ಮನೋರಂಜನೆ

ಏನ್ ಕಾಲ ಬಂತು,ಒಬ್ಬ ನಟಿಯಿಂದ ಇನ್ನೊಬ್ಬ ನಟಿಯ ಮೇಲೆ ಮೀಟೂ ಆರೋಪ

ಬಾಲಿವುಡ್‌ನಲ್ಲಿ ಹುಟ್ಟಿಕೊಂಡ ಮೀ ಟೂ ಅಭಿಯಾನ ಸ್ಯಾಂಡಲ್‌ವುಡ್‌ನತ್ತಲೂ ಬಂದು ಅನೇಕ ಕಾಂಟ್ರವರ್ಸಿ ಗಳನ್ನೂ ಹುಟ್ಟಿಹಾಕಿತ್ತು. ನಟಿಯರನೇಕರು ತಮಗಾದ ಲೈಂಗಿಕ ಕಿರುಕುಳಗಳ ಬಗ್ಗೆ ಹೇಳಿಕೊಂಡಿದ್ದಾರೆ. ಮತ್ತೆ ಕೆಲವರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ ನೊಂದವರ ಬೆನ್ನಿಗೆ ನಿಂತಿದ್ದಾರೆ. ಈಗ ಮೀಟೂ ಬಿಸಿ ಇನ್ನು ಹೆಚ್ಚಾಗುತ್ತಿದೆ.ಬಾಲಿವುಡ್‌ನಲ್ಲಿ ಶುರುವಾದ ಮೀಟೂ ಚಳುವಳಿ ಇದೀಗ ಕಾಲಿವುಡ್​ನಲ್ಲೂ ಗಿರಕಿ ಹೊಡೆಯುತ್ತಿದೆ,ರ್ಕಾರಿ ಕಚೇರಿಗಳಲ್ಲಿ, ಎಂಎನ್​ಸಿ ಕಂಪನಿಗಳಲ್ಲಿಯೂ ಹೊಗೆಯಾಡುತ್ತಿದೆ. ಸದ್ಯ ರಂಗಭೂನಿಗೂ ಆ ಬಿಸಿ ತಟ್ಟಿದೆ.

ತಮಿಳಿನ ಸೂಪರ್​ ಸ್ಟಾರ್​ ರಜನೀಕಾಂತ್​ ಅಭಿನಯದ ಬಹು ನಿರೀಕ್ಷಿತ 2.0 ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೇ ಮೋಸ್ಟ್​ ಎಕ್ಸ್ಪೆಕ್ಟೇಷನ್​ ಇರುವ ಈ ಚಿತ್ರದಲ್ಲಿ ಮಾಯಾ ಎಂಬ ನಟಿಯು ಕೂಡ ನಟಿಸಿದ್ದಾರೆ. ಸದ್ಯ ಮಾಯಾ ಎಸ್​ ಕೃಷ್ಣನ್​ ವಿರುದ್ಧವೂ ಮೀಟೂ ಆರೋಪ ಕೇಳಿ ಬರುತ್ತಿದೆ. ನಟ ರಜನೀಕಾಂತ್​ ಜೊತೆ 2.0 ಸಿನಿಮಾದಲ್ಲಿ ಸ್ಕ್ರೀನ್​ ಶೇರ್​ ಮಾಡಿಕೊಂಡಿರುವ ಮಾಯಾ ಕೃಷ್ಣನ್​ ಮೇಲೆ ಮತ್ತೊಬ್ಬ ನಟಿ ಅನನ್ಯ ಪ್ರಸಾದ್​ ಕೂಡ ಮೀಟೂ ಆರೋಪ ಮಾಡಿದ್ದಾರೆ.

 

 

 

ಆದ್ರೆ ವಿಚಿತ್ರ ಏನು ಅಂದ್ರೆ ಒಂದು ಹುಡುಗಿ ಇನ್ನೊಂದು ಹುಡುಗಿಯ ಮೇಲೆ ಮೀಟೂ ಆರೋಪ ಮಾಡಿರುವುದು.ರಂಗಭೂಮಿ ಕಲಾವಿದೆ ಅನನ್ಯ ರಾಮ್​ ಪ್ರಸಾದ್​​, ಮಾಯಾ ಅವರು ತಮಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದಾರೆ.‘ನನಗಾಗ 18ವರ್ಷ ವಯಸ್ಸು. 25ವರ್ಷದ ಮಾಯಾಳನ್ನ 2016ರಲ್ಲಿ ಒಂದು ನಾಟಕದ ಪ್ರೊಡಕ್ಷನ್​ನಲ್ಲಿ ಮೊದಲ ಬಾರಿ ಭೇಟಿಯಾಗಿದ್ದೆ. ಆ ಭೇಟಿಯೇ ನನ್ನ ಬದುಕಿಗೆ ಮುಳುವಾಯಿತು.
ಆಕೆ ನಿಧಾನವಾಗಿ ನನ್ನ ಬದುಕನ್ನ ತನ್ನ ತೆಕ್ಕೆಗೆ ತೆಗೆದುಕೊಂಡಳು. ನನ್ನ ಬಾಲ್ಯದ ಗೆಳೆಯ/ಗೆಳತಿಯರೊಂದಿಗೆ ಮಾತನಾಡದಂತೆ ಮಾಡಿದಳು. ನನ್ನ ಸ್ನೇಹಿತರ ಬಳಿ ನನ್ನ ಬಗ್ಗೆ ಇಲ್ಲಸಲ್ಲದ ಸುಳ್ಳುಗಳನ್ನ ಹೇಳಿ ನನ್ನನ್ನು ದ್ವೇಷಿಸುವಂತೆ ಮಾಡಿದಳು’ ಅಂತಾ ಅನನ್ಯ ತಮ್ಮ ಫೇಸ್​ಬುಕ್​ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.ಈ ವಿಷ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ಸುದ್ದಿ ಮಾಡಿದು ಹೀಗೂ ನಡೆಯುತ್ತಾ ಏನೋ ಮಟ್ಟಿಗೆ ಜನ ಚರ್ಚೆ ಆರಂಭ ಮಾಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top