fbpx
ಸಮಾಚಾರ

ಸರ್ದಾರ್ ಪಟೇಲ್‌ರ ‘ಏಕತಾ ಪ್ರತಿಮೆ’ ಯಲ್ಲಿ ಕನ್ನಡ ಕಡೆಗಣನೆ- ಕನ್ನಡಿಗರ ಆಕ್ರೋಶ.

ಗುಜರಾತ್​ನ ನರ್ಮಾದ ನದಿ ತೀರದಲ್ಲಿ ನಿರ್ಮಾಣಗೊಂಡಿರುವ ಸರ್ದಾರ್​ ವಲ್ಲಭಭಾಯ್ ಪಟೇಲ್​ ಅವರ ಪ್ರತಿಮೆಯು ಇಂದು ಅನಾವರಣಗೊಂಡಿದೆ. ‘ಸ್ಟ್ಯಾಚು ಆಫ್ ಯುನಿಟಿ’ ಎಂದೇ ಕರೆಯಲ್ಪಟ್ಟ ಈ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಟಣೆ ಮಾಡಿದ್ದರು. ಇದು ವಿಶ್ವದ ಅತಿ ಎತ್ತರದ ಪ್ರತಿಮೆ ಆಗಲಿದ್ದು, ಎಲ್ಲರೂ ಹೆಮ್ಮೆ ಪಡುವಂತಾದ್ದಾಗಿದೆ.

ಆದರೆ ಇದೇ ‘ಏಕತಾ ಪ್ರತಿಮೆ’ ಇದೀಗ ಸ್ವಾಭಿಮಾನಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗುತ್ತಿದೆ.. ಏಕೆಂದರೆ ಪ್ರತಿಮೆಯ ಪ್ರವೇಶದ್ವಾರದ ಬಳಿ ಇರುವ ಬೋರ್ಡಿನಲ್ಲಿ ತಮಿಳು, ಹಿಂದಿ, ಉರ್ದು, ಬಂಗಾಳಿ , ಗುಜರಾತಿ ಭಾಷೆಗಳಲ್ಲಿ ‘ಏಕತಾ ಪ್ರತಿಮೆ’ ಎಂದು ಬರೆಯಲಾಗಿದೆ., ಆದರೆ ಕನ್ನಡ ಭಾಷೆಯನ್ನು ಬರೆದಿಲ್ಲ.. ಇಂಥಾ ಅತಿದೊಡ್ಡ ಪ್ರತಿಮೆಯಲ್ಲಿ ಕನ್ನಡವನ್ನು ಕಡೆಗಣನೆ ಮಾಡಿರುವುದರಿಂದ ಕನ್ನಡಿಗರು ಕೋಪಗೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ಹೊರಹಾಕುತ್ತಿದ್ದಾರೆ.

 

 

ಕನ್ನಡವಿಲ್ಲದೆ ಇದು ಐಕ್ಯತೆಯ ಪ್ರತಿಮೆಯಾಗಲು ಹೇಗೆ ಸಾಧ್ಯ? ಕನ್ನಡ ಭಾರತದ ಭಾಷೆಯಲ್ಲವಾ? ಕರ್ನಾಟಕ ಭಾರತದ ರಾಜ್ಯವಲ್ಲವಾ? ದೇಶದ ಬೊಕ್ಕಸಕ್ಕೆ ಅತಿ ಹೆಚ್ಚು ತೆರೆಗೆ ಕಟ್ಟು ಮೂರನೇ ರಾಜ್ಯವಾಗಿರುವ ಕರ್ನಾಟಕವನ್ನು ಏಕೆ ಕಡೆಗಣಿಸಲಾಗುತ್ತಿದೆ? ಕನ್ನಡವೇ ಇಲ್ಲದೆ ಇದು ಭಾರತದ ಒಗ್ಗಟ್ಟು ಅಂತ ತೋರಿಸೋಕೆ ಸಾಧ್ಯವೇ? ಸಮಾನ ಸ್ಥಾನ ಸಮಾನ ಗೌರವವಿಲ್ಲದೆ ಒಗ್ಗಟ್ಟು ಮೂಡುವುದು ಹೇಗೆ?

 

 

ಲಕ್ಷ ಕೋಟಿ ರೂಪಾಯಿ ತೆರಿಗೆ ಕರ್ನಾಟಕದಿಂದ ಸೇರಿಸಿ ಕೊಟ್ಟರೂ…ದೊಡ್ಡ ಪ್ರತಿಮೆಯಲ್ಲಿ ಕನ್ನಡವಿಲ್ಲ. ಭಾರತದ ಅಧಿಕೃತ ಭಾಷೆ #ಕನ್ನಡ. ಆ ಭಾಷೆ ಇಲ್ಲದ ಮೇಲೆ ಎಲ್ಲಿದೆ ಏಕತೆ ಎಲ್ಲಿಂದಾ ಬಂತು? ಎಂಬಂತ ಪ್ರಶ್ನೆಗಳು ಫೇಸ್ಬುಕ್ ಟ್ವಿಟರ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ..

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top