ಮನೋರಂಜನೆ

ಬರ್ತಡೇ ಸ್ಪೆಷಲ್ ಜೀರೋ ಟ್ರೈಲರ್ ರಿಲೀಸ್ -‘ಕುಳ್ಳ’ ಶಾರುಖ್‌ಗೆ ಅಭಿಮಾನಿಗಳು ಫುಲ್ ಫಿದಾ.

ಪ್ರತಿ ಚಿತ್ರಗಳಲ್ಲೂ ವಿಭಿನ್ನತೆಯನ್ನು ಕಾಯ್ದುಕೊಂಡು ಚಾಲೆಂಜಿಂಗ್ ಎನ್ನುವಂತಹ ಪಾತ್ರಗಳಲ್ಲಿ ಲೀಲಾಜಾಲವಾಗಿ ನಟಿಸುತ್ತಾ ಬಂದಿರುವವರು ಬಾಲಿವುಡ್ ಬಾದ್ ಶಾ ಶಾರುಖ್ ಖಾನ್. ತಮ್ಮ ನಟನೆಯ ಖದರಿನ ಮೂಲಕವೇ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ಶಾರುಖ್ ಈ ಹಿಂದೆ ನಾನಾ ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇದೀಗ ಅವರ ಮುಂದಿನ ಚಿತ್ರವಾದ ‘ಜೀರೋ’ ದಲ್ಲೂ ಕೂಡ ಸವಾಲಿನ ಪಾತ್ರವನ್ನು ಶಾರುಖ್ ಮಾಡುತ್ತಿದ್ದು ಕುಳ್ಳ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

 

 

ಇಂದು ಬಾಲಿವುಡ್ ಕಿಂಗ್ ಶಾರೂಖ್ ಖಾನ್’ಗೆ ಹುಟ್ಟುಹಬ್ಬದ ಸಂಭ್ರಮ 53ನೇ ವಸಂತಕ್ಕೆ ಕಾಲಿಟ್ಟಿರುವ ಶಾರುಖ್’ಗೆ ಅಭಿಮಾನಿಗಳಿಂದ ಹಿಡಿದು ಬಾಲಿವುಡ್ ತಾರೆಯರೆಲ್ಲಾ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.. ಈ ಬಾರಿ ಶಾರೂಖ್​​​​ ಖಾನ್ ಬರ್ತ್​ಡೇಗೆ ಫಾನ್ಸ್​​​ಗೆ ಸ್ಪೆಷಲ್​ ಗಿಫ್ಟ್​​ ಆಗಿ ಬಹು ನಿರೀಕ್ಷಿತ ಜೀರೋ ಸಿನಿಮಾದ ಟ್ರೈಲರ್​​​ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ..3.14 ನಿಮಿಷದ ಟ್ರೈಲರ್​ನಲ್ಲಿ ಕುಬ್ಜನ ವೇಷದಲ್ಲಿ ಶಾರುಖ್​ ಕಾಣಿಸಿಕೊಂಡಿದ್ದಾರೆ.

ಮದುವೆಯಾಗಲು ತನಗೆ ತಕ್ಕ ಹುಡುಗಿಯನ್ನು ಹುಡುಕುತ್ತಾ ಮೀರತ್​ನಿಂದ ದೆಹಲಿಗೆ ಬರುವ ‘ಬವ್ವ ಸಿಂಗ್’​ ಪಾತ್ರದಲ್ಲಿ ಕಾಣಿಸಿಕೊಂಡರೆ, ದೆಹಲಿಗೆ ಕಾಲಿಟ್ಟಾಗ ಶಾರುಖ್​ಗೆ ವೀಲ್​ ಚೇರ್​ನಲ್ಲಿ ಕಾಣಿಸಿಕೊಳ್ಳುವ ಹುಡುಗಿಯ ಪಾತ್ರದಲ್ಲಿ ಅನುಷ್ಕಾ ಶರ್ಮಾ ಅಭಿನಯಿಸಿದ್ದಾರೆ.. ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕತ್ರಿನಾ ಕೈಫ್ ಕಾಣಿಸಿಕೊಳ್ಳಲಿದ್ದಾರೆ..

ಅಂದಹಾಗೆ ರೆಡ್‌ ಚಿಲ್ಲೀಸ್ ಎಂಟರ್‌‌‌ಟೈನ್ಮೆಂಟ್‌‌‌‌‌‌‌‌‌‌‌‌‌ ಬ್ಯಾನರ್‌‌‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಆನಂದ್ ಎಲ್‌‌‌‌. ರಾಯ್‌ ನಿರ್ದೇಶಿಸಿತ್ತಿದ್ದು ಅನುಷ್ಕಾ ಶರ್ಮಾ ಹಾಗೂ ಕತ್ರಿನಾ ಕೈಫ್‌‌‌ ಶಾರುಖ್’ಗೆ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ವಿಶೇಷ ಪಾತ್ರವೊಂದರಲ್ಲಿ ಸಲ್ಮಾನ್ ಖಾನ್ ಕೂಡ ಕಾಣಿಸಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಇದೇ ವರ್ಷ ಡಿಸೆಂಬರ್‌‌‌ 21 ರಂದು ಸಿನಿಮಾ ಬಿಡುಗಡೆಯಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top