fbpx
ದೇವರು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೇವಸ್ಥಾನದಲ್ಲಿ ಚಪ್ಪಲಿ ಕಳೆದು ಹೋದರೆ ಅದು ಏನನ್ನು ಸೂಚಿಸುತ್ತದೆ ಗೊತ್ತಾ

ದೇವಸ್ಥಾನದಲ್ಲಿ ಚಪ್ಪಲಿ ಕಳ್ಳತನವಾಗುವುದು ಸಾಮಾನ್ಯ ಸಂಗತಿ. ಚಪ್ಪಲಿ ಕಳ್ಳತನವಾದರೆ ನಿಶ್ಚಿತವಾಗಿ ನಮಗೆ ನಷ್ಟವೇ ಆಗುತ್ತದೆ. ಆದರೆ ಜ್ಯೋತಿಷ್ಯ ಶಾಸ್ತ್ರ ಬೇರೆಯದನ್ನೇ ಹೇಳುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೇವಸ್ಥಾನದಲ್ಲಿ ಚಪ್ಪಲಿ ಕಳ್ಳತನವಾಗುವುದು ಶುಭ ಸಂಕೇತವಾಗಿದೆ. ಅದರಲ್ಲೂ ಶನಿವಾರ ಚಪ್ಪಲಿ ಕಳ್ಳತನವಾದರೆ ಬಹಳ ಒಳ್ಳೆಯದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರ ಚಪ್ಪಲಿ ಕಳ್ಳತನವಾದರೆ ಶೀಘ್ರದಲ್ಲಿಯೇ ಕೆಟ್ಟ ಸಮಯ ಕಳೆಯಲಿದೆ ಎಂದರ್ಥ. ಶನಿ ದೋಷ ಕಳೆದು ಒಳ್ಳೆಯದಾಗಲಿದೆ ಎನ್ನುವುದರ ಎನ್ನುವುದರ ಸಂಕೇತವಿದು. ಯಾವುದೇ ಕೆಲಸ ಕೈಗೂಡದೇ ತೊಂದರೆಯಲ್ಲಿದ್ದ ವೇಳೆ ಚಪ್ಪಲಿ ಕಳೆದು ಹೋದರೆ ದುಃಖ ಪಡುವ ಬದಲು ಖುಷಿಯಾಗಿರಿ. ಇದು ಶನಿ ದೋಷ ನಿವಾರಣೆಯಾಗುತ್ತದೆ ಎಂಬುದರ ಮುನ್ಸೂಚನೆಯಾಗಿದೆ ಎಂಬುದನ್ನು ಮರೆಯಬೇಡಿ.ದೇಹದ ಪ್ರತಿಯೊಂದು ಅಂಗಕ್ಕೂ ಮತ್ತು ಗ್ರಹಕ್ಕೂ ಸಂಬಂಧವಿದೆ. ಪಾದಗಳನ್ನು ಶನಿಗೆ ಹೋಲಿಸಲಾಗುತ್ತದೆ. ಹಾಗೆ ಚಪ್ಪಲಿ ಹಾಗೂ ಬೂಟಿನ ಕಳ್ಳತನವಾಗಲೂ ಶನಿಯೇ ಕಾರಣ. ಹಾಗಾಗಿಯೇ ಶನಿವಾರ ಚಪ್ಪಲಿ ದಾನ ಮಾಡಿದರೆ ಶನಿ ಪ್ರಸನ್ನನಾಗುತ್ತಾನೆ. ಶೀಘ್ರದಲ್ಲಿಯೇ ಅದೃಷ್ಟದ ದಾರಿ ತೋರಿಸುತ್ತಾನೆ.

 

 

 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾರ ಜಾತಕದಲ್ಲಿ ಶನಿ ಗ್ರಹದ ದೋಷವಿರುತ್ತದೆಯೋ ಅವರಿಗೆ ಸುಲಭವಾಗಿ ಜಯ ದಕ್ಕುವುದಿಲ್ಲ, ಗ್ರಹ ದೋಷವಿದ್ದವರು ಈ ಕೆಲವು ಸುಲಭವಾದ ಪರಿಹಾರಗಳನ್ನು ಮಾಡಿಕೊಂಡರೆ ಉತ್ತಮ,ಪ್ರತಿದಿನ ಸೂರ್ಯನಿಗೆ ಜಲವನ್ನು ಅಂದರೆ ಆರ್ಘ್ಯವನ್ನು ಅರ್ಪಿಸಬೇಕು.ಶಿವಲಿಂಗಕ್ಕೆ ಜಲವನ್ನು ಅರ್ಪಿಸಬೇಕು ಅಂದರೆ ಜಲಾಭಿಷೇಕ ಮಾಡಬೇಕು .ಪ್ರತಿದಿನ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಬೇಕು.ಪ್ರತಿದಿನ ಹನುಮಾನ್ ಚಾಲೀಸವನ್ನು ಪಠಿಸಬೇಕು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top