ಮನೋರಂಜನೆ

ಸೆಂಚುರಿ ಸ್ಟಾರ್ 125ನೇ ಚಿತ್ರದ ವಿಶೇಷತೆ ಏನು ಗೊತ್ತಾ? ಹೊಸ ಸಾಹಸಕ್ಕೆ ಮುಂದಾದ ಶಿವಣ್ಣ.

ಕನ್ನಡ ಚಿತ್ರರಂಗದಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡು ಅಭಿಮಾನದಾಚೆಗೂ ಆದರಕ್ಕೆ ಪಾತ್ರರಾಗಿರುವವರು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್.. ಬಹುಷಃ ಶಿವಣ್ಣನಷ್ಟು ಬ್ಯುಸಿ ಇರೋ ನಟ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಬೇರೆ ಯಾವ ಚಿತ್ರರಂಗದಲ್ಲಿ ಕಾಣಸಿಗದಿಲ್ಲವೇನೋ ಗೊತ್ತಿಲ್ಲ? ಯಾಕಂದ್ರೆ ಶಿವಣ್ಣನ ಕೈಯಲ್ಲಿರುವ ಸಿನಿಮಾಗಳನ್ನು ನೋಡಿದರೆ ಎಂಥವರೂ ಕಂಗಾಲಾಗುತ್ತಾರೆ. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಶಿವಣ್ಣ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ‘ದ್ರೋಣಾ’ ‘ಕವಚ’ ಮತ್ತು ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ‘ರುಸ್ತುಮ್’ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಿರುವ ಶಿವಣ್ಣ

‘ಎಸ್‌ಆರ್‌ಕೆ’, ‘ಕುಲದಲ್ಲಿ ಕೀಳ್ಯಾವುದೋ’ ‘ಆನಂದ್’ ಚಿತ್ರಗಳ ಶೀರ್ಷಿಕೆ ಫೈನಲ್ ಆಗಿದ್ದು ಸೆಟ್ಟೇರಲು ತುದಿಗಾಲಲ್ಲಿ ನಿಂತಿವೆ. ಹೀಗಿರುವಾಗ ಮತ್ತೊಬ್ಬ ನಿರ್ದೇಶಕನಿಗೆ ಶಿವಣ್ಣನ ಕಾಲ್ ಶೀಟ್ ಸಿಕ್ಕಿದೆ. ತಮ್ಮ ಇದುವರೆಗಿನ ಸಿನಿಮಾ ಯಾನದಲ್ಲಿ ಥರ ಥರದ ಪಾತ್ರ ಮಾಡಿರೋ ಶಿವಣ್ಣ ಈಗ 125ನೇ ಚಿತ್ರದತ್ತ ಸಾಗಿ ಬಂದಿದ್ದಾರೆ. ಅವರ ನೂರಾ ಇಪ್ಪತೈದನೇ ಚಿತ್ರ ಯಾವುದೆಂಬುದೂ ಇದೀಗ ಜಾಹೀರಾಗಿದೆ!

ಶಿವರಾಜ್​ಕುಮಾರ್ ಅಭಿನಯದ ‘ಮಫ್ತಿ’ ಚಿತ್ರ ಗೆದ್ದು ಬೀಗಿತ್ತು. ಈ ಚಿತ್ರದಲ್ಲಿ ಭೈರತಿ ರಣಗಲ್ ಆಗಿ ಶಿವಣ್ಣ ಕಾಣಿಸಿಕೊಂಡಿದ್ದರು. ಈ ಪಾತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆಯ ಮಾತುಗಳು ಕೇಳಿ ಬಂದಿದ್ದವು.. ಅಚ್ಚರಿ ಎಂದರೆ ‘ಮಫ್ತಿ’ ನಿರ್ದೇಶಕ ನರ್ತನ್ ಹಾಗೂ ಶಿವಣ್ಣ ಅವರು ಒಟ್ಟಾಗಿ ಕೆಲಸ ಮಾಡುವ ಮುಂದಿನ ಚಿತ್ರಕ್ಕೆ ‘ಭೈರತಿ ರಣಗಲ್’ ಶೀರ್ಷಿಕೆಯೇ ಅಂತಿಮಗೊಂಡಿದೆ ಎಂದು ಸುದ್ದಿಯಾಗಿತ್ತು. ಇದೀಗ ಭೈರತಿ ರಣಗಲ್ ಶಿವಣ್ಣನ 125ನೇ ಚಿತ್ರವಾಗಿ ನಿಗದಿಯಾಗಿದೆ!

ಕೆ.ಪಿ. ಶ್ರೀಕಾಂತ್ ಅಥವಾ ಜಯಣ್ಣ ‘ಭೈರತಿ ರಣಗಲ್’ಗೆ ಬಂಡವಾಳ ಹೂಡಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಈಗ ಆ ಮಾತು ಸುಳ್ಳಾಗಿದೆ. ಈ ಚಿತ್ರವನ್ನು ತಮ್ಮದೇ ನಿರ್ಮಾಣ ಸಂಸ್ಥೆ ‘ಸಿನಿ ಮುತ್ತು ಕ್ರಿಯೇಷನ್’ ಮೂಲಕ ಸ್ವತಃ ಶಿವಣ್ಣ ಅವ್ರೇ ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ಅವರು ನಿರ್ಮಾಪಕರಾಗಿಯೂ ಬಡ್ತಿ ಪಡೆಯುತ್ತಿದ್ದಾರೆ. ಸದ್ಯ ಒಪ್ಪಿಕೊಂಡಿರುವ ಎಲ್ಲಾ ಪ್ರಾಜೆಕ್ಟ್ ಗಳು ಮುಗಿದ ನಂತರ ಭೈತಿ ರಣಗಲ್ ಕೈಗೆತ್ತಿಕೊಳ್ಳಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top