ಸಮಾಚಾರ

ಬಿಜೆಪಿ ಬದಲು ಟಿಎಂಸಿಗೆ ಬೆಂಬಲ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿಯ ಸ್ವಂತ ತಮ್ಮ ಪ್ರಹ್ಲಾದ್ ಮೋದಿ.

ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ (ಎಐಟಿಎಂಸಿ) ಪಕ್ಷಕ್ಕೆ ತಮ್ಮ ಬೆಂಬಲ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿಯ ಸ್ವಂತ ತಮ್ಮ ಪ್ರಹ್ಲಾದ್ ಮೋದಿ ಘೋಷಿಸಿದ್ದಾರೆ.. ಅಕ್ಟೋಬರ್ 31ರಂದು ಕೋಲ್ಕತ್ತಾದ ಡಂಡಂನಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ..

ಸದ್ಯ ನ್ಯಾಯ ಬೆಲೆ ಅಂಗಡಿಗಳ ಒಕ್ಕೂಟದ ಅಧ್ಯಕ್ಷರಾಗಿರುವ ಪ್ರಹ್ಲಾದ್ ಮೋದಿ ಅವರು ಬಿಜೆಪಿಯನ್ನು ವಿರೋಧಿಸಿ ಇದೀಗ ಟಿಎಂಸಿಗೆ ಬೆಂಬಲ ಘೋಷಿಸಿದ್ದಾರೆ. ಅವರಷ್ಟೇ ಅಲ್ಲದೇ ಅವರ ಅಧ್ಯಕ್ಷತೆಯ ಎಲ್ಲಾ ನ್ಯಾಯ ಬೆಲೆ ಅಂಗಡಿಗಳ ಒಕ್ಕೂಟ ಕೂಡ ಟಿಎಂಸಿಗೆ ಬೆಂಬಲ ಘೋಷಿಸಿದೆ. ಕೇಂದ್ರದ ಬಿಜೆಪಿ ಸರಕಾರವನ್ನು ಕೆಳಗಿಳಿಸಲು ತಮ್ಮ ಸಂಘಟನೆಯು ಟಿಎಂಸಿಯನ್ನು ಬೆಂಬಲಿಸುತ್ತಿರುವುದಾಗಿ ಅವರು ತಿಳಿಸಿದರು.

 

 

ಸದ್ಯದಲ್ಲೇ ನ್ಯಾಯ ಬೆಲೆ ಅಂಗಡಿಗಳ ಒಕ್ಕೂಟದಿಂದ ಮೋದಿ ವಿರೋಧ ಅಭಿಯಾನ ಆರಂಭಿಸಲಿದ್ದು ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ಭೇಟಿ ನೀಡಿ ಮೋದಿ ವಿರೋಧಿ ಅಭಿಯಾನ ಪ್ರಾರಂಭಿಸಲಿದ್ದಾರೆ.. ಈ ಅಭಿಯಾನದಲ್ಲಿ ಪ್ರಹ್ಲಾದ್ ಮೋದಿ ಕೂಡ ಹಾಜರಿರಲಿದ್ದಾರೆ..ಪ್ರಧಾನ ಮಂತ್ರಿಯ ಸ್ವಂತ ತಮ್ಮನಾಗಿ ಉನ್ನತ ಸ್ಥಾನದಲ್ಲಿರುವ ಅಣ್ಣನನ್ನು ಮತ್ತು ಅಣ್ಣನ ಪಕ್ಷ ಬಿಟ್ಟು ಬೇರೊಂದು ಪಕ್ಷಕ್ಕೆ ಬೆಂಬಲ ಘೋಷಿಸಿರುವುದು ನಿಜಕ್ಕೂ ಅಚ್ಚರಿದಾಯಕ ಬೆಳವಣಿಗೆಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top