ಅರೋಗ್ಯ

ಪಡವಲಕಾಯಿ ತಿನ್ನೋಕೆ ಜಂಬ ಯಾಕೆ ? ಹತ್ತಾರು ಖಾಯಿಲೆ ವಾಸಿ ಮಾಡುತ್ತೆ ಅಷ್ಟೇ ಅಲ್ಲ ಸಕ್ಕರೆ ಖಾಯಿಲೆ ಇರೋರಂತೂ ಮಿಸ್ ಮಾಡ್ದೆ ತಿನ್ಬೇಕು.

ಪಡವಲಕಾಯಿ ಪೋಷಕಾಂಶಗಳು, ಜೀವಸತ್ವಗಳು, ಮತ್ತು ಖನಿಜಾಂಶಗಳನ್ನು ಒಳಗೊಂಡಿರುತ್ತದೆ, ಅವು ಆರೋಗ್ಯಕ್ಕೆ ಅತ್ಯಗತ್ಯವಾಗಿವೆ,ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ಅಲ್ಲದೇ ಮ್ಯಾಂಗನೀಸ್, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಅಯೋಡಿನ್ ಇನ್ನು ಮುಂತಾದ ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳು ಇವೆ .

 

 

 

 

ಜ್ವರವನ್ನು ಕಡಿಮೆ ಮಾಡುತ್ತದೆ:ಜ್ವರವನ್ನು ನಿವಾರಿಸಲು ಪಡವಲಕಾಯಿಯನ್ನು ದಿನ ನಿತ್ಯದ ಆಹಾರದಲ್ಲಿ ಸೇವಿಸಲಾಗುತ್ತದೆ , ನೈಸರ್ಗಿಕ ಚಿಕಿತ್ಸೆ ಪ್ರಕ್ರಿಯೆಯಲ್ಲಿ ಕೊತ್ತಂಬರಿಯ ಜೊತೆ ಪಡವಲಕಾಯಿ ಯನ್ನು ನೀಡಲಾಗುತ್ತದೆ ಇದು ವಾಂತಿ ಹಾಗು ನೆಗಡಿಯನ್ನು ಸಹ ತಡೆಯುತ್ತದೆ .

ದೇಹದಿಂದ ಕಷ್ಮಲಗಳನ್ನು ಹೊರಹಾಕುತ್ತದೆ:ಯಕೃತ್ತನ ಆರೋಗ್ಯವನ್ನು ಸುಧಾರಿಸುತ್ತದೆ , ಮೂತ್ರವಿಸರ್ಜನೆಯನ್ನು ಹೆಚ್ಚಿಸುತ್ತದೆ, ಅಲ್ಲದೆ ದೇಹದಲ್ಲಿ ಕಷ್ಮಲಗಳನ್ನು ಹೊರಗೆ ಹಾಕಲು ಸಹಾಯ ಮಾಡುತ್ತದೆ .ನಿರ್ಜಲೀಕರಣವನ್ನು ತೊಡೆದುಹಾಕಲು ಮತ್ತು ಮೂತ್ರಪಿಂಡಗಳ ಆರೋಗ್ಯವನ್ನು ವೃದ್ಧಿಸಲು ಸಹಕಾರಿ.

ಜೀರ್ಣಕಾರಿ ಸಮಸ್ಯೆಗಳನ್ನು ತಡೆಯುತ್ತದೆ:ಪಡವಲಕಾಯಿಯಲ್ಲಿರುವ ಫೈಬರ್ ಅಂಶವು ಹೊಟ್ಟೆಯ ಉಬ್ಬರ , ಮೂತ್ರ ಕಟ್ಟುವಿಕೆ ಸಮಸ್ಯೆ , ಕರುಳಿನ ಅಸ್ವಸ್ಥತೆ ತಡೆಯುತ್ತದೆ ,ಬಹು ಮೂತ್ರ ಸಮಸ್ಯೆಯನ್ನು ಸಹ ತಡೆಯುತ್ತದೆ .ಮಲಬದ್ಧತೆಯನ್ನು ತೊಡೆದುಹಾಕಿ ದೇಹದಲ್ಲಿ ಪೌಷ್ಟಿಕಾಂಶದ ಹೀರಿಕೊಳ್ಳುವ ಪ್ರಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

ಉಸಿರಾಟದ ವ್ಯವಸ್ಥೆಯನ್ನು ಸುಧಾರಿಸುತ್ತದೆ:

 

 

 

ಪ್ರತಿರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುತ್ತದೆ , ಉಸಿರಾಟದ ವ್ಯವಸ್ಥೆಯ ಲ್ಲಿ ಯಾವುದೇ ಅಡೆತಡೆ ಉಂಟಾಗದಂತೆ ತಡೆಯುತ್ತದೆ , ಕಫ ಕಟ್ಟುವಿಕೆ ದಮ್ಮು ರೋಗವನ್ನು ನಿವಾರಣೆ ಮಾಡುತ್ತದೆ .

ಕೂದಲು ಉದುರುವುದನ್ನು ತಡೆಗಟ್ಟುತ್ತದೆ:ಬೊಕ್ಕತಲೆಯಿಂದ ಬಳಲುತ್ತಿರುವ ಜನರಿಗೆ, ಹೊಸ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಕೂದಲು ನಷ್ಟದಿಂದ ದುರ್ಬಲಗೊಳ್ಳುವ ಕೂದಲಿನ ಬುಡವನ್ನು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ .ಕೆಲವು ಸಂಶೋಧನೆಗಳು ಪ್ರತಿಜೀವಕ ಗುಣಲಕ್ಷಣಗಳನ್ನು ಹೊಂದಿದ್ದು ವಿಟಮಿನ್ ಸಿ ಮಟ್ಟದಲ್ಲಿ ಸಮೃದ್ಧಿ ಹೊಂದಿದ್ದು ಒಟ್ಟಾರೆ ಆರೋಗ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.

ಮಧುಮೇಹವನ್ನು ನಿಯಂತ್ರಿಸುತ್ತದೆ:ಕಡಿಮೆ ಕ್ಯಾಲೋರಿ ಹೊಂದಿರುವ ಪಡವಲಕಾಯಿ ಮಧುಮೇಹ ವಿರೋಧಿ ಆಹಾರದ ಮೂಲ , ಸ್ವಲ್ಪ ತಿಂದ ತಕ್ಷಣ ಹೊಟ್ಟೆ ತುಂಬಿದ ಅನುಭವವಾಗಿ ದೇಹದ ತೂಕದ ಮೇಲೆ ಕಡಿವಾಣ ಹಾಕುತ್ತದೆ ಆದ್ದರಿಂದ ಮಧುಮೇಹದ ಅಪಾಯ ಇರುವುದಿಲ್ಲ .

ಒತ್ತಡವನ್ನು ಕಡಿಮೆ ಮಾಡುತ್ತದೆ:ಸಾಂಪ್ರದಾಯಿಕ ಔಷಧಿಗಳಲ್ಲಿ, ಹೃದಯ ಬಡಿತವನ್ನು ತಗ್ಗಿಸಲು ಮತ್ತು ಕಡಿಮೆ ರಕ್ತದೊತ್ತಡವನ್ನು ಕಡಿಮೆಗೊಳಿಸಿ ನರಮಂಡಲ ಶಮನಗೊಳಿಸಲು ಪೊಟ್ಯಾಸಿಯಮ್ ಭರಿತವಾದ ಈ ತರಕಾರಿ ಒಳ್ಳೆಯದು , ರಕ್ತನಾಳದ ವ್ಯವಸ್ಥೆಯನ್ನು ಉತ್ತಮಗೊಳಿಸಿ ಒತ್ತಡವನ್ನು ಕಡಿಮೆ ಮಾಡುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top