ಮನೋರಂಜನೆ

ದುನಿಯಾ ವಿಜಿ ವಿರುದ್ಧ ಹೀಗೆ ಹೇಳಿ ಗಳಗಳನೆ ಅತ್ತ ವಿಜಿ ಸುಪುತ್ರಿಯರು

ದುನಿಯಾ ವಿಜಿ ಎರಡನೇ ಪತ್ನಿ ಕೀರ್ತಿಗೌಡ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಪತ್ನಿ ನಾಗರತ್ನ ನಾಪತ್ತೆಯಾಗಿದ್ದಾರೆ. ಇವತ್ತಿಗೆ 4 ದಿನವಾದರೂ ನಾಗರತ್ನ ಪತ್ತೆಯಾಗದೇ ಇರೋದು ಗಿರಿನಗರ ಪೊಲೀಸರಿಗೆ ತಲೆನೋವಾಗಿದೆ. ಘಟನೆ ಸಂಬಂಧ ಸೆರೆಸಿಕ್ಕ ಸಿಸಿಟಿವಿ ವಿಡಿಯೋ ಆಧರಿಸಿ ಡಿಸಿಪಿ ಅಣ್ಣಾಮಲೈ ಅವರು ನಾಗರತ್ನ ಅವರನ್ನು ಬಂಧಿಸುವಂತೆ ಗಿರಿನಗರ ಇನ್ ಸ್ಪೆಕ್ಟರ್ ಕೊಟ್ರೇಶಿ ಅವರಿಗೆ ಸೂಚನೆ ನೀಡಿದ್ದಾರೆ.

“ಅವರಿಗಾಗಿ ಪೊಲೀಸರ ಶೋಧ ಕಾರ್ಯ ಮುಂದುವರೆದಿದೆ, ಕೀರ್ತಿಗೌಡ ಮೇಲೆ ಹಲ್ಲೆ ಮಾಡಿದ ಸಿಸಿಟಿವಿ ದೃಶ್ಯಗಳು ಬಿಡುಗಡೆಯಾದ ದಿನದಿಂದ ನಾಗರತ್ನ ನಾಪತ್ತೆಯಾಗಿದ್ದಾರೆ. ಹೀಗಾಗಿ ಒಂದು ವಾರದ ಒಳಗೆ ಉತ್ತರ ನೀಡಬೇಕೆಂದು ಸೂಚನೆ ನೀಡಿದ್ದೇವೆ” ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾ ಮಲೈ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹಲವು ವಿವಾದಗಳ ಮೂಲಕ ಸುದ್ದಿ ಆಗುತ್ತಿರುವ ದುನಿಯಾ ವಿಜಯ್ ಹಾಗೂ ಅವರ ಕುಟುಂಬಕ್ಕೆ ಎಚ್ಚರಿಕೆ ನೀಡಿರುವ ಅಣ್ಣಾಮಲೈ ಅವರು ಪರಸ್ಪರ ಕಿತ್ತಾಡಿಕೊಳ್ಳುವುದು ಬೇಡವೆಂದು ಎಚ್ಚರಿಕೆ ನೀಡಿದ್ದಾರೆ.ಎರಡು ಕುಟುಂಬಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಸಿಆರ್ ಪಿಸಿ ಕಲಂ 107 ನೋಟಿಸ್ ಜಾರಿ ಒಂದು ವಾರದೊಳಗೆ ಉತ್ತರ ನೀಡುವಂತೆ ಸೂಚಿಸಲಾಗಿತ್ತು .
ಈ ಬೆಳವಣಿಗೆಗಳ ಹಿಂದೆಯೇ ಇನ್ನೊಂದು ಘಟನೆ ನಡೆದಿದ್ದೇ ಮೊದಲ ಮಗಳು ಮೋನಿಕಾ,ಕೀರ್ತಿಗೌಡ ಹಲ್ಲೆ ಪ್ರಕರಣಕ್ಕೆ ಅಮ್ಮ ನಾಗರತ್ನಗೆ ಸಹಾಯ ಮಾಡಿದ್ದಾಳೆಂದು ಕೀರ್ತಿ ದೂರು ದಾಖಲು ಮಾಡಿದ್ದರು. ಈ ಹಿನ್ನಲೆ ಮೋನಿಕಾ ಪೊಲೀಸ್​ ಠಾಣೆ ಮೆಟ್ಟೆಲೇರಬೇಕಾಯ್ತು. ಇದೀಗ ಮೋನಿಷಾ ಸರದಿ. ದುನಿಯಾ ವಿಜಯ್​ ಅವರ ಎರಡನೇ ಸುಪುತ್ರಿ ಮೋನಿಷಾ ಅವರು ಮಕ್ಕಳ ಆಯೋಗದ ಮೆಟ್ಟಿಲೇರಿದ್ದಾರೆ.

 

 

 

ಮೋನಿಷಾ ಈ ಎಲ್ಲ ಕರ್ಮಕಾಂಡದಿಂದ ತುಂಬಾ ನೊಂದಿರುವುದರಿಂದ ಸಹಾಯಕ್ಕೆ ಮಕ್ಕಳ ಆಯೋಗದ ಮೆಟ್ಟಿಲೇರಿದ್ದಾರೆ. ದುನಿಯಾ ವಿಜಯ್​ ಮಕ್ಕಳು ಇದೀಗ ಮಕ್ಕಳ ಆಯೋಗದ ಮುಂದೆಯೂ ತಂದೆ ವಿರುದ್ಧ ಆರೋಪ ಮಾಡಿದ್ದಾರೆ,ವಿಜಿ ಅವರ ಎರಡನೇ ಮಗಳು ಮೋನಿಷಾ ಅವರು ನನಗೆ ನ್ಯಾಯ ಕೊಡಿಸಿ. ಅಪ್ಪ-ಅಮ್ಮನ ಜಗಳದಿಂದ ನಾವು ಸಿಕ್ಕಾಪಟ್ಟೆ ನೋವು ಅನುಭವಿಸಿದ್ದೇವೆ. ಅಪ್ಪ-ಅಮ್ಮ ನ ಜಗಳದಲ್ಲಿ ನಮಗೆ ಸರಿಯಾಗಿ ಪ್ರೀತಿ, ಆರ್ಥಿಕ ಸಹಾಯ ಸಿಗುತ್ತಿಲ್ಲ ನ್ಯಾಯ ಕೊಡಿಸಿ ಎಂದು ಮಕ್ಕಳ ಆಯೋಗದ ಮೆಟ್ಟಿಲೇರಿದ್ದಾರೆ. ಅಪ್ಪ ನಮಗೆ ಮನೆಯೊಳಗೆ ಹಲ್ಲೆ ನಡೆಸಿದ್ದರು ಎಂದು ಮೋನಿಷಾ ಜೊತೆ ಬಂದಿದ್ದ ಅಕ್ಕ ಮೋನಿಕಾ ಅಧಿಕಾರಿಗಳ ಮುಂದೆ ಗಳ ಗಳನೇ ಅತ್ತು ಬಿಟ್ಟರು.

ಚಿಕ್ಕಮ್ಮ ಕೀರ್ತಿಗೌಡ ಕೂಡ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲಾ, ನಮ್ಮ ವಿರುದ್ಧವಾಗಿ ಮಿಡಿಯಾ ಮುಂದೆ ಸುಳ್ಳು ಸುಳ್ಳುಹೇಳಿಕೆ ನೀಡುತ್ತಿದ್ದಾರೆ. ಇವೆಲ್ಲದ್ದರಿಂದ ನಮಗೆ ಸಾಕಷ್ಟು ನೋವು ಅನುಭವಿಸಿದ್ದೇವೆ. ಇವರಿಂದಾಗಿ ನಾವು ಬೀದಿಗೆ ಬಂದಿದ್ದೇವೆ. ಡಿಪ್ರೇಷನ್​ನಿಂದ ಚಿಕಿತ್ಸೆ ಕೂಡ ತೆಗೆದುಕೊಳ್ಳುತ್ತಿರುವುದಾಗಿ ಅಧಿಕಾರಿಗಳ ಮುಂದೆ ಕಣ್ಣೀರಿಟ್ಟಿದ್ದಾರೆ ಮೋನಿಕಾ. ಚಿಕ್ಕಮ್ಮ ಕೀರ್ತಿ ಮತ್ತು ದುನಿಯಾ ವಿಜಯ್​ ಅವರಿಂದ ನಮಗೆ ನ್ಯಾಯ ಕೊಡಿಸಿ, ನಮ್ಮ ಪಾಡಿಗೆ ನಾವು ಬದುಕಲು ಬಿಡಿ ಎಂದು ಹೇಳಿಕೊಂಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top