ಮನೋರಂಜನೆ

ತೆಲುಗು ನೆಲದಲ್ಲಿ ಕನ್ನಡ ಭಾವುಟ ಹಾರಿಸಿದ ಪೈಲ್ವಾನ್ ಚಿತ್ರತಂಡ.

ಇಂದು ರಾಜ್ಯಾದ್ಯಂತ 62ನೇ ಕರ್ನಾಟಕ ರಾಜ್ಯೋತ್ಸವವನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕನ್ನಡ ರಾಜ್ಯೋತ್ಸವನ್ನು ಆಚರಿಸಿ ಜನರಿಗೆ ಶುಭಾಶಯ ಕೋರುತ್ತಿದ್ದಾರೆ. ಅದೇ ರೀತಿ ಹೈದರಾಬಾದ್ ನಲ್ಲಿ ಶೂಟಿಂಗ್ ನಟಸುತ್ತಿರುವ ‘ಪೈಲ್ವಾನ್’ ಚಿತ್ರತಂಡವು ಕೂಡ ವಿಶೇಷವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಿ ಕನ್ನಡ ಜನತೆಗೆ ಅಲ್ಲಿಂದಲೇ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದ್ದಾರೆ.

 

 

ಹೊರರಾಜ್ಯದ ಹೈದರಾಬಾದ್’ನಲ್ಲಿ ಶೂಟಿಂಗ್ ‘ಪೈಲ್ವಾನ್’ ಚಿತ್ರತಂಡ ಕನ್ನಡ ರಾಜ್ಯೋತ್ಸವನ್ನು ಅಲ್ಲಿಯೇ ಕನ್ನಡ ಬಾವುಟ ಹಾರಿಸಿ ಕನ್ನಡಾಂಬೆಗೆ ನಮಸ್ಕರಿಸಿದ್ದಾರೆ. ಕನ್ನಡ ಬಾವುಟ ಹಾರಿಸಿ, ಭುವನೇಶ್ವರಿ ದೇವಿಗೆ ಪೂಜೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ನಿರ್ದೇಶಕ ಕೃಷ್ಣ ಸೇರಿದಂತೆ ನಟ ಕಿಚ್ಚಾ ಸುದೀಪ್, ಹಾಗು ಇತರ ಕಲಾವಿದರು ಈ ಕನ್ನಡ ರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದರು.

ಕಳೆದ ವಾರದಿಂದ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸತತ ಚಿತ್ರೀಕರಣ ಮಾಡುತ್ತಿರುವ ‘ಪೈಲ್ವಾನ್’ ಚಿತ್ರ ಸದ್ಯ ಕನ್ನಡ ಚಿತ್ರರಂಗದಲ್ಲಿ ನೀರಿಕ್ಷೆಯನ್ನು ಮೂಡಿಸಿರುವ ಚಿತ್ರವಾಗಿದೆ.. ಇಂಥಾ ಪೈಲ್ವಾನ್ ಚಿತ್ರತಂಡ ಹೊರರಾಜ್ಯದಲ್ಲಿದ್ದರೂ ಕನ್ನಡದ ಹಬ್ಬವನ್ನು ಆಚರಿಸಲು ಮರೆಯದೇ ಆಚರಿಸಿರುವುದು ಮೆಚ್ಚುಗೆಗೆ ಕಾರಣವಾಗುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಇದರ ಫೋಟೋಗಳು ವೈರಲ್ ಆಗಿವೆ.. ಅಂದಹಾಗೆ ಕಳೆದ ಬಾರಿ ‘ಮುನಿರತ್ನಕುರುಕ್ಷೇತ್ರ’ ಚಿತ್ರತಂಡ ಇದೇ ರಾಮೋಜಿ ಫಿಲ್ಮ್​​ಸಿಟಿಯಲ್ಲಿ ರಾಜ್ಯೋತ್ಸವ ಆಚರಿಸಿತ್ತು..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top