ದೇವರು

ನವೆಂಬರ್ 2 ನೇ ತಾರೀಖು ಅಷ್ಟ ತೀರ್ಥೋದ್ಭವದಲ್ಲಿ ಭಾಗಿಯಾದರೆ ನಿಮ್ಮ ಸಕಲ ಸಂಕಷ್ಟಗಳು ನಿವಾರಣೆಯಾಗಿ ನೀವು ಒಳ್ಳೆ ದಿನಗಳನ್ನು ಕಾಣಬಹುದಂತೆ

ಶುಕ್ರವಾರ, ನವೆಂಬರ್ ಎರಡನೇ ತಾರೀಖು, ರಂಗನಾಥನ ಸನ್ನಿಧಿಯಲ್ಲಿ ಅಷ್ಟ ತೀರ್ಥೋದ್ಭವ ನಡೆಯುತ್ತಿದೆ. ಇದರಲ್ಲಿ ಪಾಲ್ಗೊಳ್ಳುವುದರಿಂದ ವಿಶೇಷ ಫಲ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಬನ್ನಿ ಇದರ ವಿಶೇಷತೆಯನ್ನು ತಿಳಿದುಕೊಳ್ಳೋಣ.

ಕಾವೇರಿ ತೀರ್ಥೋದ್ಭವವಾಗಿ ಈ ತುಲಾ ಮಾಸವಾಗಿ,ಈಗ ಅಷ್ಟ ತೀರ್ಥೋದ್ಭವ ಎನ್ನುವುದು ಬರುತ್ತದೆ. ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿಯ ಸನ್ನಿಧಿಯಲ್ಲಿ ಸ್ವತಃ ಎಂಟು ಕಡೆ ಹೋಗಿ, 8 ತೀರ್ಥಗಳಲ್ಲಿ ಸ್ನಾನ ಮಾಡುವ ಪದ್ಧತಿ ಇದೆ ಎಂದು ಕರೆಯಲಾಗುತ್ತದೆ. ಅಂದರೆ ಒಂದೊಂದು ತೀರ್ಥಕ್ಕೂ ಒಂದೊಂದು ಹೆಸರಿದೆ.ನಿಮ್ಮ ಕಷ್ಟ ಮತ್ತು ದುಃಖಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಮತ್ತು ಸಂಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಈ ಅಷ್ಟ ತೀರ್ಥ ಕ್ಷೇತ್ರಗಳಲ್ಲಿ ಸ್ನಾನವನ್ನು ಮಾಡಬೇಕು. ದೇವರು ಮುಂದೆ ಸಾಗುತ್ತದೆ ದೇವರ ಹಿಂದೆ ನೀವು ಕೂಡ ಪಾದ ಯಾತ್ರೆಯಲ್ಲಿ ಹೋಗಿ ವ್ಯವಸ್ಥಿತವಾಗಿ ಎಂಟು ಕಡೆ ಸ್ನಾನವನ್ನು ಮಾಡಿ ರಂಗನಾಥನಿಗೆ ದೀರ್ಘದಂಡ ನಮಸ್ಕಾರವನ್ನು ಮಾಡಬೇಕು.ಹೀಗೆ ಮಾಡಿದಾಗ ಸಂತಾನ ದೋಷ , ಎಷ್ಟೋ ಹೆಣ್ಣು ಮಕ್ಕಳಿಗೆ ನಾನು ಕೂಡ ತಾಯಿಯಾಗಬೇಕು ಎನ್ನುವ ಆಸೆ ಇರುತ್ತದೆ, ಆದರೆ ಆಸೆ ಈಡೇರಿರುವುದಿಲ್ಲ, ಅಂತಹ ಸಂತಾನ ದೋಷ ನಿವಾರಣೆಯಾಗುತ್ತದೆ.ಹಣ, ಆಸ್ತಿ, ಐಶ್ವರ್ಯ, ಸಂಪತ್ತು ಪ್ರಾಪ್ತಿಯಾಗುತ್ತದೆ.

 

 

 

ನಿಮ್ಮ ಇಷ್ಟಕಾಮ್ಯರ್ಥಗಳು ಸಿದ್ಧಿಯಾಗುತ್ತದೆ ಮತ್ತು ಮಹಾಲಕ್ಷ್ಮಿ ದೇವಿಯ ಅನುಗ್ರಹವು ಕೂಡ ಪ್ರಾಪ್ತಿಯಾಗುತ್ತದೆ. ಆದ್ದರಿಂದ ಈ ಶುಕ್ರವಾರ ನಡೆಯುವ ಅಷ್ಟ ತೀರ್ಥದಲ್ಲಿ ಭಾಗಿಯಾಗಿ ವ್ಯವಸ್ಥಿತವಾಗಿ ನಿಯಮ ಬದ್ಧವಾಗಿ ಅಷ್ಟ ತೀರ್ಥಗಳಲ್ಲಿ ಸ್ನಾನವನ್ನು ಮಾಡಿ ಭಕ್ತಿ , ಶ್ರದ್ಧೆಯಿಂದ ಪೂಜಿಸಿ ದೀರ್ಘದಂಡ ನಮಸ್ಕಾರವನ್ನು ರಂಗನಾಥಸ್ವಾಮಿಗೆ ಮಾಡಿ.ಅಷ್ಟ ತೀರ್ಥಗಳಲ್ಲಿ ಸ್ನಾನ ಮಾಡಿ 9ನೇ ಭಾಗವಾಗಿ ದೀರ್ಘದಂಡ ನಮಸ್ಕಾರವನ್ನು ಭಕ್ತಿ, ಶ್ರದ್ಧೆಯಿಂದ ಅರ್ಪಿಸಿದರೆ ಆಗ ನಿಮ್ಮ ಶರೀರದಲ್ಲಿರುವ ದೋಷಗಳ ಎಲ್ಲವೂ ಸಹ ನಾಶವಾಗುತ್ತವೆ ಎಂದು ಹೇಳುತ್ತದೆ ವಿಷ್ಣು ಪುರಾಣ. ಆದ್ದರಿಂದ ಇಂತಹ ಅಷ್ಟ ತೀರ್ಥದಲ್ಲಿ ಮುನಿ ಪುಂಗರವರು, ಆಧ್ಯಾತ್ಮಿಕರು, ಋಷಿ ಮುನಿಗಳು ವ್ಯವಸ್ಥಿತವಾಗಿ ಸ್ನಾನವನ್ನು ಮಾಡುವುದಕ್ಕೆ ಮುಂದಾಗುತ್ತಾರೆ. ಆದ್ದರಿಂದ ನೀವೆಲ್ಲರೂ ಸಹ ಅಷ್ಟ ತೀರ್ಥೋದ್ಭವದಲ್ಲಿ ಭಾಗಿಯಾಗಿ ವ್ಯವಸ್ಥಿತವಾಗಿ ರಂಗನಾಥ ಸ್ವಾಮಿಯ ಕೃಪೆಗೆ ಪಾತ್ರರಾಗಿ.ಹೀಗೆ ಭಕ್ತಿ ಶ್ರದ್ಧೆಯಿಂದ ಮಾಡಿದರೆ ಶತ್ರು ಭಾದೆಗಳು, ನೀಚ ದೃಷ್ಟಿ, ಕ್ರೂರ ದೃಷ್ಟಿ ಮತ್ತು ಕೆಟ್ಟ ದೃಷ್ಟಿ ಗಳೆಲ್ಲವೂ ಸಹ ನಿವಾರಣೆಯಾಗಿ ಜೀವನದಲ್ಲಿ ಎಲ್ಲವೂ ಶುಭವಾಗಿ ಜೀವನದ ದಾರಿ ಸುಗಮವಾಗಿ ಒಳ್ಳೆಯದಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top