ಸಮಾಚಾರ

ಬಿಜೆಪಿಗೆ ಮತ್ತೊಂದು ಬಿಗ್ ಶಾಕ್ ನೀಡಿದ ಯೂಟರ್ನ್ ಅಭ್ಯರ್ಥಿ ಚಂದ್ರಶೇಖರ್.

ಚುನಾವಣಾ ಕಣದಿಂದ ಹಿಂದೆ ಸರಿದು ಜೆಡಿಎಸ್ ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಮತ್ತೊಂದು ದಾಳ ಉರುಳಿಸಿದ್ದು ಬಿಜೆಪಿ ಪಾಳಯಕ್ಕೆ ಮತ್ತೊಂದು ಬಿಗ್ ಶಾಕ್ ನೀಡಿದ್ದಾರೆ. ಕ್ಷೇತ್ರದ 277 ಮತಗಟ್ಟೆಗಳಲ್ಲಿ ಎಲ್ಲೂ ಕೂಡ ಬಿಜೆಪಿ ಏಜೆಂಟರು ಮತಗಟ್ಟೆ ಪ್ರವೇಶಿಸದಂತೆ ಮಾಡಿದ್ದಾರೆ.

ಗುರುವಾರ ಸಂಜೆ ಅಭ್ಯರ್ಥಿ ಚಂದ್ರಶೇಖರ್ ಚುನಾವಣಾಧಿಕಾರಿಗೆ ನಮೂನೆ 9 ಅನ್ನು ನೀಡಿ ತಮ್ಮ ಅಧಿಕೃತ ಚುನಾವಣಾ ಏಜೆಂಟ್ ಆಗಿದ್ದ ಪದ್ಮನಾಭ್‌ರನ್ನು ರದ್ದುಗೊಳಿಸಿರುವುದಾಗಿ ಹೇಳಿದ್ದಾರೆ. ಚುನಾವಣಾ ಕಣದಿಂದ ಹಿಂದೆ ಸರಿದು ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದ ಚಂದ್ರಶೇಖರ್ ಬಿಜೆಪಿಗೆ ದೊಡ್ಡ ಹೊಡೆತ ನೀಡಿದ್ದರು. ಮತದಾನದ ದಿನ ಮತ್ತು ಎಣಿಕೆ ದಿನ ಬಿಜೆಪಿ ಕಾರ್ಯಕರ್ತರು ಮತಗಟ್ಟೆ ಏಜೆಂಟರಾಗಿ ಕಾರ್ಯ ನಿರ್ವಹಿಸದಂತೆ ಮಾಡಿ ಮತ್ತೊಂದು ಹೊಡೆತ ನೀಡಿದ್ದಾರೆ.

ತಕ್ಷಣದಿಂದಲೇ ಅಭ್ಯರ್ಥಿಯ ಅಧಿಕೃತ ಏಜೆಂಟ್ ಪದ್ಮನಾಭ್‌ರ ಸಹಿ ಮಾನ್ಯತೆ ಕಳೆದುಕೊಂಡಿದೆ. ಇದರಿಂದಾಗಿ‌ ಕ್ಷೇತ್ರದಲ್ಲಿ ಬೂತ್ ಮಟ್ಟದಲ್ಲಿ ನೇಮಕ ಮಾಡಿದ್ದ ಎಲ್ಲ ಬಿಜೆಪಿ ಏಜೆಂಟರ ನೇಮಕಾತಿ ಪತ್ರಗಳು ಮಾನ್ಯತೆ ಕಳೆದುಕೊಂಡಿದ್ದು, ಅವರು ಮತಗಟ್ಟೆಯಿಂದ ಹೊರಗುಳಿಯುವಂತಾಗಿದೆ. ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ನಮೂನೆ 9 ರ ಮೂಲಕ ತಮ್ಮ ಏಜೆಂಟ್ ಆಗಿದ್ದ ಪದ್ಮನಾಭ್‌ರನ್ನು ಹಿಂಪಡೆದಿದ್ದು ಪದ್ಮನಾಭ್‌ರ ಸಹಿ ಇರುವ ಮತಗಟ್ಟೆ ಏಜೆಂಟರ ನೇಮಕಾತಿಗಳು ಮಾನ್ಯತೆ ಕಳೆದುಕೊಂಡಿರುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top