ಮನೋರಂಜನೆ

ಹುಟ್ಟುವರ್ಷದ ಸಂಭ್ರಮದಲ್ಲಿರುವ ಜ್ಯೂನಿಯರ್ ಚಾಲೆಂಜಿಂಗ್ ಸ್ಟಾರ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ ತಂದೆಯ ಹಾದಿಯಲ್ಲೇ ಸಾಗುತ್ತಿದ್ದಾನೆ.ಈ ಹಿಂದೆ ಐರಾವತ ಚಿತ್ರದ ಕ್ಲೈಮಾಕ್ಸ್’ನ ಒಂದು ದೃಶ್ಯದಲ್ಲಿ ಅಭಿನಯಿಸಿದ್ದ ವಿನೀಶ್, ರಾಜರಾಜೇಶ್ವರಿ ನಗರದ ಹಿಲ್ ವ್ಯೂವ್ ಸ್ಕೂಲ್ ನಲ್ಲಿ ಓದುತ್ತಿರುವ ಒಂಭತ್ತು ವರ್ಷ ವಯಸ್ಸಿನ ವಿನೀಶ್,ಹಿಂದೆ ಶಾಲೆಯಲ್ಲಿ ನಡೆದ ಕರಾಟೆ ಸ್ಫರ್ಧೆಯಲ್ಲಿ ವಿನೀಶ್ ವಿಜೇತನಾಗಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದು ಎಲ್ಲರಿಗೂ ಗೊತ್ತೆ ಇದೆ .ಈಗ ಯಜಮಾನ ಚಿತ್ರದ ಮೂಲಕ ಮತ್ತೊಮ್ಮೆ ಅಪ್ಪ ದರ್ಶನ್ ಜೊತೆ ನಟಿಸಿದ್ದಾರೆ,ಆ ಚಿತ್ರದ ಹಾಡೊಂದರಲ್ಲಿ ವಿನೀಶ್ ದರ್ಶನ್ ಜೊತೆ ಕುಣಿದಿದ್ದಾರಂತೆ., ಈ ಹಾಡಿನ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದ್ದೆ.

ಪ್ರೇಕ್ಷಕ ವಲಯದಲ್ಲಿ ನಾನಾ ಕಾರಣಗಳಿಂದ ವಿಪರೀತಿ ನಿರೀಕ್ಷೆ ಹುಟ್ಟುಹಾಕಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ `ಯಜಮಾನ ಚಿತ್ರೀಕರಣ ಬಿರುಸಿನಿಂದ ನಡೆಯುತ್ತಿದೆ. ಚಿತ್ರದ ಟೈಟಲ್’ನಿಂದ ಹಿಡಿದು ತಾರಾಗಣದವರೆಗೆ ಎಲ್ಲದರಲ್ಲೂ ಕುತೂಹಲ ಮೂಡಿಸಿರುವ ಯಜಮಾನ ಚಿತ್ರದ ಹಾಡಿನಲ್ಲಿ ದರ್ಶನ್ ಮಗ ವಿನೀಶ್ ಕೂಡ ಹೆಜ್ಜೆ ಹಾಕಿದ್ದಾನೆ.ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ ವಿನೀಶ್ ಇಂದು 10ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾನೆ. ಹೀಗಾಗಿ ತಾಯಿ ವಿಜಯಲಕ್ಷ್ಮೀ ಇಂದು ತಮ್ಮ ಟ್ವಿಟ್ಟರಿನಲ್ಲಿ ಮಗನ ಫೋಟೋ ಹಾಕಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.ವಿಜಯಲಕ್ಷ್ಮೀ ವಿನೀಶ್ ಫೋಟೋವನ್ನು ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ, “ನನ್ನ ಚಿಕ್ಕ ಹುಡುಗನಿಗೆ ಈಗ 10 ವರ್ಷ” ಎಂದು ಹೇಳುತ್ತಾ ಬರ್ತ್ ಡೇ ಬಾಯ್ ಎಂಬ ಹ್ಯಾಶ್‍ಟ್ಯಾಗ್ ಬಳಸಿ ಶುಭ ಹಾರೈಸಿದ್ದಾರೆ.

 

 

 

ವಿನೀಶ್ ಹುಟ್ಟುಹಬ್ಬಕ್ಕೆ ದರ್ಶನ್ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ದರ್ಶನ್ ಫ್ಯಾನ್ಸ್ ಕ್ಲಬ್ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಹಾಗೂ ವಿನೀಶ್ ಫೋಟೋ ಹಾಕಿ ವಿಭಿನ್ನವಾಗಿ ಶುಭಾಶಯ ತಿಳಿಸುತ್ತಿದ್ದಾರೆ.ನಟ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ. ಈಗಾಗಲೇ ಅವರು ಅನೇಕ ಪ್ರಾಣಿಗಳನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಅವರಿಗೆ ಕುದುರೆ ಅಂದರೆ ಅಚ್ಚುಮೆಚ್ಚು, ಅವರು ಸಾಕಿರುವ ಕುದುರೆ ಮೇಲೆ ಅನೇಕ ಬಾರಿ ಸವಾರಿಯನ್ನು ಕೂಡ ಮಾಡಿದ್ದಾರೆ. ನ್ನ ತಂದೆಯಂತೆಯೇ ವಿನೀಶ್‍ಗೂ ಕೂಡ ಪ್ರಾಣಿಗಳ ಮೇಲೆ ತುಂಬಾ ಪ್ರೀತಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top