ಕರ್ನಾಟಕದೆಲ್ಲೆಡೆ ಇಂದು 63ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ. ಈ ಸಂದರ್ಭದಲ್ಲಿ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ವಿವಿಧ ಗಣ್ಯರು ಕರ್ನಾಟಕದ ಜನತೆಗೆ ಟ್ವಿಟರ್ ಮೂಲಕ ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ.
“ಕರ್ನಾಟಕ ರಾಜ್ಯೋತ್ಸವದ ಈ ದಿನದಂದು, ಕರ್ನಾಟಕದ ಜನತೆಗೆ ಹಾರ್ಧಿಕ ಅಭಿನಂದನೆಗಳು ಹಾಗೂ ಶುಭಾಶಯಗಳು. ಮುಂಬರುವ ವರ್ಷಗಳಲ್ಲಿ, ಕರ್ನಾಟಕ ರಾಜ್ಯ ಹಾಗೂ ನಮ್ಮ ದೇಶವು ಇನ್ನೂ ಉನ್ನತ ಮಟ್ಟಕ್ಕೇರಲಿ” ಎಂದು ರಾಷ್ಟ್ರಪತಿ ಕೊವಿಂದ್ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ರಾಜ್ಯೋತ್ಸವದ ಈ ದಿನದಂದು, ಕರ್ನಾಟಕದ ಜನತೆಗೆ ಹಾರ್ಧಿಕ ಅಭಿನಂದನೆಗಳು ಹಾಗೂ ಶುಭಾಶಯಗಳು. ಮುಂಬರುವ ವರ್ಷಗಳಲ್ಲಿ, ಕರ್ನಾಟಕ ರಾಜ್ಯ ಹಾಗೂ ನಮ್ಮ ದೇಶವು ಇನ್ನೂ ಉನ್ನತ ಮಟ್ಟಕ್ಕೇರಲಿ — ರಾಷ್ಟ್ರಪತಿ ಕೊವಿಂದ್.
— President of India (@rashtrapatibhvn) November 1, 2018
“ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಕರ್ನಾಟಕದ ನನ್ನ ಸಹೋದರ ಸಹೋದರಿಯರಿಗೆ ಶುಭಾಶಯಗಳು. ಕರ್ನಾಟಕ ಶ್ರೀಮಂತ ಇತಿಹಾಸ ಹೊಂದಿದ್ದು, ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಪ್ರತಿಭಾವಂತರಿಗೆ ನೆಲೆಯಾಗಿದೆ. ನಾನು ರಾಜ್ಯದ ಜನರ ಸಂತೋಷ ಹಾಗೂ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ.” ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಕರ್ನಾಟಕದ ನನ್ನ ಸಹೋದರ ಸಹೋದರಿಯರಿಗೆ ಶುಭಾಶಯಗಳು. ಕರ್ನಾಟಕ ಶ್ರೀಮಂತ ಇತಿಹಾಸ ಹೊಂದಿದ್ದು, ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಪ್ರತಿಭಾವಂತರಿಗೆ ನೆಲೆಯಾಗಿದೆ. ನಾನು ರಾಜ್ಯದ ಜನರ ಸಂತೋಷ ಹಾಗೂ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ.
— Narendra Modi (@narendramodi) November 1, 2018
“ತಾಯ್ನಾಡು, ತಾಯ್ನುಡಿಯ ಮುಂದೆ ಎಲ್ಲವೂ ತೃಣ!
ತೀರಿಸಲಾದೀತೆ ಆ ಕನ್ನಡಮ್ಮನ ಋಣ!
ಸಿರಿಗನ್ನಡಂ ಗೆಲ್ಗೆ ಎಂಬುದಾಗಲಿ ನಮ್ಮೆಲ್ಲರ ಅಂಬೋಣ!
ನಾಡಿನ ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.#ಕನ್ನಡರಾಜ್ಯೋತ್ಸವ #KannadaRajyotsava ” ಎಂದು ಉಪಮುಖ್ಯಮಂತ್ರಿ ಪರಮೇಶ್ವರ್ ಟ್ವೀಟ್ ಮಾಡಿದ್ದಾರೆ.
ತಾಯ್ನಾಡು, ತಾಯ್ನುಡಿಯ ಮುಂದೆ ಎಲ್ಲವೂ ತೃಣ!
ತೀರಿಸಲಾದೀತೆ ಆ ಕನ್ನಡಮ್ಮನ ಋಣ!
ಸಿರಿಗನ್ನಡಂ ಗೆಲ್ಗೆ ಎಂಬುದಾಗಲಿ ನಮ್ಮೆಲ್ಲರ ಅಂಬೋಣ!ನಾಡಿನ ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.#ಕನ್ನಡರಾಜ್ಯೋತ್ಸವ #KannadaRajyotsava pic.twitter.com/MU9JgIASXo
— Dr. G Parameshwara (@DrParameshwara) November 1, 2018
“ಕನ್ನಡ ಎಂದರೆ
ಬರೀ ಭಾಷೆ ಅಲ್ಲ,
ಅದು ಬದುಕು,
ಅದು ಸಂಸ್ಕೃತಿ,
ಅದು ಪರಂಪರೆ.
ಕನ್ನಡವನ್ನು ಪ್ರೀತಿಸೋಣ.
ನಾಡಬಾಂಧವರೆಲ್ಲರಿಗೂ
ಕನ್ನಡ ರಾಜ್ಯೋತ್ಸವದ ಶುಭ ಹಾರೈಕೆಗಳು.” ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಕನ್ನಡ ಎಂದರೆ
ಬರೀ ಭಾಷೆ ಅಲ್ಲ,
ಅದು ಬದುಕು,
ಅದು ಸಂಸ್ಕೃತಿ,
ಅದು ಪರಂಪರೆ.
ಕನ್ನಡವನ್ನು ಪ್ರೀತಿಸೋಣ.ನಾಡಬಾಂಧವರೆಲ್ಲರಿಗೂ
ಕನ್ನಡ ರಾಜ್ಯೋತ್ಸವದ ಶುಭ ಹಾರೈಕೆಗಳು. pic.twitter.com/YBarVVBm2b— Siddaramaiah (@siddaramaiah) November 1, 2018
“ಹರಿವ ನದಿಗಳಿಂದ ಹರಸೊ ರಸಋಷಿಗಳಿಂದ ಬರೆವ ಕವಿಗಳಿಂದ ಧನ್ಯ ನೀನು ಸವಿಯ ನುಡಿಯ ಆಡುವ ಅಮೃತ ಸವಿಯ ಸವಿಯುವ ಕನ್ನಡಿಗರು ನಾವು ಧನ್ಯ ಧನ್ಯ ಕನ್ನಡ ದಿನದ ಶುಭಾಶಯ.” ಎಂದು ಮಾಜಿ ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಹರಿವ ನದಿಗಳಿಂದ ಹರಸೊ ರಸಋಷಿಗಳಿಂದ ಬರೆವ ಕವಿಗಳಿಂದ ಧನ್ಯ ನೀನು ಸವಿಯ ನುಡಿಯ ಆಡುವ ಅಮೃತ ಸವಿಯ ಸವಿಯುವ ಕನ್ನಡಿಗರು ನಾವು ಧನ್ಯ ಧನ್ಯ ಕನ್ನಡ ದಿನದ ಶುಭಾಶಯ. pic.twitter.com/D0EobSZqJB
— B.S. Yeddyurappa (@BSYBJP) November 1, 2018
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
