಬ ದೃಷ್ಟಿಯಿಂದ ಹೀಗೆ ಮಾಡಲಾಗುತ್ತದೆ. ಆದರೆ ನಿಮ್ಮ ವೈವಾಹಿಕ ಜೀವನ ಹೇಗಿರುತ್ತದೆ ಎಂಬುದರ ಮೇಲೆ ನೀವು ಮದುವೆಯಾಗುವ ತಿಂಗಳು ಸಹ ಪರಿಣಾಮ ಬೀರುತ್ತದೆ.ಹೆಚ್ಚಾಗಿ ಜನರು ಮದುವೆಗಾಗಿ ಹತ್ತಿರ ಯಾವ ಮುಹೂರ್ತ ಇದೆ ಅದನ್ನೇ ನೋಡಿ ವಿವಾಹ ದಿನಾಂಕ ನಿರ್ಧಾರ ಮಾಡುತ್ತಾರೆ .ಆದರೆ ಹೀಗೆ ಅವಸರದಲ್ಲಿ ಮಾಡಿದ ವಿವಾಹ ಕೊನೆಗೆ ಬೇಗನೆ ಮುರಿದು ಬೀಳುವ ಸಾಧ್ಯತೆಯೂ ಇದೆ.ರಾಶಿ ಭವಿಷ್ಯದ ಅನುಸಾರ ಮದುವೆಯ ತಿಂಗಳು ವೈವಾಹಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ.ಇಲ್ಲಿ ಯಾವ ತಿಂಗಳು ಮದುವೆಯಾದವರ ಜೀವನ ಹೇಗಿರುತ್ತದೆ ಎಂಬುದು ಇಲ್ಲಿದೆ ನೋಡಿ

ಜನವರಿಯಿಂದ ಮಾರ್ಚ ತಿಂಗಳವರೆಗೆ:ಈ ತಿಂಗಳಿನಲ್ಲಿ  ಮದುವೆಯಾಗುವವರು ಹೆಚ್ಚಾಗಿ ಅವರ ಮನಸ್ಸು  ಭಾವೋದ್ವೇಗಕ್ಕೆ ಒಳಗೊಂಡು ಅಂತಹ ಜೀವನವನ್ನು ಇವರು ಸಾಗಿಸುತ್ತಾರೆ.ಅಲ್ಲದೆ ಒಬ್ಬರಿಗೊಬ್ಬರು ವಿಸ್ಮಯಕಾರಿಯಾಗಿ, ಅನಿರೀಕ್ಷಿತವಾಗಿ ಉಡುಗೊರೆಗಳನ್ನು  ನೀಡುತ್ತಿರುತ್ತಾರೆ.

ಮಾರ್ಚನಿಂದ ಏಪ್ರಿಲ್ ತಿಂಗಳಿನಲ್ಲಿ ಮದುವೆಯಾದರೆ:ಈ ತಿಂಗಳಿನಲ್ಲಿ ಮದುವೆಯಾಗುವ ಜೋಡಿಗಳು ಜೀವನದಲ್ಲಿ ರೋಮಾಂಚನಕಾರಿಯಾಗಿದ್ದು, ಉತ್ತಮ ಅಥವಾ ಕೆಟ್ಟ ಘಟನೆಗಳು ಹಾಗೂ ಹೊಸ ವಿಚಾರಗಳು ಆಗುತ್ತಿರುತ್ತವೆ.

ಏಪ್ರಿಲ್  ನಿಂದ ಮೇ  ತಿಂಗಿಳಿನವರೆಗೆ:ಈ ಸಮಯದಲ್ಲಿ ಮದುವೆಯಾದರೆ ತುಂಬಾ ರೋಮಾಂಚನಕಾರಿಯಾದ ಜೀವನ ಸಾಗಿಸುತ್ತಾರೆ.

ಮೇ  ನಿಂದ ಜೂನ್ ತಿಂಗಳಿನವರೆಗೆ:

 

 

 

ಈ ಸಮಯದಲ್ಲಿ ಮದುವೆಯಾದವರ ಸ್ವಭಾವ ಕೆಲವೊಮ್ಮೆ ವಿರುದ್ಧವಾಗಿರುವ ಸಾಧ್ಯತೆ ಕೂಡ ಇದೆ .

ಜೂನ್ ನಿಂದ ಜುಲೈ ತಿಂಗಳಿನೊಳಗೆ ಮದುವೆಯಾದರೆ:ಜೂನ್ ನಿಂದ ಜುಲೈ ಮಧ್ಯದಲ್ಲಿ ಮದುವೆಯಾಗುವ ಜೋಡಿಗಳು ಒಬ್ಬರಿಗೊಬ್ಬರು ತುಂಬಾನೆ ಆರೈಕೆ ಮಾಡುತ್ತಾರೆ.ಇವರು ತಮ್ಮ ಕುಟುಂಬ, ಸಂತೋಷ,ಮಕ್ಕಳು ಹಾಗೂ ಮುಂಬರುವ ಭವಿಷ್ಯಕ್ಕಾಗಿ ಆರ್ಥಿಕವಾಗಿ ಇನ್ನಷ್ಟು ಸದೃಢರಾಗಲು ಇಚ್ಛಿಸುತ್ತಾರೆ.

ಜುಲೈ ನಿಂದ ಸೆಪ್ಟೆಂಬರ್  ತಿಂಗಳಿನವರೆಗೆ:ಈ ಸಮಯದಲ್ಲಿ ಮದುವೆ ಆಗುವವರ  ಸಂಬಂಧ ತುಂಬಾ ಗಟ್ಟಿಯಾಗಿರುತ್ತದೆ. ಇವರು ಒಬ್ಬರಿಗೊಬ್ಬರು ಎಷ್ಟೊಂದು ಅನ್ಯೂನ್ಯವಾಗಿರುತ್ತಾರೆ ಎಂದರೆ ಅವರಿಗೆ ಏನು ಬೇಕು ಏನು ಬೇಡ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತಾರೆ.

ಸೆಪ್ಟೆಂಬರ್ ನಿಂದ ಅಕ್ಟೋಬರ್ ತಿಂಗಳಿನವರೆಗೆ:ಸೆಪ್ಟೆಂಬರ್ ನಿಂದ ಅಕ್ಟೋಬರ್ ನಡುವೆ ಮದುವೆಯಾಗುವ ಜೋಡಿಗಳು ತಮ್ಮ ಸಂಗಾತಿಯನ್ನು ತುಂಬಾನೇ ಪ್ರೀತಿ ಮಾಡುತ್ತಾರೆ.

ಅಕ್ಟೋಬರ್  ನಿಂದ ನವೆಂಬರ್ ತಿಂಗಿಳಿನವರೆಗೆ:ಈ ಸಮಯದಲ್ಲಿ ಮದುವೆಯಾದರೆ ಶಾರೀರಿಕ ಸಂಬಂಧ, ಹಣ,ಮತ್ತು ಮೋಸ ಎಲ್ಲವೂ ಹೆಚ್ಚಾಗಿ ಕಂಡುಬರುತ್ತದೆ. ಈ ತಿಂಗಳಿನಲ್ಲಿ ಮದುವೆಯಾಗುವ ಜೋಡಿಗಳು ಒಬ್ಬರಿಗೊಬ್ಬರು ಪ್ರೀತಿ ಮಾಡೋದೇ ಕಡಿಮೆ.ಇವರು ಹೆಚ್ಚಾಗಿ  ಜಗಳ ಮಾಡುತ್ತಿರುತ್ತಾರೆ.

ನವೆಂಬರ್ ನಿಂದ ಡಿಸೆಂಬರ್ ತಿಂಗಳಿನ ವರೆಗೆ:ಈ ತಿಂಗಳಿನಲ್ಲಿ ಮದುವೆಯಾಗುವವರು ಒಬ್ಬರಿಗೊಬ್ಬರು ತಕ್ಕ ದಂಪತಿಗಳಾಗಿರುತ್ತಾರೆ.ಇವರ ಜೀವನದಲ್ಲಿ ಏನೇ ಬಂದರು ಅದನ್ನು ಸಹನೆಯಿಂದ ಎದುರಿಸಿ ಇಬ್ಬರು ಅನ್ಯೂನ್ಯವಾಗಿ ಇರುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top