fbpx
ದೇವರು

ಈ ಮಹಿಮಯುತ ದೇವಸ್ಥಾನಕ್ಕೆ ಭೇಟಿ ಕೊಟ್ರೆ ಯಾವುದೇ ಆರೋಗ್ಯ ಸಮಸ್ಯೆ ಇದ್ರೂ ಪಟ್ ಅಂತ ಪರಿಹಾರವಾಗುತ್ತಂತೆ ಹಾಗೂ ಇಲ್ಲಿ ನಾಡಿ ಜ್ಯೋತಿಷ್ಯ ಕರೆಕ್ಟ್ ಆಗಿ ಹೇಳ್ತಾರಂತೆ,ತಪ್ಪದೆ ನೀವು ಒಂದ್ಸಲ ಭೇಟಿ ನೀಡಿ

ನಾಡಿ ಜ್ಯೋತಿಷ್ಯಕ್ಕೆ ಪ್ರಸಿದ್ಧಿ ಈ ಅದ್ಭುತವಾದ ದೇವಾಲಯ.
ತಮಿಳುನಾಡಿನ ತಂಜಾವೂರಿನಲ್ಲಿ ಇರುವ ವೈದೇಶ್ವರನ್ ದೇವಸ್ಥಾನ ಅತ್ಯಂತ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದಾಗಿದೆ. ತಾಂಜಾವೂರು ಪಟ್ಟಣದಲ್ಲಿ ಅತ್ಯಧಿಕವಾಗಿ ಭೇಟಿ ನೀಡುವ ದೇವಸ್ಥಾನವೆಂದರೆ ಅದು ಬೃಹದೀಶ್ವರ ದೇವಾಲಯ. ಈ ದೇವಾಲಯವನ್ನು ರಾಜರಾಜ ಚೋಳ ಮತ್ತು ಮಧ್ಯಮ ಯುಗದ ಚೋಳ ರಾಜನು 11ನೇ ಶತಮಾನದಲ್ಲಿ ನಿರ್ಮಾಣ ಮಾಡಿದನು ಎಂದು ಹೇಳಲಾಗುತ್ತದೆ.ಇಂತಹ ಅದ್ಭುತವಾದ ದೇವಾಲಯವನ್ನು 1987 ನೇ ವರ್ಷದಲ್ಲಿ ಯುನೆಸ್ಕೊ ವಿಶ್ವ ಪಾರಂಪರಿಕ ಪ್ರಾದೇಶಿಕ ತಾಣವಾಗಿ ಪ್ರಕಟಿಸಿದರು. ಇಂದೂ ಧರ್ಮದ ದೇವತಾ ಮೂರ್ತಿಯನ್ನು ಶಿವನು ಬೃಹದೀಶ್ವರ ರೂಪದಲ್ಲಿ ಪೂಜಿಸುತ್ತಾರೆ.

 

 

 

ತಾಂಜಾವೂರಿನ ಮತ್ತೊಂದು ಪ್ರಸಿದ್ಧವಾದ ಪ್ರದೇಶವೆಂದರೆ ಅದು ಮರಾಠ ಪ್ಯಾಲೆಸ್. ಈ ಮರಾಠ ಪ್ಯಾಲೇಸ್ ನ್ನು ಬೋಸ್ಲೇ ಕುಟುಂಬದ ತಂಜಾವೂರ್ ನಾಯಕ್ ಕಿಂಗ್ಡಮ್ ಆಳ್ವಿಕೆಯಲ್ಲಿ ನಿರ್ಮಿಸಲಾಗಿತ್ತು. ಈ ಪ್ಯಾಲೇಸ್ ಅನ್ನು 1674 ರಿಂದ 1855 ರವರೆಗೆ ಆ ಉಪದೇಶವನ್ನು ಆಳ್ವಿಕೆ ಮಾಡಿದ ಅರಮನೆಯಾಗಿತ್ತು.ಸರಸ್ವತಿ ಮಹಲ್ ಲೈಬ್ರರಿ ಪ್ಯಾಲೇಸ್ ನ ಪ್ರಯಾಂಗಣವಿದೆ .ಈ ಲೈಬ್ರರಿಯಲ್ಲಿ ಕೆಲವು ಗ್ರಂಥಗಳು ಹಾಗೂ ತಾಳೆ ಪಾತ್ರಗಳು ಇವೆ. ಅವುಗಳ ಮೇಲೆ ಬರೆದ 30 ಸಾವಿರಕ್ಕಿಂತ ಹೆಚ್ಚು ಭಾರತೀಯ ಮತ್ತು ಯುರೋಪಿಯನ್ ತಾಳೆ ಪತ್ರಗಳ ಶೇಖರಣೆ ಇದೆ.ಹಾಗೆಯೇ ರಾಜಭವನದ ಒಳಗೆ ರಾಜ ರಾಜ ಚೋಳನ ಗ್ಯಾಲರಿ ಕೂಡ ಇದೆ. ಗ್ಯಾಲರಿಯ ಒಳಗೆ 12 ನೇ ಶತಮಾನದ ಚಿತ್ರಗಳು ಇವೆ. ಇಂದೂ ಧರ್ಮದ ಪುರಾಣಗಳ ಪ್ರಕಾರ ತಂಜನ್ ಎಂಬ ರಾಕ್ಷಸನು ಈ ಪ್ರದೇಶದಲ್ಲಿ ಶಿವನ ಕೈಯಿಂದ ಮರಣ ಹೊಂದಿದನು ಎಂದು ಹೇಳಲಾಗುತ್ತದೆ.

ಆ ರಾಕ್ಷಸನ ಕೊನೆಯ ಆಸೆಯ ಮೇರೆಗೆ ಈ ಪಟ್ಟಣಕ್ಕೆ ಈ ಹೆಸರು ಬಂದಿತ್ತು ಎಂದು ಸ್ಥಳಪುರಾಣ ತಿಳಿಸುತ್ತದೆ.ತಾಂಜಾವೂರಿಗೆ ಆ ಹೆಸರು ಬರಲು ಮತ್ತೊಂದು ಕಾರಣ ಕೂಡ ಇದೆ. ಅದೇನೆಂದರೆ ತಾಂಜಾವೂರು ಎಂದರೆ ನದಿಗಳ ಮತ್ತು ಹಚ್ಚ ಹಸಿರಿನ ಫಲವತ್ತಾದ ಭೂಮಿ ಎಂಬ ಅರ್ಥ ಕೂಡ ಬರುತ್ತದೆ .ತಾಂಜಾವೂರನ್ನು ತಮಿಳುನಾಡಿನ ರೈಸ್ ಬೌಲ್ ಎಂದು ಕೂಡ ಕರೆಯಲಾಗುತ್ತದೆ. ತಂಜಾವೂರಿನ ಮೆಕ್ಕೆಜೋಳ, ಕೊಬ್ಬರಿ ಇನ್ನೂ ಹಲವಾರು ಬೆಳೆಗಳನ್ನು ಇಲ್ಲಿ ಬಳೆಯುತ್ತಾರೆ. ನಗರದಲ್ಲಿ ಇನ್ನೂ ಪ್ರಧಾನವಾದ ಆಕರ್ಷಣೆಗಳೆಂದರೆ ಸಂಗೀತ ಮಹಲ್, ಮನೋಹರ ಪೋರ್ಟ್ ,ಆರ್ಟ್ ಗ್ಯಾಲರಿ, ಶಿವಗಂಗಾ ದೇವಾಲಯ, ಸರಸ್ವತಿ ಮಹಲ್ ಲೈಬ್ರರಿ, ವಿಜಯನಗರದ ಕೋಟೆ ಹಾಗೆ ಇನ್ನೂ ಹಲವಾರು. ಚಿದಂಬರಂನಿಂದ ಸ್ವಲ್ಪ ದೂರದಲ್ಲಿ ಈ ದೇವಾಲಯವಿದೆ. ಅಲ್ಲಿ ಶಿವನನ್ನು ವೈದೇಶ್ವರನ್ ಎಂದು ಕರೆಯುತ್ತಾರೆ. ಸ್ವಾಮಿಯ ದರ್ಶನ ಮಾಡುವುದರಿಂದ ಬರುವ ರೋಗಗಳು ನಿವಾರಣೆಯಾಗುತ್ತವೆ ಎಂದು ನಂಬುತ್ತಾರೆ.ಶಿವನು ವೈದೀಶ್ವರನ ರೂಪದಲ್ಲಿ ನೆಲೆಸಿರುವುದರಿಂದ ಸ್ವಾಮಿಯನ್ನು ವೈದೇಶ್ವರನ್ ಎಂದು ಕರೆಯುತ್ತಾರೆ. ಈ ದೇವಾಲಯವನ್ನು ಅತ್ಯಂತ ಪುರಾತನವಾದದ್ದು ಅಂದರೆ 1600 ವರ್ಷಗಳ ಹಿಂದಿನದ್ದು, ಎಂದು ಗುರುತಿಸಲಾಗಿದೆ. ಈ ಗ್ರಾಮದಲ್ಲಿ ಸುಮಾರು 1200 ಪಂಡಿತರು ಅನುವಂಶೀಯವಾಗಿ ಸಂಗ್ರಹಿಸಿದ ತಾಳೆ ಪತ್ರ ಆಧಾರವಾಗಿ ನಾಡಿ ಜ್ಯೋತಿಷ್ಯ ಹೇಳುವುದರಲ್ಲಿ ಪ್ರಸಿದ್ಧರಾಗಿದ್ದಾರೆ.

 

 

 

ಈ ನಾಡಿ ಜ್ಯೋತಿಷ್ಯ ತಾಳೆ ಪತ್ರ ಗ್ರಂಥಗಳು ಇವೆ. ಈ ದೇವಾಲಯದ ಸುತ್ತಲೂ ನಾಡಿ ಜಾತಕ ಹೇಳುವವರು ಇರುತ್ತಾರೆ. ಇವರು ನಾಡಿ ಜಾತಕವನ್ನು ಹೇಳುವುದರಲ್ಲಿ ಅತ್ಯಂತ ಪರಿಣಿತರಾಗಿದ್ದು ಇನ್ನೂ ಅನೇಕ ಮಂದಿ ಜನರು ತಮ್ಮ ತಮ್ಮ ಭವಿಷ್ಯವನ್ನು ಹಾಗೂ ಜಾತಕವನ್ನು ತಿಳಿದುಕೊಳ್ಳಲು ಇಲ್ಲಿಗೆ ಭೇಟಿ ನೀಡುತ್ತಾರೆ. ತಂಜಾವೂರಿಗೆ ಭೇಟಿ ನೀಡಲು ಪ್ರಶಸ್ತವಾದ ಸಮಯವೆಂದರೆ ಅದು ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತಿಂಗಳ ಮಧ್ಯದಲ್ಲಿ. ಈ ಸಮಯದಲ್ಲಿ ವಾತಾವರಣವು ಹೆಚ್ಚು ಅನುಕೂಲವಾಗಿರುತ್ತದೆ. ಹೀಗಾಗಿ ಈ ಸಮಯದಲ್ಲಿ ಬರುವುದು ಅತ್ಯಂತ ಉತ್ತಮ ಎಂದು ಹೇಳುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top