ಭವಿಷ್ಯ

ನವೆಂಬರ್ 6ನೇ ತಾರೀಖು ಕುಜ ಗ್ರಹ ಕುಂಭ ರಾಶಿಗೆ ಪ್ರವೇಶ ಮಾಡಲಿದ್ದಾನೆ,ಇದರಿಂದ ಈ 7 ರಾಶಿಯವರ ಮೇಲೆ ಬೀರುವ ಶುಭಫಲಗಳು ಏನೇನು ಗೊತ್ತಾ

ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳ ಗ್ರಹವನ್ನು ಅತ್ಯಂತ ಶಕ್ತಿಶಾಲಿ ಗ್ರಹ ಎಂದು ಪರಿಗಣಿಸಲಾಗಿದೆ.ಕುಜ ಗ್ರಹವು ಕೆಂಪು ಬಣ್ಣದ ಗ್ರಹವಾಗಿದ್ದು, ಇವನು ಭೂಮಿಕಾರಕ. ಆತ್ಮವಿಶ್ವಾಸ, ಮಹತ್ವಾಕಾಂಕ್ಷೆಯನ್ನು ಮತ್ತು ಅಹಂಕಾರವನ್ನು ಈ ಗ್ರಹ ಪ್ರತಿನಿಧಿಸುತ್ತದೆ. ಮಂಗಳ ಗ್ರಹದ ಪ್ರಭಾವ ಮನುಷ್ಯನ ಸ್ವಭಾವ ಮತ್ತು ಆತ್ಮವಿಶ್ವಾಸದ ಮೇಲೆ ಬೀಳುತ್ತದೆ. ಜನ್ಮ ಕುಂಡಲಿಯಲ್ಲಿ ಮಂಗಳ ಗ್ರಹವು ಉಚ್ಛ ಸ್ಥಾನದಲ್ಲಿದ್ದರೆ ಅದರ ಪರಿಣಾಮವು ಚೆನ್ನಾಗಿರುತ್ತದೆ. ಆದರೆ ಅದೇ ಮಂಗಳ ಗ್ರಹವು ನೀಚ ಸ್ಥಾನದಲ್ಲಿದ್ದರೆ ಕಷ್ಟಗಳು ಆವರಿಸುತ್ತವೆ.

 

 

 

ಜ್ಯೋತಿಷ್ಯ ವಿಜ್ಞಾನದ ಪ್ರಕಾರ ಈಗ ಬರುವ ನವಂಬರ್ ಆರನೇ ತಾರೀಖಿನಂದು ಮಂಗಳ ಗ್ರಹವು ಕುಂಭ ರಾಶಿಗೆ ಪ್ರವೇಶ ಮಾಡಲಿದೆ. ಈ ಗೋಚಾರವು ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ಉಂಟು ಮಾಡಲಿದೆ . ಇದರಿಂದ ಕೆಲವು ರಾಶಿಗೆ ಲಾಭವು ಆಗಲಿದೆ ಇನ್ನೂ ಕೆಲವು ಈ ಬದಲಾವಣೆಯು ಹಾನಿಯನ್ನು ಮತ್ತು ಲಾಭದಾಯಕ 2 ಆಗಬಹುದು. ಅದೇ ರೀತಿ ರಾಶಿಯ ಅನುಸಾರವಾಗಿ ಈ ಗೋಚಾರದಿಂದ ರಾಶಿಗಳ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ.

ಮೇಷ ರಾಶಿ:ಮೇಷ ರಾಶಿಗೆ ಈ ಮಂಗಳ ಗ್ರಹವೇ ಅಧಿಪತಿಯಾಗಿದ್ದು, ಇದುವರೆಗೂ ಮೇಷ ರಾಶಿಯ ಮೇಲೆ ಮಂಗಳನ ವಕ್ರದೃಷ್ಟಿ ಇತ್ತು. ಆದರೆ ಇನ್ನು ಮುಂದೆ ಮಂಗಳನ ವಕ್ರದೃಷ್ಟಿ ಇರುವುದಿಲ್ಲ. ಆಗಿರುವುದರಿಂದ ಇವರಿಗೆ ಲಾಭವಾಗುತ್ತದೆ ಮತ್ತು ನಿಂತು ಹೋಗಿರುವ ಕಾರ್ಯಗಳು ಮುಂದೆ ಸಾಗುತ್ತವೆ ಮತ್ತು ಕೋರ್ಟ್ ಕೇಸ್ ಗಳಲ್ಲಿ ಜಯ ಲಭಿಸಲಿದೆ. ಜೀವನದಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಂಡುಬರಲಿದೆ. ಆರ್ಥಿಕವಾಗಿ ಉನ್ನತಿಯಾಗಿ ಲಾಭವನ್ನು ಸಹ ಗಳಿಸುತ್ತೀರ.
ಸಿಂಹ ರಾಶಿ:ಮಂಗಳ ಗ್ರಹದ ಈ ರಾಶಿ ಪರಿವರ್ತನೆಯಿಂದ ಸಿಂಹ ರಾಶಿಯವರು ಹೆಚ್ಚಿನ ಸಮಯ ಭಕ್ತಿ ಮತ್ತು ಆಧ್ಯಾತ್ಮಿಕತೆಯಲ್ಲಿ ಮುಳುಗುತ್ತಾರೆ ಮತ್ತು ತಮ್ಮ ಮನಸ್ಸಿನೊಳಗೆ ನಕಾರಾತ್ಮಕತೆಯನ್ನು ಸಹ ಹೊಂದುತ್ತಾರೆ. ಸಮಯಕ್ಕೆ ಅನುಗುಣವಾಗಿ ಎಲ್ಲಾ ನಿಂತು ಹೋಗಿರುವ ಕಾರ್ಯಗಳು ಸಹ ಪೂರ್ಣಗೊಳ್ಳುತ್ತವೆ ಮತ್ತು ಧನ ಸಂಪತ್ತು ಕೂಡ ವೃದ್ಧಿಯಾಗಲಿದೆ.
ಕನ್ಯಾ ರಾಶಿ:ಈ ರಾಶಿಯ ಜಾತಕದವರಿಗೆ ಮಂಗಳ ಗ್ರಹದ ಈ ಬದಲಾವಣೆಯು ಶುಭ ಎಂದು ಪರಿಗಣಿಸಲಾಗಿದೆ. ನೌಕರಿಯಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಬಗೆಹರಿಯುತ್ತವೆ. ಯಾರಾದರೂ ಉದ್ಯೋಗದ ಹುಡುಕಾಟದಲ್ಲಿದ್ದರೆ, ಅವರಿಗೆ ಉತ್ತಮವಾದ ಉದ್ಯೋಗ ಲಭಿಸಲಿದೆ, ವಾಹನವನ್ನು ಖರೀದಿಸುವ ಪ್ರಬಲವಾದ ಯೋಗವಿದೆ, ಜೀವನದಲ್ಲಿ ಖುಷಿಯ ದಿನಗಳು ಕಾಣಿಸುತ್ತವೆ.

 

 

 

ತುಲಾ ರಾಶಿ:ತುಲಾ ರಾಶಿಯವರಿಗೆ ಮಂಗಳನ ಈ ಬದಲಾವಣೆ ತುಂಬಾ ಶುಭವಾಗಿದೆ. ದಾಂಪತ್ಯ ಜೀವನ ತುಂಬಾ ಚೆನ್ನಾಗಿರುತ್ತದೆ, ಜೀವನ ಸಂಗಾತಿಯ ಜೊತೆಗೆ ತುಂಬಾ ದಿನಗಳಿಂದ ಸಂಘರ್ಷದ ವಾತಾವರಣ, ವಾದ-ವಿವಾದಗಳು ನಡೆಯುತ್ತಿದ್ದವು , ಆದರೆ ಇದೀಗ ಇವೆಲ್ಲವೂ ಸಹ ಬಗೆಹರಿಯುತ್ತವೆ ಮತ್ತು ನೀವು ಹೊಸ ಕಾರ್ಯಗಳನ್ನು ಪ್ರಾರಂಭಿಸಿದರೆ ನಿಮ್ಮ ಜೀವನ ಸಂಗಾತಿಯ ಸಹಾಯ ಲಭಿಸುತ್ತದೆ.
ವೃಶ್ಚಿಕ ರಾಶಿ:ಮಂಗಳ ಗ್ರಹದ ಈ ರಾಶಿ ಪರಿವರ್ತನೆಯಿಂದ ನಿಮ್ಮ ಆರೋಗ್ಯದ ದೃಷ್ಟಿಯಿಂದ ಲಾಭವಾಗಲಿದೆ ಮತ್ತು ನೀವು ತುಂಬಾ ಸಮಯದಿಂದ ಕಾಯಿಲೆಗಳಿಂದ ಬಳಲುತ್ತಿದ್ದರೆ ಈಗ ಈ ಗ್ರಹ ಬದಲಾವಣೆಯಿಂದ ನಿಮ್ಮ ಆರೋಗ್ಯ ಸಮಸ್ಯೆಗಲೆಲ್ಲವೂ ಸಹ ಗುಣಮುಖವಾಗುತ್ತವೆ, ಅನಾರೋಗ್ಯದಿಂದ ಮುಕ್ತಿ ಹೊಂದಲಿದ್ದೀರಿ ಮತ್ತು ಸಹೋದ್ಯೋಗಿಗಳ ಜೊತೆಗೆ ಇದ್ದ ಮನಸ್ತಾಪಗಳು ಕೂಡ ಬಗೆಹರಿಯಲಿದೆ ಮತ್ತು ಶುಭ ಫಲವು ಸಹ ಪ್ರಾಪ್ತಿಯಾಗಲಿವೆ.
ಧನಸ್ಸು ರಾಶಿ:ಮಂಗಳನ ಈ ರಾಶಿ ಪರಿವರ್ತನೆಯಿಂದ ನಿಮ್ಮ ಜೀವನದಲ್ಲಿ ಶುಭ ದಿನಗಳು ಬರಲಿವೆ, ಜೀವನ ಸಂಗಾತಿಯ ಜೊತೆ ಉತ್ತಮವಾದ ದಿನಗಳನ್ನು ಕಳೆಯಲು ಮತ್ತು ಇದುವರೆಗೂ ಇದ್ದ ಮನಸ್ತಾಪಗಳು ಎಲ್ಲವೂ ಬಗೆಹರಿದು ಸಂಬಂಧ ಗಟ್ಟಿಯಾಗಿರುತ್ತದೆ. ಸಂತಾನದಿಂದ ನಿಮ್ಮ ಮಕ್ಕಳಿಂದಲೂ ಕೂಡ ಶುಭ ಫಲಗಳು ಪ್ರಾಪ್ತಿಯಾಗುತ್ತವೆ ಮತ್ತು ಅನೇಕ ರೀತಿಯಲ್ಲಿ ಲಾಭ ದೊರೆಯಲಿದೆ. ಬೌದ್ಧಿಕ ಸುಖವು ಪ್ರಾಪ್ತಿಯಾಗಲಿದೆ, ಧನ ಸಂಗ್ರಹವಾಗಲಿದೆ.
ಕುಂಭ ರಾಶಿ:ಮಂಗಳನ ಈ ರಾಶಿ ಪರಿವರ್ತನೆಯಿಂದ ನಿಮಗೆ ಲಾಭವಾಗಲಿದೆ, ನೀವು ಇದುವರೆಗೂ ಮನೆಯನ್ನು ಖರೀದಿಸಲು ಸಾಧ್ಯವಾಗಿಲ್ಲ ಎಂದರೆ ಈ ಸಮಯವು ಮನೆಯನ್ನು ಖರೀದಿಸಲು ಯೋಗ್ಯಾವಾಗಿದೆ, ವಾಹನವನ್ನು ಕೂಡ ಖರೀದಿಸುವ ಯೋಗವಿದೆ, ಕೃಷಿ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಲಾಭ ದೊರೆಯಲಿದೆ, ಉದ್ಯೋಗ ಹುದುಕುತ್ತಿರುವವರಿಗೆ ಉದ್ಯೋಗ ಲಭಿಸಲಿದೆ, ಧನ ವೃದ್ದಿಯಾಗುತ್ತದೆ ಮತ್ತು ಆರ್ಥಿಕ ಸ್ಥಿತಿ ಉತ್ತಮವಾಗಲಿದೆ, ಶಾರೀರಿಕವಾಗಿ ನೀವು ಸದೃಢ ರಾಗುತ್ತೀರ ಮತ್ತು ಕಾಯಿಲೆಗಳಿಂದ ಗುಣಮುಖ ಹೊಂದಿ ಅನಾರೋಗ್ಯದಿಂದ ಮುಕ್ತಿಯನ್ನು ಸಹ ಪಡೆಯಲಿದ್ದೀರಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top