ಸಮಾಚಾರ

ಈ ಒಂದೇ ಕಾರಣಕ್ಕಾಗಿ ದ್ರಾವಿಡ್‌ಗೆ ಸಿಕ್ಕಿರುವ ಹಾಲ್ ಆಫ್ ಫೇಮ್ ಗೌರವ ಸಚಿನ್‌ಗೆ ಸಿಕ್ಕಿಲ್ಲ.

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ದ್ರಾವಿಡ್ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಐಸಿಸಿ(ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಹಾಲ್ ಆಫ್ ಫೇಮ್ ಪುರಸ್ಕಾರವನ್ನು ಮೊನ್ನೆ ತಾನೇ ನೀಡಿ ಗೌರವಿಸಿತು. ಈ ಮೂಲಕ ಈ ಪುರಸ್ಕಾರಕ್ಕೆ ಪಾತ್ರರಾದ ಭಾರತದ ಐದನೇ ಆಟಗಾರನಾಗಿ ದ್ರಾವಿಡ್ ಹೊರಹೊಮ್ಮಿದ್ದು ಈ ಹಿಂದೆ ಸುನಿಲ್‌ ಗಾವಸ್ಕರ್‌, ಬಿಷನ್‌ ಸಿಂಗ್‌ ಬೇಡಿ, ಕಪಿಲ್‌ ದೇವ್‌ ಮತ್ತು ಅನಿಲ್‌ ಕುಂಬ್ಳೆ ಪ್ರತಿಷ್ಠಿತ ಪುರಸ್ಕಾರಕ್ಕೆ ಭಾಜನರಾಗಿದ್ದರು.

 

 

ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಅವರು ದ್ರಾವಿಡ್ ಸಮಕಾಲೀನ ಆಟಗಾರರು.. ಹಾಗೆ ನೋಡಿದರೆ ಅತಿಹೆಚ್ಚು ರನ್ನು, ಶತಕ, ಅರ್ಧಶತಕ ಒಳಗೊಂಡಂತೆ ಬ್ಯಾಟಿಂಗಿಗೆ ಸಂಭಂದಿಸಿದ ಬಹುತೇಕ ದಾಖಲೆಗಳು ಸಚಿನ್ ಬಳಿಯೇ ಉಳಿದುಕೊಂಡಿವೆ. ಹೀಗಿದ್ದರೂ ಯಾಕೆ ಸಚಿನ್‌ಗೆ ಹಾಲ್ ಆಫ್ ಫೇಮ್ ಸಿಕ್ಕಿಲ್ಲ ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರು. ಇನ್ನೂ ಕೆಲವರಂತೂ ಐಸಿಸಿ ಸಚಿನ್ ಅವರಿಗೆ ಅವಮಾನ ಮಾಡಿದೆ ಎಂದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಅಸಹನೆ ಹೊರಹಾಕಿದ್ದರು. ಆದರೆ ಇಲ್ಲಿರುವ ಅಸಲಿಯತ್ತೇ ಬೇರೆ.

ಹಾಲ್ ಆಫ್ ಫೇಮ್ ಎಂದರೇನು?
ಕ್ರಿಕೆಟ್‌ ಜಗತ್ತಿಗೆ ಅಪಾರ ಕೊಡುಗೆ ನೀಡಿದ ಶ್ರೇಷ್ಠ ಆಟಗಾರರನ್ನು ಗೌರವ ಸಲ್ಲಿಸುವ ಸಲುವಾಗಿ 2009ರಲ್ಲಿ ಐಸಿಸಿ ‘ಹಾಲ್‌ ಆಫ್‌ ಫೇಮ್‌’ ಎಂಬ ಪುರಸ್ಕಾರವನ್ನು ಆರಂಭಿಸಿತು. ಈ ಗೌರವಕ್ಕೆ ಪಾತ್ರರಾಗುವವರು ಎಲ್ಲಾ ಪೀಳಿಗೆಯ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದೆನಿಸಿಕೊಳ್ಳುತ್ತಾರೆ.. ಇದುವರೆಗೂ ಒಟ್ಟು 84 ಕ್ರಿಕೆಟಿಗರು ಈ ಗೌರವಕ್ಕೆ ಪಾತ್ರರಾಗಿದ್ದು ಅದರಲ್ಲಿ ಏಳು ಮಂದಿ ಮಹಿಳಾ ಕ್ರಿಕೆಟ್ ಪಟುಗಳು ಕೂಡ ಇದ್ದಾರೆ.

ಸಚಿನ್‌ಗೆ ಇನ್ನೂ ಯಾಕೆ ಸಿಕ್ಕಿಲ್ಲ ಹಾಲ್ ಫೇಮ್ ಗೊತ್ತಾ?
ಐಸಿಸಿ ನಿಯಮದ ಪ್ರಕಾರ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗುವ ಆಟಗಾರ ಖಂಡಿತವಾಗಿಯೂ ಅತ್ಯತ್ತಮ ಆಟಗಾರನಾಗಿರಬೇಕು. ಆದರೆ ಹಿಂದಿನ 5 ವರ್ಷ ಯಾವುದೇ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಆಡಿರಬಾರದು. ಆದರೆ ಸಚಿನ್ ತಮ್ಮ ಕೊನೆಯ ಅಂತಾರಾಷ್ಟ್ರೀಯ ಟೆಸ್ಟ್​ ಪಂದ್ಯವನ್ನು ಆಡಿದ್ದು 2013ರ ನವೆಂಬರ್​ ತಿಂಗಳಲ್ಲಿ. ಹಾಗಾಗಿ ಅವರು ವಿದಾಯ ಹೇಳಿ ಇನ್ನೂ ಐದು ವರ್ಷ ಪೂರೈಸಿಲ್ಲ. ಈ ಕಾರಣದಿಂದಲೇ ಸಚಿನ್‌ಗೆ ಇನ್ನೂ ಹಾಲ್ ಆಫ್ ಫೇಮ್ ಗೌರವ ಸಿಕ್ಕಿಲ್ಲ. ಅಂದಹಾಗೆ ಮುಂದಿನ ವರ್ಷ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರವಾಗಿದ್ದು ಖಂಡಿತವಾಗಿಯೂ ಅದಕ್ಕೆ ಅವರು ಪಾತ್ರರಾಗುತ್ತಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top