ಸಮಾಚಾರ

ಮೀಟೂ- ನಟಿ ತನುಶ್ರೀ ವಿರುದ್ಧ ಕೇವಲ 25ಪೈಸೆ ಮಾನನಷ್ಟ ಮೊಕದ್ದಮೆ ಹೂಡಿದ ಮತ್ತೊಬ್ಬ ಬಾಲಿವುಡ್ ನಟಿ.

ನಾನಾ ಪಾಟೇಕರ್ ವಿರುದ್ಧ #ಮೀ ಟೂ ಅಭಿಯಾನದಲ್ಲಿ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಬಾಲಿವುಡ್ ನಟಿ ತನುಶ್ರೀ ದತ್ತಾ ವಿರುದ್ಧ ಮತ್ತೊಬ್ಬ ನಟಿ ರಾಖಿ ಸಾವಂತ್ 25 ಪೈಸೆ ಮಾನಹಾನಿ ಮೊಕದ್ದಮೆ ದಾಖಲಿಸಿದ್ದಾರೆ. ಮೀಟೂ ವಿಚಾರದಲ್ಲಿ ತನುಶ್ರೀ ದತ್ತಾ ವಿರುದ್ಧ ಮಾತನಾಡಿದ್ದಕ್ಕೆ ತನುಶ್ರೀ ಪರ ವಕೀಲರು 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ರಾಖಿ ಸಾವಂತ್ ಈಗ ತನುಶ್ರೀ ದತ್ತಾ ವಿರುದ್ಧ ಕೇವಲ 25 ಪೈಸೆ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ.

ಮುಂಬೈನ ಸುಬರ್​ಬನ್ ಮಲಾಡ್ ಸಿವಿಲ್ ಕೋರ್ಟ್​ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿರೋ ರಾಖಿ ಸಾವಂತ್, ನಾನು ಎರಡು ದಶಕಗಳಿಂದಲೂ ಚಿತ್ರರಂಗದಲ್ಲಿದ್ದೇನೆ. ಇಲ್ಲಿ ಪ್ರಾಮಾಣಿಕವಾಗಿ ನನ್ನ ಕೆಲಸ ಮಾಡಿ ಉತ್ತಮ ಹೆಸರು ಮಾಡಿದ್ದೇನೆ. ತನುಶ್ರೀ ನನ್ನ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವಿದ್ಯಾವಂತೆ, ಕೆಟ್ಟ ನಡತೆಯವಳು ಅಂತೆಲ್ಲಾ ಕರೆದಿದ್ದಾಳೆ. ಇದ್ರಿಂದ ನನ್ನ ಗೌರವಕ್ಕೂ ಹಾನಿಯಾಗಿದೆ ಅಂತಾ ರಾಖಿ ಆರೋಪಿಸಿದ್ದಾಳೆ.

‘ಇಷ್ಟೇ ಅಲ್ಲ ತನುಶ್ರೀ ಮಾದಕ ವ್ಯಸನಿ. ಈ ಹಿಂದೆ ಅವರು ಮತ್ತಿನಲ್ಲಿದ್ದ ಕಾರಣಕ್ಕೆ ಅವರು ಮಾಡಬೇಕಿದ್ದ ಹಾಡಿಗೆ ನಾನು ಅಭಿನಯಿಸಬೇಕಾಯಿತು. ಒಂದು ದಿನ ಮಾದಕ ವಸ್ತು ಸೇವನೆಯಿಂದ 4 ಗಂಟೆಗಳ ಕಾಲ ಮಲಗಿದ್ದ ತನುಶ್ರೀಯಿಂದಾಗಿ, ಹಾಡಿನಲ್ಲಿ ಅಭಿನಯಿಸಲು ನಾನಾ ಪಾಟೇಕರ್​ ನನಗೆ ಕೇಳಿದ್ದರು. ಆಕೆ ಮಾಡುತ್ತಿರುವ ಆರೋಪಗಳೆಲ್ಲ ಕೇವಲ ಪ್ರಚಾರಕ್ಕಾಗಿ. ಆಕೆ ನೋಡಲು ಹುಡುಗನಂತೆ ಇದ್ದಾರೆ. ನನ್ನ ಮೇಲೆ ಸಾಕಷ್ಟು ಸಲ ಅತ್ಯಾಚಾರ ಮಾಡಿದ್ದಾರೆ. #MeToo ತರಹವೇ #SheToo ಅಭಿಯಾನ ಸಹ ಆರಂಭವಾಗಬೇಕು’ ಎಂದು ರಾಖಿ ಆಗ್ರಹಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top