ಸಮಾಚಾರ

03 ನವೆಂಬರ್ ರಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಲು ಮುಂದೆ ಓದಿ

ಶನಿವಾರ, ೦೩ ನವೆಂಬರ್ ೨೦೧೮
ಸೂರ್ಯೋದಯ : ೦೬:೪೫
ಸೂರ್ಯಾಸ್ತ : ೧೭:೫೮
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಆಶ್ವಯುಜ

ಪಕ್ಷ : ಕೃಷ್ಣ ಪಕ್ಷ
ತಿಥಿ : ಏಕಾದಶೀ – ೨೭:೧೩+ ವರೆಗೆ
ನಕ್ಷತ್ರ : ಹುಬ್ಬ – ೨೨:೪೪ ವರೆಗೆ
ಯೋಗ : ಇಂದ್ರ – ೨೭:೨೨+ ವರೆಗೆ
ಸೂರ್ಯ ರಾಶಿ : ತುಲಾ

ಅಭಿಜಿತ್ ಮುಹುರ್ತ:೧೧:೫೯ – ೧೨:೪೪
ಅಮೃತಕಾಲ :೧೬:೪೦ – ೧೮:೧೧
ರಾಹು ಕಾಲ:೦೯:೩೩ – ೧೦:೫೭
ಗುಳಿಕ ಕಾಲ:೦೬:೪೫ – ೦೮:೦೯
ಯಮಗಂಡ:೧೩:೪೫ – ೧೫:೦೯

ಹೊಸ ಹೊಸ ಕಾರ್ಯ ಯೋಜನೆಗಳನ್ನು ಹಮ್ಮಿಕೊಳ್ಳುವ ಮುನ್ನ ಬಹು ಎಚ್ಚರಿಕೆ ಅಗತ್ಯ. ಹಣಕಾಸಿನ ವ್ಯವಹಾರಗಳಲ್ಲಿ ಮೋಸ ಹೋಗುವ ಸಂದರ್ಭವಿರುತ್ತದೆ. ದೀನದಲಿತರಿಗೆ ಆಹಾರವನ್ನು ನೀಡಿರಿ.

ಹೊಸ ಹೊಸ ವಿಚಾರಗಳು ನಿಮ್ಮ ತಲೆಯಲ್ಲಿ ಮಿಂಚಿ ಮಾಯವಾಗುತ್ತಿವೆ. ಅವನ್ನು ಕಾರ್ಯರೂಪಕ್ಕೆ ತರಲು ವೇದಿಕೆಯನ್ನು ಅರಸುತ್ತಿರುವಿರಿ. ಸದ್ಯದರಲ್ಲಿಯೇ ನಿಮಗೆ ಆ ಉತ್ತಮ ಅವಕಾಶ ಬರುವುದು.

ನಿಮ್ಮ ಆಕಾಂಕ್ಷೆಗಳು ಪೂರ್ಣಗೊಳ್ಳುವುದರಿಂದ ಹೆಚ್ಚು ಸಂತೋಷದಿಂದ ಇರುವಿರಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರುವುದು. ಹಣಕಾಸಿನ ಪರಿಸ್ಥಿತಿ ಅಷ್ಟೇನು ಆಶಾದಾಯಕವಾಗಿರುವುದಿಲ್ಲ. ನೂತನ ಕಾರ್ಯಗಳನ್ನು ಮುಂದೂಡುವುದು ಒಳಿತು.

ಮರಕ್ಕಿಂತ ಮರ ದೊಡ್ಡದು. ಅಂತೆಯೇ ನಿಮ್ಮ ಬುದ್ಧಿವಂತಿಕೆಯನ್ನು ಮೀರಿಸುವ ಜನರು ಜಗತ್ತಿನಲ್ಲಿ ಕಾಣಬರುತ್ತಾರೆ. ಹಾಗಾಗಿ ನಿಮ್ಮ ಬುದ್ಧಿಮತ್ತೆಯ ವಿಚಾರವಾಗಿ ಅಹಂಕಾರ ಪಡುವುದು ಸೂಕ್ತವಲ್ಲ.

 

ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ದೊರೆಯಲಿದೆ. ನಿಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದ ವ್ಯಕ್ತಿಗಳು ನಿಮ್ಮೆದೆರು ಬಂದು ಕ್ಷ ಮೆ ಯಾಚಿಸುವ ಸಂದರ್ಭ ಎದುರಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

 

ಇಂದು ನಿಮ್ಮನ್ನು ಕಾಡುತ್ತಿರುವ ಹಲವು ಪ್ರಶ್ನೆಗಳಿಗೆ ಉತ್ತರ ಸಿಗದೆ ಚಡಪಡಿಸುತ್ತಿದ್ದೀರಿ. ಆತಂಕರಾಗದಿರಿ. ಬಂದ ಸಮಸ್ಯೆಗಳು ಗುರುವಿನ ಆಶೀರ್ವಾದದಿಂದ ಕಡಿಮೆ ಆಗುವುದು. ಈ ದಿನ ವಿಶೇಷವಾಗಿ ದುರ್ಗೆಯ ಆರಾಧನೆ ಮಾಡಿರಿ.

 

ನಿಮ್ಮದೇ ಯೋಚನೆ ನಿಮ್ಮದೇ ಆದ ಪ್ರಪಂಚದಿಂದ ಹೊರ ಜಗತ್ತಿಗೆ ಬನ್ನಿ. ನಿಮಗಿಂತಲೂ ಬಹು ಕಷ್ಟ ಜೀವನ ನಡೆಸುತ್ತಿರುವವರು ನಿಮ್ಮ ಕಣ್ಣಿಗೆ ಬೀಳುವರು. ಆಗ ನೀವು ಅನುಭವಿಸುತ್ತಿರುವ ಕಷ್ಟ ಕಷ್ಟವೇ ಅಲ್ಲ ಎಂದು ಗೊತ್ತಾಗುವುದು.

 

ಶಾರೀರಿಕ ಸ್ವಚ್ಛತೆಯು ಮನಸ್ಸಿನ ನೆಮ್ಮದಿಗೆ ಕಾರಣವಾಗುವುದು. ಹಾಗಾಗಿ ಇಂದು ಎಲ್ಲವನ್ನು ಮರೆತು ಹಾಯಾಗಿರಿ. ನಾಳೆಗಾಗಿ ಚಿಂತನೆ ಮಾಡುವುದು ಸಹಜವಾದರೂ ಎಲ್ಲವೂ ದೈವ ಪ್ರೇರಣೆಯಿಂದ ನಡೆಯುವುದರಿಂದ ಚಿಂತಿಸಿ ಫಲವಿಲ್ಲ.

 

ನೀವು ಮಾತಾಡುವ ಪರಿಯಿಂದ ಜನರು ಆಕರ್ಷಿತರಾಗುವರು. ನಿಮ್ಮ ಮಾತಿನ ಘನತೆ ಅಂತಹದು. ಅದಕ್ಕಾಗಿ ವಿರೋಧಿಗಳು ತಲೆ ಬಾಗುವರು. ಮಾತಿನ ಸಂವಹನದಿಂದ ಈ ದಿನ ಉತ್ತಮ ಸ್ನೇಹಿತರ ನೆರವು ನಿಮಗೆ ದೊರೆಯಲಿದೆ.

ಹೊಸ ಸಂಬಂಧ ಅಥವಾ ಗೆಳೆತನದಿಂದ ಮನಸ್ಸು ಹಕ್ಕಿಯಂತೆ ಹಾರಾಡುವುದು. ನಿಮ್ಮ ಅನುಭವದ ನುಡಿಗಳನ್ನು ಅವರು ಆಲಿಸುವುದರಿಂದ ಮಾನಸಿಕ ದುಗುಡ ಕಡಿಮೆ ಆಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

ಪರೋಪಕಾರದ ಕೆಲಸಗಳಿಂದ ಕೀರ್ತಿ ಬರುವುದು. ಕೈಕೊಂಡ ಕೆಲಸಗಳು ಪೂರ್ಣಗೊಳ್ಳುವವು. ಬಂಧುವರ್ಗದವರಿಂದ ಸಹಾಯ ಸಿಗುವುದು. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇದೆ. ಇತರೆಯವರ ವ್ಯಾಜ್ಯದಲ್ಲಿ ಮಧ್ಯಸ್ಥಿಕೆ ವಹಿಸಿ ಉಭಯರಿಂದ ಗೌರವಕ್ಕೆ ಪಾತ್ರರಾಗುವಿರಿ.

ಯಾರೂ ಯೋಚಿಸದೆ ಇರುವುದನ್ನು ಮಾಡುವುದೇ ನಿಮ್ಮ ಜಾಯಮಾನ. ಹಾಗಾಗಿ ಅದರಲ್ಲಿನ ಯಶಸ್ಸನ್ನು ಕಂಡು ಇತರೆಯವರು ಅಸೂಯೆ ಪಡುವರು. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುತ್ತದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top