fbpx
ದೇವರು

ವೀಸಾ ಕೊಡಿಸುವ ವೆಂಕಟೇಶ್ವರ,ನೀವು ವಿದೇಶಕ್ಕೆ ಹೋಗ್ಬೇಕು ಅಥವಾ ವೀಸಾ ಬೇಕು ಅಂದ್ರೆ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ರೆ ಸಾಕಂತೆ ನಿಮ್ಮ ಆಸೆಗಳು ಈಡೇರುತ್ತಂತೆ

ಇಲ್ಲಿದೆ ಶ್ರೀನಿವಾಸನ ಪವಿತ್ರ ಕ್ಷೇತ್ರ ನೀವು ವಿದೇಶಕ್ಕೆ ಹೋಗಬೇಕು ಎನ್ನುವ ಆಸೆ ಇದ್ದರೆ ವೀಸಾ ಬೇಕು ಎಂದರೆ ಈ ಕ್ಷೇತ್ರಕ್ಕೆ ಭೇಟಿ ನೀಡಿದರೆ ನಿಮ್ಮ ಆಸೆ ಈಡೇರುತ್ತದೆ.
ಇದೊಂದು ಕೌತುಕ ಹುಟ್ಟಿಸುವ ದೇವಾಲಯ. ಈ ಭಗವಂತನನ್ನು ವೆಂಕಟೇಶ್ವರ ,ವೆಂಕಟಾಚಲಪತಿ, ಶ್ರೀನಿವಾಸ ಮತ್ತು ಏಳುಕುಂಡಲವಾಡ ಇನ್ನೂ ಹಲವು ನಾಮಗಳಿಂದ ಆರಾಧಿಸಲಾಗುತ್ತದೆ. ಆದರೆ ಇಲ್ಲಿ ಸ್ವಾಮಿಯನ್ನು ಬಾಲಾಜಿ ಎಂದು ಕರೆಯಲಾಗುತ್ತದೆ. ಈ ಭೂಮಿಯಲ್ಲಿ ಯಾವುದೇ ಸ್ಥಳಕ್ಕೆ, ಯಾವುದಾದರೂ ಧರ್ಮ, ಯಾವುದಾದರೂ ಉಪಾಸನೆ ಮಾತ್ರ ಆದರೆ ಅವರವರ ಧರ್ಮದಂತೆ ವಿಧಿವಿಧಾನದಂತೆ ಆಚರಣೆಯಲ್ಲಿದೆ. ಮುಸಲ್ಮಾನರಲ್ಲಿ ಅಲ್ಲ ಒಬ್ಬನೆ, ಕ್ರೈಸ್ತರಲ್ಲಿ ಯೇಸು ಪ್ರಮುಖ, ಜೈನರಲ್ಲಿ ವರ್ಧಮಾನ ಮಹಾವೀರ, ಬೌದ್ಧರಲ್ಲಿ ಭಗವಾನ್ ಬುದ್ಧ, ಆರಾಧಿಸಲ್ಪಡುವುದು ಸಾಮಾನ್ಯವಾದ ಸಂಗತಿ. ಇಂದೂ ಧರ್ಮೀಯರು ಹೆಜ್ಜೆ ಹೆಜ್ಜೆಗೂ ಒಬ್ಬೊಬ್ಬರು ದೇವರನ್ನು ನೆನೆಯುತ್ತಾರೆ.
ಪ್ರತಿಯೊಂದು ಪ್ರಾಣಿ ,ಪಕ್ಷಿಯಲ್ಲಿ ಇಂದೂ ಧರ್ಮದವರು ದೇವರನ್ನು ಕಾಣುತ್ತಾರೆ. ಆದ್ದರಿಂದ ಸನಾತನ ಸಂಸ್ಕೃತಿಯಲ್ಲಿ ಏನಿಲ್ಲವೆಂದರೂ 33 ಕೋಟಿಗೂ ಅಧಿಕ ದೇವತೆಗಳು ಇದ್ದಾರೆ ಎಂದು ಹೇಳಲಾಗುತ್ತದೆ. ಹೀಗೆ ಈ ಧರೆಯಲ್ಲಿ ಅವತಾರ ಎತ್ತಿರುವ ಪ್ರತಿಯೊಂದು ದೈವ ಸ್ವರೂಪವು ಕೂಡ ತನ್ನದೇ ಆದ ಪವಿತ್ರತೆ ಮತ್ತು ಪ್ರಸಿದ್ಧಿಯನ್ನು ಸಾರುತ್ತದೆ. ಅಂತಹ ಶಕ್ತಿಯನ್ನು ನೆಲೆಗೊಂಡ ಶಕ್ತಿಗಳ ಬಗ್ಗೆ ಚಿಲ್ಕೂರ್ ಬಾಲಾಜಿ ಸ್ವಾಮಿಯ ದೇವಸ್ಥಾನವು ಒಂದು. ಈ ಕ್ಷೇತ್ರದಲ್ಲಿ ಹಲವು ಪವಾಡಗಳು ನಡೆಯುತ್ತವೆ. ಈ ಸ್ವಾಮಿಯನ್ನು ಅರಸಿ ಬಂದರೆ ಸಾಕು ನಾವು ಮನಸ್ಸಿನಲ್ಲಿ ಅಂದುಕೊಂಡದ್ದೆಲ್ಲ ನೆರವೇರುತ್ತದೆ. ಇದಕ್ಕೆ ಸಾಕ್ಷಿ ಇಲ್ಲಿಗೆ ಬರುವ ಭಕ್ತರು. ಈ ಭಗವಂತ ತನ್ನ ಭಕ್ತರಿಂದ ಕೇಳುವುದು ಕೇವಲ ಶುದ್ಧ ಭಕ್ತಿಯನ್ನು ಮಾತ್ರ. ಈ ಕಾರಣದಿಂದಾಗಿಯೇ ಬಾಲಾಜಿಯನ್ನು ದರ್ಶನ ಮಾಡುವುದಕ್ಕೆ ಹಣವನ್ನು ನೀಡಬೇಕಿಲ್ಲ.ಈ ದೇವಸ್ಥಾನದ ಪ್ರಾಂಗಣದಲ್ಲಿ ಎಲ್ಲಿಯೂ ನೋಡುವುದಕ್ಕೆ ಸಿಗುವುದಿಲ್ಲ. ಇದರಿಂದ ತಿಳಿಯುವುದೇನೆಂದರೆ ಸರ್ವಶಕ್ತ ಆಶಿಸುವುದು ನಿಷ್ಕಲ್ಮಶ ಭಕ್ತಿಯೇ ಹೊರತು ಅವರಿಂದ ಬೇರೆ ಇನ್ನೇನನ್ನು ಅಲ್ಲ.

 

 

 

ಈ ಪುಣ್ಯ ತಾಣಕ್ಕೆ ಎಲ್ಲಾ ಧರ್ಮಿಯರು ಬಂದು ತಮ್ಮ ಮನಸ್ಸಿನ ಇಚ್ಛೆಗಳನ್ನು ಈಡೇರಿಸುವಂತೆ ಬೇಡಿಕೊಳ್ಳುತ್ತಾರೆ. ಇಲ್ಲಿ ಬಂದು ವೆಂಕಟೇಶ್ವರನ ದರ್ಶನ ಮಾಡಿದರೆ ಸಂಕಷ್ಟಗಳು ದೂರವಾಗುತ್ತವೆ ಎನ್ನುವ ಅಚಲ ನಂಬಿಕೆ ಇದೆ ಈ ಕ್ಷೇತ್ರದಲ್ಲಿ ಬಡವ, ಶ್ರೀಮಂತ ಎನ್ನುವ ಬೇಧವಿಲ್ಲದೆ ಎಲ್ಲರೂ ಸರಿ ಸಮಾನರಾಗಿ ನಿಂತು ಸ್ವಾಮಿಯನ್ನು ದರ್ಶನ ಮಾಡುವ ಭಾಗ್ಯ ಕಲ್ಪಿಸಲಾಗಿದೆ. ಹೀಗಾಗಿ ದೇವರು ಎಲ್ಲವೂ ಒಂದೇ ತತ್ವವನ್ನು ಸಾಕ್ಷಾತ್ಕರಿಸಿದ್ದಾನೆ. ಬಾಲಾಜಿ ತನ್ನ ಭಕ್ತಾದಿಗಳಿಗೆ ಆಪತ್ಬಾಂಧವನಾಗಿ ಚಿಲಕೂರು ಬಾಲಾಜಿಯ ದರ್ಶನಕ್ಕೆ ಬರುವವರು ಈ ದೇಗುಲವನ್ನು ಭೂಲೋಕದ ವೈಕುಂಠ ಎಂದೇ ನಂಬಿದ್ದಾರೆ. ದಿನವೂ ಸಹಸ್ರಾರು ಭಕ್ತರು ಈ ಕ್ಷೇತ್ರಕ್ಕೆ ಬಂದು ಹೋಗುತ್ತಾರೆ. ಹೀಗೆ ಬಂದವರಲ್ಲಿ ಪ್ರತಿಯೊಬ್ಬರೂ ಒಳ್ಳೆಯದನ್ನೇ ಕಂಡಿದ್ದಾರೆ.

ದೇವರ ಬಳಿ ಸಂಪತ್ತು ,ಆರೋಗ್ಯ, ವಿವಾಹ, ಸಂತಾನಕ್ಕಾಗಿ ಬೇಡಿಕೊಳ್ಳುವುದು ಸಾಮಾನ್ಯ. ಆದರೆ ಇಲ್ಲಿಗೆ ಬರುವ ಬಹುಪಾಲು ಭಕ್ತರ ಬೇಡಿಕೆಗೆ ವಿಚಿತ್ರ. ಅವರು ಆತನ ಬಳಿ ಏನನ್ನು ಹೇಳುವುದಿಲ್ಲ. ಬದಲಾಗಿ ಅವರ ಬೇಡಿಕೆ ಇರುವುದು ವೀಸಾ ಕೊಡಿಸು ಭಗವಂತ ಎನ್ನುವುದು. ವಿದೇಶಕ್ಕೆ ಪ್ರಯಾಣ ಬೆಳೆಸಬೇಕು ಎಂದರೆ ವೀಸಾ ಬೇಕೆ ಬೇಕು.ವೀಸಾ ಮಾಡಿಕೊಳ್ಳಲು ಹೊರಟರೆ ಆ ಕೆಲಸವೇನು ಬಹುಬೇಗನೆ ಮುಗಿಯುವುದಿಲ್ಲ . ದಿನವಿಡೀ ಕಾದು ಕುಳಿತು, ಕ್ಯೂನಲ್ಲಿ ನಿಂತು, ಕೊನೆಗೆ ಕಚೇರಿಯ ಒಳಗೆ ಪ್ರವೇಶಿಸಿದರೆ ಅವರು ಅಲ್ಲಿ ಹೇಳುವುದು ದಾಖಲೆ ಸರಿಯಿಲ್ಲ, ವಿದೇಶಕ್ಕೆ ಹೋಗುವುದು ಯಾಕೆ ? ಎಂದು ಹೇಳುತ್ತಾರೆ. ಒಟ್ಟಿನಲ್ಲಿ ವೀಸಾ ಪಡೆಯುವುದಕ್ಕೆ ಹರಸಾಹಸ ಪಡಬೇಕು. ಆದರೆ ಇದಕ್ಕೆ ಇನ್ನೊಂದು ಸುಲಭ ಪರಿಹಾರ ಇದೆ. ಅಚ್ಚರಿ ಏನೆಂದರೆ ಈ ದೇಶಕ್ಕೆ ಹೊರಡಲು ವೀಸಾಕ್ಕೆ ಅರ್ಜಿ ಸಲ್ಲಿಸಿದವರು ಈ ದೇವಾಲಯಕ್ಕೆ ಭೇಟಿ ನೀಡಿ ಬೇಗನೆ ವೀಸಾ ಕಳಿಸು ಎಂದು ಕೇಳಿಕೊಂಡರೆ ಸಾಕು ಪಡೆಯಲು ಇರುವ ಸಮಸ್ಯೆಗಳು ಮಂಜಿನಂತೆ ಮಾಯವಾಗುತ್ತವೆ. ಅಂದುಕೊಂಡ ಕೆಲಸ ಸುಲಭವಾಗಿ ಸಾಧ್ಯವಾಗುತ್ತದೆ. ಈಗಾಗಲೇ ಹಲವರು ಇಲ್ಲಿಗೆ ಬಂದು ಸ್ವಾಮಿಯ ಕೃಪೆಯಿಂದ ವೀಸಾ ಪಡೆದು ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಹಾಗೆ ಪರಿಹಾರ ಕಂಡುಕೊಂಡ ಭಕ್ತರಿಗೆ ಲೆಕ್ಕವೇ ಇಲ್ಲ. ಈ ಕಾರಣದಿಂದಾಗಿಯೇ ಈ ದೇವರನ್ನು “ವೀಸಾ ಬಾಲಾಜಿ” ಎಂದು ಕರೆಯಲಾಗುತ್ತದೆ.

 

 

 

ಇಂದೂಗಳು ಅಷ್ಟೇ ಅಲ್ಲ, ಇತರ ಧರ್ಮದವರು ಕೂಡ ಇಲ್ಲಿಗೆ ಬಂದು ವೀಸಾಕ್ಕೆ ಹರಕೆ ಹೊತ್ತುಕೊಳ್ಳುತ್ತಾರೆ. ಸ್ವಾಮಿಗೆ ಬಂದು ಹರಕೆ ಹೊತ್ತ ಕೆಲವೇ ದಿನಗಳಲ್ಲಿ ಭಕ್ತರು ವೀಸಾವನ್ನು ಬಹುಬೇಗ ಯಾವುದೇ ತೊಂದರೆ ಇಲ್ಲದೆ ಪಡೆಯುತ್ತಾರೆ. ವಿದೇಶಕ್ಕೆ ಪ್ರಯಾಣ ಬೆಳೆಸಬೇಕು ಎಂದು ಅಂದುಕೊಂಡವರಿಗೆ ಈ ಸ್ವಾಮಿ ಒಳ್ಳೆಯದನ್ನು ಮಾಡುತ್ತಿದ್ದಾನೆ. ಹಾಗಾದರೆ ಈ ಸ್ವಾಮಿಯ ದರ್ಶನಕ್ಕೆ ಎಷ್ಟು ಹಣಬೇಕು ಎಂದು ಯೋಚಿಸುತ್ತಿದ್ದೀರ, ಇದನ್ನು ಕೇಳಿದರೆ ನೀವು ನಿಬ್ಬೆರಗಾಗುತ್ತೀರಿ, ಮೊದಲೇ ಹೇಳಿದಂತೆ ಬಾಲಾಜಿಯ ಸನ್ನಿಧಿಯಲ್ಲಿ ಒಂದೇ ಒಂದು ಹುಂಡಿಯು ಕೂಡ ಕಾಣುವುದಿಲ್ಲ. ಹಾಗೆ ಇಲ್ಲಿ ಅರ್ಚಕರಿಗೂ ಕೂಡ ದಕ್ಷಿಣೆ ನೀಡಬೇಕಿಲ್ಲ, ನಾವು ನಮ್ಮ ಬೇಡಿಕೆಗಳನ್ನು ಭಕ್ತಿಯಿಂದ ಭಗವಂತನ ಮುಂದೆ ಇಟ್ಟು ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೇಳಿಕೊಂಡರೆ ಸಾಕು ನಮ್ಮ ಬೇಡಿಕೆಗಳು ಈಡೇರಿದ ಮೇಲೆ ಈ ಭಗವಂತನ ಸನ್ನಿಧಿಗೆ ಬಂದು 108 ಪ್ರದಕ್ಷಿಣೆಗಳನ್ನು ಹಾಕಬೇಕು. ಯಾಕೆಂದರೆ ಅದೊಂದು ಇಲ್ಲಿರುವ ವೈಕುಂಟ ಒಡೆಯನಿಗೆ ಸಮರ್ಪಿಸಬೇಕಾಗಿರುವ ಏಕೈಕ ಕಾಣಿಕೆ. ನಿಜಕ್ಕೂ ಈ ಚಿಲಕೂರು ಬಾಲಾಜಿ ಭಕ್ತರಿಗೆ ಸಕಲವೂ ಕರುಣಿಸುವ ಈ ಸ್ವಾಮಿಯ ಅಲಯ ಭಕ್ತರ ಬಾಳನ್ನು ಬೆಳಗುವ ದಿವ್ಯ ತಾಣವಾಗಿದೆ. ಇಲ್ಲಿಗೆ ಬರುವ ಭಕ್ತರಲ್ಲಿ ಬಹುಪಾಲು ವಿದೇಶಕ್ಕೆ ಹೋಗಲು ವೀಸಾ ಬಯಸುವವರೇ, ಏನಿಲ್ಲವೆಂದರೂ ಪ್ರತಿ ವಾರ ಸುಮಾರು 75 ಸಾವಿರದಿಂದ 1 ಲಕ್ಷ ಭಕ್ತರು ಬಾಲಾಜಿಯ ದರ್ಶನಕ್ಕೆ ಬರುತ್ತಾರೆ.

 

ತೆಲಂಗಾಣದ ರಾಜಧಾನಿಯಾದ ಹೈದರಾಬಾದ್ ಅತ್ಯಂತ ಜನ ನಿಬಿಡ ನಗರಗಳಲ್ಲಿ ಒಂದು. ಇದನ್ನು ಮುತ್ತುಗಳ ನಗರ,ನಿಜಾಮರ ನಗರ ಎಂದು ಕರೆಯಲಾಗುತ್ತದೆ.ಈ ಹೈದ್ರಾಬಾದ್ ಮಹಾನಗರದಲ್ಲಿದೆ ಈ ಭವ್ಯ ಪವಾಡ ಸದೃಶ ತಾಣ ಚಿಲಕೂರು. ಇಲ್ಲಿನ ಭವ್ಯ ಅಚ್ಚ ಹಸಿರಿನ ಪ್ರಕೃತಿಯ ಆವರಣದಲ್ಲಿ ಉಸ್ಮಾನಿಯಾ ಜಲಾಶಯದ ಪಕ್ಕದಲ್ಲೇ ಒಂದು ಪುಟ್ಟ ದೇವಾಲಯವಿದೆ ಅದೇ ಚಿಲಕೂರು ಬಾಲಾಜಿ ಪುಣ್ಯ ಸಾನಿಧ್ಯ.ಅನೇಕ ಪುಣ್ಯಕ್ಷೇತ್ರಗಳ ತವರೂರಾಗಿರುವ ಈ ರಾಜ್ಯ ಧಾರ್ಮಿಕ ಕ್ರಿಯಾ ವಿಧಿಗಳಿಂದಲೇ ಗುರುತಿಸಿಕೊಂಡಿದೆ.ಈ ಚರಿತ್ರೆಯಲ್ಲಿ ಅಚ್ಚಳಿಯದೇ ಉಳಿದುಕೊಂಡಿರುವ ಗೋಲ್ಕೊಂಡ ಕೋಟೆಯ ಪ್ರಮುಖ ಐತಿಹಾಸಿಕ ಕುರುಹುಗಳು ಇಲ್ಲಿ ಕಾಣಸಿಗುತ್ತವೆ.
ಇದು ಮೊಘಲರು, ನಿಜಾಮರು, ಕಲ್ಯಾಣಿ ಚಾಲುಕ್ಯರು, ಕಾಕತೀಯರು ಆಳ್ವಿಕೆ ಮಾಡಿರುವ ನಗರ ಎಂದು ಇಲ್ಲಿ ಕಾಣಸಿಗುವ ಕೆಲವು ಶಾಸನಗಳಿಂದ ತಿಳಿದು ಬರುತ್ತದೆ. ಹಲವಾರು ರಾಜವಂಶರು ಆಳಿದ ಪ್ರದೇಶ ಇದು. ಈ ಗ್ರಾಮದ ಸುತ್ತಲೂ ಕೋಟೆಯ ಕುರುಹುಗಳನ್ನು ಕಾಣಬಹುದು. ಹಾಗೆಯೇ ಈ ಗ್ರಾಮದಲ್ಲಿ ಬಹಳ ಪುರಾತನವಾದ ಆಂಜನೇಯ ದೇವಾಲಯವಿದೆ, ಹಳೆಯದಾದ ಶಿವಾಲಯ, ಚಾಲುಕ್ಯರು ಮತ್ತು ಮೊಘಲರ ವಾಸ್ತುಶಿಲ್ಪ ಶೈಲಿಯನ್ನು ಹೊಂದಿರುವ ಕಟ್ಟಡಗಳು ಇಲ್ಲಿನ ಪ್ರಮುಖ ಆಕರ್ಷಣೆಗಳು. ಈ ದೇವಾಲಯದ ವಾಸ್ತು ಶಿಲ್ಪವನ್ನು ಪರಿಶೀಲಿಸಿದ ನಂತರ ಇದು ಸುಮಾರು ಐದು ನೂರು ವರ್ಷಗಳಷ್ಟು ಹಳೆಯದು ಎಂದು ತಿಳಿಯಲಾಗಿದೆ. ಪ್ರತ್ಯೇಕ ಶೈಲಿಯಿಂದಾಗಿ ಈ ಕ್ಷೇತ್ರ ಪ್ರತಿವರ್ಷವೂ ಸಹಸ್ರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಈ ಪುರಾತನ ದೇವಾಲಯ ಇಷ್ಟೊಂದು ಪ್ರಸಿದ್ಧಿಯಾಗಿದ್ದರೂ ಕೂಡ ರಾಜ್ಯ ಅಥವಾ ಕೇಂದ್ರ ಸರ್ಕಾರದ ಒಡೆತನಕ್ಕೆ ಒಳಪಟ್ಟಿಲ್ಲ.

 

 

 

ಈ ದೇವಾಲಯ ನಿರ್ಮಾಣಗೊಂಡಿರುವುದರ ಹಿಂದೆ ಒಂದು ಪೌರಾಣಿಕ ಕಥೆ ಇದೆ. ಈ ದೇವಾಲಯಕ್ಕೆ ಸುಮಾರು 500 ವರ್ಷಗಳ ಹಿಂದೆ ಗುಣಲ ಮಾಧವ ರೆಡ್ಡಿ ಎನ್ನುವ ವ್ಯಕ್ತಿ ಚಿಲಕೂರಿನಲ್ಲಿ ಇದ್ದ ಅವರು ತಿರುಪತಿ ವೆಂಕಟೇಶ್ವರನ ಪರಮ ಭಕ್ತರಾಗಿದ್ದರು. ಹೀಗಿರುವಾಗ ಅವನು ಒಂದೊಮ್ಮೆ ತಿಮ್ಮಪ್ಪನ ದರ್ಶನಕ್ಕೆ ತೆರಳಬೇಕಿತ್ತು, ಆಗಿನ ಕಾಲದಲ್ಲಿ ಸರಿಯಾದ ಸಾರಿಗೆ ವ್ಯವಸ್ಥೆ ಇರದಿದ್ದ ಕಾರಣ ದಿಂದಾಗಿ ತಿಮ್ಮಪ್ಪನ ಕ್ಷೇತ್ರಕ್ಕೆ ಕಾಲ್ನಡಿಗೆಯಲ್ಲೇ ತೆರಳಬೇಕಿತ್ತು. ವಯೋವೃದ್ಧರಾಗಿ ತಿರುಮಲ ಪಾದಯಾತ್ರೆ ಕೈಗೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ, ತಿಮ್ಮಪ್ಪನ ದರ್ಶನ ಸಾಧ್ಯವಾಗಲಿಲ್ಲ ಎಂದು ಪರಿತಪಿಸುವುದನ್ನು ಅರಿತ ವೆಂಕಟೇಶ್ವರ ಸ್ವಾಮಿ ತನ್ನ ಭಕ್ತರಿಗಾಗಿ ಸಹ ಧರ್ಮಿಣಿಯರಾದ ಶ್ರೀದೇವಿ ಮತ್ತು ಭೂದೇವಿಯರೊಂದಿಗೆ ಇಲ್ಲಿಗೆ ಬಂದು ನೆಲೆಸಿದ್ದಾನೆ ಎಂದು ಇಲ್ಲಿನ ಸ್ಥಳ ಪುರಾಣ ಹೇಳುತ್ತದೆ. ಅಂದಿನಿಂದ ಇಂದಿನವರೆಗೂ ಚಿಲಕೂರಿನಲ್ಲಿ ನೆಲೆ ನಿಂತು ಬಾಲಾಜಿಗೆ ಭಕ್ತರನ್ನು ಪೊರೆಯುತ್ತಿದ್ದಾನೆ. ಈ ಸ್ವಾಮಿಯ ದೇವಾಲಯದ ಮುಖ್ಯ ದ್ವಾರ ಸುಂದರವಾದ ಕೆತ್ತನೆಗಳಿಂದ ಕೂಡಿದ್ದು ಭಕ್ತರನ್ನು ತನ್ನತ್ತ ಆಕರ್ಷಿಸುತ್ತದೆ.

ಈ ದೇವಾಲಯದ ದ್ವಾರವನ್ನು ಪ್ರವೇಶಿಸುತ್ತಿದ್ದಂತೆ ಮುಂಭಾಗದಲ್ಲಿ ಪಂಚಲೋಹದಿಂದ ನಿರ್ಮಿತವಾದ ಧ್ವಜಸ್ಥಂಭ ಕಾಣುತ್ತದೆ. ಇದು ಧ್ವಜಸ್ತಂಭ ಸ್ವಾಮಿಯ ದೇವಾಲಯವನ್ನು ಪುನರ್ ನವೀಕರಿಸುವ ಸಮಯದಲ್ಲಿ ಕಟ್ಟಲಾಯಿತು ಎನ್ನಲಾಗಿದೆ. ಇನ್ನು ಧ್ವಜಸ್ತಂಭದ ಪಕ್ಕದಲ್ಲಿ ಆಂಜನೇಯ ಸ್ವಾಮಿಯ ಗುಡಿಯಿದೆ. ಇಲ್ಲಿರುವ ವಾಯುಪುತ್ರ ಇಲ್ಲಿಗೆ ಬಂದ ಭಕ್ತರ ಭಯವನ್ನು ನಿವಾರಿಸುತ್ತಾನೆ ಎನ್ನುವ ನಂಬಿಕೆ ಇದೆ. ಹೀಗಾಗಿ ಈ ಕ್ಷೇತ್ರಕ್ಕೆ ಬಂದ ಭಕ್ತರು ಈ ಸ್ವಾಮಿಗೆ ತೆಂಗಿನ ಕಾಯಿಯನ್ನು ಒಡೆದು ಭಕ್ತಿಯನ್ನು ಸಮರ್ಪಿಸುತ್ತಾರೆ.ವಿಳಾಸ.ತೆಲಂಗಾಣದ ರಾಜಧಾನಿ ಹೈದರಾಬಾದ್ ಸಮೀಪದ ಚಿಲಕೂರು ಎನ್ನುವ ಗ್ರಾಮದಲ್ಲಿದೆ.ಈ ಕ್ಷೇತ್ರ ವೀಸಾ ಬಾಲಾಜಿ ದೇವಾಲಯ ಎಂದೇ ಪ್ರಸಿದ್ಧಿ ಪಡೆದಿದೆ. ಬೆಂಗಳೂರಿನಿಂದ ಚಿಲಕೂರು ಬಾಲಾಜಿ ದೇವಾಲಯ 569 ಕಿಲೋಮೀಟರ್ ಅಂತರವಿದೆ. ಬೆಂಗಳೂರಿನಿಂದ ಸಾರಿಗೆ ಮತ್ತು ರೈಲುಗಳ ವ್ಯವಸ್ಥೆ ಇದೆ . ಶ್ರೀ ಸಾಮಾನ್ಯನಿಂದ ಗಣ್ಯ ವ್ಯಕ್ತಿಯ ವರೆಗೆ ಎಲ್ಲರನ್ನೂ ಸಮಾನವಾಗಿ ಕಾಣಲಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top