ದೇವರು

ದೀಪಾವಳಿಯ ಹಿಂದಿನ ದಿನ ಹೀಗೆ ಮಾಡಿದರೆ ನಿಮಗೆ ಅದೃಷ್ಟ ಒಲಿದು ನಿಮ್ಮ ಮನೆಯಲ್ಲಿಅಷ್ಟ ಐಶ್ವರ್ಯ ತುಂಬಿ ತುಳುಕುತ್ತಂತೆ

ದೀಪಾವಳಿ ಎಂದರೆ ದೀಪಗಳ ಹಬ್ಬ, ದೀಪಾವಳಿಯ ಹಿಂದಿನ ದಿನ ದೇವಾಲಯಕ್ಕೆ ಹೋಗಿ ಒಂದು ವಸ್ತುವನ್ನು ದಾನ ಮಾಡಿದರೆ ಸಾಕು, ನಿಮಗೆ ಅಷ್ಟ ಐಶ್ವರ್ಯಗಳು, ಸಿರಿ, ಸಂಪತ್ತುಗಳ ನಿಮಗೆ ಸಿಗುತ್ತವೆ.ನವರಾತ್ರಿಗೆ ಮುಗಿದಿದೆ ಪ್ರತಿ ಮನೆಯಲ್ಲೂ ಹಿರಿಯರಿಂದ ಕಿರಿಯರವರೆಗೆ ಪ್ರತಿಯೊಬ್ಬರೂ ಇಷ್ಟಪಡುವ ಹಬ್ಬವೇ ಬೆಳಕಿನ ಹಬ್ಬ ದೀಪಾವಳಿ. ದೀಪಾವಳಿ ಎಂದರೆ ಅಮಾವಾಸ್ಯೆಯ ದಿನ ಜಗನ್ಮಾತೆಯಾದ ಶ್ರೀ ಮಹಾಲಕ್ಷ್ಮಿ ದೇವಿಯನ್ನು ಪೂಜಿಸುವುದು. ಪ್ರತಿಯೊಬ್ಬರೂ ಪ್ರತಿನಿತ್ಯ ಲಕ್ಷ್ಮಿ ದೇವಿಯನ್ನು ಪೂಜಿಸುವವರೇ, ಯಾಕೆಂದರೆ ಆಕೆ ಭಕ್ತರ ಕೋರಿಕೆಯನ್ನು ತೀರಿಸುವ ದೇವತೆ. ಆಕೆ ಇದ್ದರೆ ಸಾಕು ಮನೆಯಲ್ಲಿ ಎಲ್ಲಾ ತಾನಾಗಿ ತಾನೇ ಪೂರೈಕೆಯಾಗುತ್ತದೆ. ಹೀಗಾಗಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಕೋರಿಕೆಗಳು ಇರುತ್ತವೆ. ಕೋರಿಕೆಗಳನ್ನು ಈಡೇರಿಸಲು ಜಗನ್ಮಾತೆಯಾದ ಜಗತ್ ಜನನಿ ಶ್ರೀ ಮಹಾಲಕ್ಷ್ಮಿ ದೇವಿಯನ್ನು ತಪ್ಪದೇ ಪೂಜಿಸಬೇಕು.

 

 

 

ಪ್ರತಿನಿತ್ಯ ಶ್ರೀ ಮಹಾಲಕ್ಷ್ಮಿ ದೇವಿಯನ್ನು ಭಕ್ತಿ, ಶ್ರದ್ಧೆಯಿಂದ ಪೂಜಿಸುತ್ತೇವೆ. ದೀಪಾವಳಿ ಅಮಾವಾಸ್ಯೆಯ ದಿನ ಶ್ರೀ ಮಹಾಲಕ್ಷ್ಮಿಯನ್ನು ಈ ರೀತಿ ಪೂಜಿಸಿದರೆ ಸಾಕು, ನಮ್ಮ ಮನೆಗೆ ಉತ್ತಮವಾದಂತಹ ಫಲಗಳು ಸಿದ್ಧಿಸುತ್ತವೆ. ಹಾಗಾದರೆ ಹೇಗೆ ಪೂಜಿಸಬೇಕು ನಿಮ್ಮ ಕೋರಿಕೆಯ ಅನುಸಾರವಾಗಿ ಆ ಮಾತೆಯನ್ನು ಪೂಜಿಸಿದರೆ ಸಾಕು ನಿಮ್ಮ ಇಷ್ಟಾರ್ಥಗಳು ಸಿದ್ಧಿಸುತ್ತದೆ. ದಸರಾದಿಂದ ದೀಪಾವಳಿಯವರೆಗೂ ಸಿಗುವ ಎಷ್ಟು ದಿನಗಳು ಸಾಧ್ಯವೋ, ಅಷ್ಟು ದಿನ ಲಕ್ಷ್ಮೀ ದೇವಿಯನ್ನು ಪೂಜಿಸಬೇಕು. ಹೀಗೆ ಆರಂಭ ಮಾಡಿದ ದಿನದಿಂದ ನಿಮ್ಮ ಕೋರಿಕೆಯನ್ನು ಸಂಕಲ್ಪ ಮಾಡಿಕೊಂಡು ಪೂಜಿಸಬೇಕು, ಸಾಲದ ಬಾಧೆಯಿಂದ ಬಳಲುತ್ತಿರುವವರು ಸಾಲದ ಭಾದೆಯಿಂದ ಹೊರಗೆ ಬರಲು ಪ್ರಾರ್ಥಿಸಿದರೆ ಸಂಪತ್ತು ಬೆಳೆಯಬೇಕು ಎಂದು ಪೂಜಿಸುವವರು ಸಂಪತ್ತು ಬೆಳೆಯಲು ಪೂಜಿಸಬೇಕು.ಲಕ್ಷ್ಮಿ ದೇವಿಯ ಫೋಟೋದ ಮುಂದೆ ನಿಮ್ಮ ಯಥಾನುಶಕ್ತಿ ನಾಣ್ಯಗಳನ್ನು ಮತ್ತು ನೋಟುಗಳನ್ನು ಇಟ್ಟು ಪೂಜಿಸಬೇಕು. ಹೀಗೆ ಪೂಜಿಸಿದ ನಂತರ ಆ ನೋಟನ್ನು ತೆಗೆದು ಲಕ್ಷ್ಮಿ ದೇವಿಯ ಫೋಟೋದ ಹಿಂದಗಡೆ ಇಡಬೇಕು. ಹೀಗೆ ಪ್ರತಿನಿತ್ಯ ನೋಟುಗಳನ್ನು ಲಕ್ಷ್ಮೀ ದೇವಿಯ ಹಿಂದೆ ಇಡುತ್ತಾ ಬರಬೇಕು. ಹೀಗೆ ಪ್ರತಿನಿತ್ಯ ಮಾಡಿ ದೀಪಾವಳಿಯ ಹಿಂದಿನ ದಿನ ಆ ನೋಟುಗಳನ್ನೆಲ್ಲ ತೆಗೆದುಕೊಂಡು ಯಾವುದಾದರೂ ದೇವಾಲಯದಲ್ಲಿ ಯಾರಾದರೂ ಒಬ್ಬರಿಗೆ ದಾನ ಮಾಡಬೇಕು. ಹೀಗೆ ದಾನ ಮಾಡುವುದರಿಂದ ಅಷ್ಟೈಶ್ವರ್ಯಗಳು ಸಿದ್ದಿಸುತ್ತವೆ ಮತ್ತು ಸಾಲದ ಬಾಧೆಯಿಂದ ಕೂಡ ನಿವಾರಣೆಯಾಗುತ್ತೇವೆ ಮತ್ತು ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಸ್ವಂತ ಮನೆಯೂ ಸಿಗುತ್ತದೆ. ಹಾಗೆಯೇ ಸಿರಿ ,ಸಂಪತ್ತು ಬಯಸುವವರು ಹೀಗೆ ಮಾಡಬೇಕು.

 

ಒಂದು ಬೆಳ್ಳಿಯ ನಾಣ್ಯವನ್ನು ತೆಗೆದುಕೊಂಡು, ಆ ನಾಣ್ಯವನ್ನು ಭಗವಂತನ, ಅಂದರೆ ನಿಮ್ಮ ದೇವರ ಕೋಣೆಯಲ್ಲಿರುವ ಫೋಟೋದ ಮುಂದೆ ಇಟ್ಟು ಜಗನ್ಮಾತೆ ಲಕ್ಷ್ಮಿದೇವಿಯ ಮುಂದೆ ಇಟ್ಟು ಪ್ರಾರ್ಥಿಸಿ, ಪ್ರತಿನಿತ್ಯ ಪೂಜಿಸಿ. ದೀಪಾವಳಿಯ ಹಿಂದಿನ ದಿನ ಬೆಳ್ಳಿಯ ನಾಣ್ಯವನ್ನು ತೆಗೆದುಕೊಂಡು ಹೋಗಿ ಅಶ್ವತ ಮರ ಅಥವಾ ಅರಳಿ ಮರದ ಹತ್ತಿರ ಸ್ವಲ್ಪ ಮಣ್ಣನ್ನು ತೆಗೆದು ಆ ನಾಣ್ಯವನ್ನು ಮಣ್ಣಿನಿಂದ ಮುಚ್ಚಿ. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಅಖಂಡ ಸಂಪತ್ತು ಪ್ರಾಪ್ತಿಯಾಗುತ್ತದೆ. ನಿಮ್ಮ ಯತಾನುಶಕ್ತಿಯ ಅನುಸಾರವಾಗಿ ಹೀಗೆ ಮಾಡಿ.ಬೆಳ್ಳಿಯ ನಾಣ್ಯ, ಬಂಗಾರ ನಾಣ್ಯ ಅಥವಾ ಪಂಚಲೋಹದ ನಾಣ್ಯವನ್ನು ಅಥವಾ ಲೋಹದ ನಾಣ್ಯವನ್ನಾದರೂ ಸರಿ ಅದನ್ನು ಅಶ್ವತ ಮರದ ಕೆಳಗೆ ಇಡುವುದರಿಂದ ಸಕಲ ಸಿರಿಸಂಪತ್ತು ಬಂದೊದಗುತ್ತದೆ. ಸಾಕ್ಷಾತ್ ಶ್ರೀ ಮಹಾಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ಬಂದು ನೆಲೆಸುತ್ತಾಳೆ. ಈ ಒಂದು ಚಿಕ್ಕ ಉಪಾಯ ಮಾಡುವುದರಿಂದ ಶ್ರೀ ಮಹಾಲಕ್ಷ್ಮಿ ದೇವಿಯ ಅನುಗ್ರಹ ನಿಮಗೆ ಲಭಿಸುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top