fbpx
ಸಮಾಚಾರ

“ನಾನು ಅವರಿಂದ ಕಿರುಕುಳಕ್ಕೆ ಒಳಗಾಗಿದ್ದೇನೆ” ಗುರುಪ್ರಸಾದ್ ‘ಪ್ರತಿವ್ರತೆ’ ಹೇಳಿಕೆಗೆ ಧನಂಜಯ್ ಕಿಡಿ.

ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ನಟಿಯರ ವಿರುದ್ಧ ಅಬ್ಬರಿಸಿ ಬೊಬ್ಬರಿದಿದ್ದ ಮಠ ಚಿತ್ರದ ನಿರ್ದೇಶಕ ಗುರುಪ್ರಸಾದ್ ವಿರುದ್ಧ ನಟ ಧನಂಜಯ್ ಕಿಡಿಕಾರಿದ್ದಾರೆ. ಮೀಟೂ ಅಭಿಯಾನದಲ್ಲಿ ತಮ್ಮ ನೋವುಗಳನ್ನ ಹೇಳಿಕೊಳ್ಳುತ್ತಿರುವ ಹೆಣ್ಣುಮಕ್ಕಳ ಬಗ್ಗೆ ಹಗುರವಾಗಿ ಗುರುಪ್ರಸಾದ್ ಮಾತನಾಡಿದ್ದ ಬಗ್ಗೆ ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿರುವ ಧನಂಜಯ್ ಗುರುಪ್ರಸಾದ್ ವಿರುದ್ಧ ಸಿಡಿದು ಸಂಗೀತಾ ಪರ ಬ್ಯಾಟಿಂಗ್ ನಡೆಸಿದ್ದಾರೆ.

“ನಿರ್ದೇಶಕ ಗುರುಪ್ರಸಾದ್ ರ ಎಲ್ಲಾ ಹೇಳಿಕೆಗಳನ್ನು ನಾನು ವಿರೋಧಿಸುತ್ತೇನೆ. ಇವರ ಹೇಳಿಕೆಯಿಂದಾಗಿ ಸಂಗೀತಾ ಭಟ್ ಸೇರಿದಂತೆ ಎರಡನೇ ಸಲ ಚಿತ್ರದಲ್ಲಿ ಕೆಲಸ ಮಾಡಿದ್ದ ಎಲ್ಲರೂ ತೊಂದರೆ ಅನುಭವಿಸುವಂತಾಗಿದೆ,, ಒಂದು ವರ್ಷದ ಹಿಂದೆ ಎರಡನೇ ಸಲ ಸಿನಿಮಾದ ವಿಚಾರಕ್ಕೆ ನನ್ನ ವಿರುದ್ಧ ಲೈವ್ ನಲ್ಲಿ ಹರಿಹಾಯ್ದಿದ್ದರು. ನನ್ನನ್ನು ಐರನ್ ಲೆಗ್, ಗೊಡ್ಡಹಸು ಎಂದು ನೇರವಾಗಿ ಆರೋಪಿಸುವ ಮೂಲಕ ಕೆಟ್ಟದಾಗಿ ಮಾತನಾಡಿದ್ದರು. ಅದು ಸಹ ಕಿರುಕುಳವಲ್ಲವೇ, ನಾನು ಸಹ ಅವರಿಂದ ಕಿರುಕುಳಕ್ಕೆ ಒಳಗಾಗಿದ್ದೇನೆ. ಅವರು ಆಡುವ ಮಾತನ್ನು ಕೇಳಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿದರು.

“ಗುರುಪ್ರಸಾದ್ ಅವರಿಗೆ ನೈತಿಕತೆ ಇದ್ದಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ. ಮನುಷ್ಯನಿಗೆ ಇಷ್ಟೊಂದು ಸೇಡು ಇರಬಾರದು. ನೀವು ನಿಮ್ಮ ಸುತ್ತಮುತ್ತಲಿನ ನಾಲ್ಕು ಜನರನ್ನು ತುಳಿಯಲು ಪ್ರಯತ್ನಿಸುತ್ತಿದ್ದೀರಿ. ಆದರೆ ನಿಮ್ಮನ್ನು ಸಹ ತುಳಿಯುವವರೂ ಇರುತ್ತಾರೆ. ಇವಾಗಲಾದರೂ ನಿಮ್ಮ ಪರವಾಗಿ ಮಾತನಾಡುವ ನಾಲ್ಕು ಜನರನ್ನ ಉಳಿಸಿಕೊಳ್ಳಿ. ಈ ರೀತಿಯ ವರ್ತನೆಯನ್ನು ಬಿಟ್ಟು ನೆಮ್ಮದಿಯಾಗಿ ಉಸಿರಾಡುವುದನ್ನು ಕಲಿತುಕೊಳ್ಳಲಿ” ಎಂದು ಧನಂಜಯ್ ಕಿಡಿಕಾರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top