ಮನೋರಂಜನೆ

ಕನ್ನಡ ರಾಜ್ಯೋತ್ಸವದಂದು ಇಂಗ್ಲಿಷ್ ನಲ್ಲಿ ಶುಭಾಶಯ ಕೋರಿ ಕೆಂಗಣ್ಣಿಗೆ ಗುರಿಯಾದ ಶೋಭಾ ಕರಂದ್ಲಾಜೆ.

ಕರ್ನಾಟಕದೆಲ್ಲೆಡೆ ಇಂದು 63ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ. ಈ ಸಂದರ್ಭದಲ್ಲಿ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ವಿವಿಧ ಗಣ್ಯರು ಕರ್ನಾಟಕದ ಜನತೆಗೆ ಟ್ವಿಟರ್ ಮೂಲಕ ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ. ಆದರೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಕನ್ನಡ ರಾಜ್ಯೋತ್ಸವ ನಿಮ್ಮಿತ್ತ ನಾಡಿನ ಜನತೆಗೆ ಶುಭ ಕೋರಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾರೆ.

 

 

ಕನ್ನಡ ರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಕನ್ನಡದಲ್ಲೇ ಟ್ವೀಟ್ ಮಾಡಿ ಶುಭ ಕೋರಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಅವರು ಮೋದಿ ಅವರ ಟ್ವೀಟನ್ನು ರೀ ಟ್ವೀಟ್ ಮಾಡಿದ್ದಾರೆ. ಆದರೆ ಇದರ ನಡುವೆ ನಾಡಿನ ಜನತೆಗೆ ಶುಭಕೋರುವ ವೇಳೆ ಇಂಗ್ಲಿಷ್‍ನಲ್ಲಿ ಟ್ವೀಟ್ ಮಾಡಿ ಶುಭಕೋರಿದ್ದಾರೆ.

ಶೋಭಾ ಕರಂದ್ಲಾಜೆ ಅವರು ಕನ್ನಡ ರಾಜ್ಯೋತ್ಸವದಂದೂ ಕೂಡ ತೋರಿದ ಇಂಗ್ಲಿಷ್ ಪ್ರೇಮದ ಬಗ್ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಶೋಭಾ ಅವರು ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ.

“ಕನ್ನಡ ಜನತೆಗೆ ಇಂದು ವಿಶೇಷ ದಿನವಾಗಿದ್ದು, ರಾಜ್ಯದ ಸಂಸ್ಕೃತಿ ಹಾಗೂ ಸಂಪ್ರದಾಯಗಳ ಬಗ್ಗೆ ಹೆಮ್ಮೆ ಪಡುವ ಸಮಯವಾಗಿದೆ. ಇಂದು ನಮ್ಮ ಐತಿಹಾಸಿಕ ಪರಂಪರೆಯನ್ನು ನೆನೆಯುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಣೆ ಮಾಡೋಣ” ಎಂದು ಶೋಭಾ ಕರಂದ್ಲಾಜೆ ತಮ್ಮ ಟ್ವೀಟಿನಲ್ಲಿ ಬರೆದುಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top