ಸಮಾಚಾರ

ಪಟೇಲ್ ಪ್ರತಿಮೆಯಂತೆ ಉತ್ತರಪ್ರದೇಶದಲ್ಲಿ ಶ್ರೀರಾಮನ ಪ್ರತಿಮೆ ನಿರ್ಮಿಸುತ್ತಾರಂತೆ ಯೋಗಿ ಆದಿತ್ಯನಾಥ್.

ಗುಜರಾತ್ ನಲ್ಲಿ ಪ್ರತಿಷ್ಠಾಪನೆಯಾಗಿರುವ ಸರ್ದಾರ್ ವಲ್ಲಭಾಯ್ ಪಟೇಲರ ಪ್ರತಿಮೆಯಂತೆ ಉತ್ತರಪ್ರದೇಶದಲ್ಲಿ 100 ಮೀಟರ್ ಎತ್ತರದ ಶ್ರೀರಾಮನ ಪ್ರತಿಮೆ ಪ್ರತಿಷ್ಠಾಪನೆ ಮಾಡಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚಿಂತನೆ ನಡೆಸಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. 36 ಅಡಿ ಎತ್ತರದ ಮೂರ್ತಿ ಪೀಠದ ಮೇಲೆ 100 ಅಡಿ ಎತ್ತರದ ಶ್ರೀರಾಮನ ಪ್ರತಿಮೆ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆಯಂತೆ.

ಉತ್ತರ ಪ್ರದೇಶ ಬಿಜೆಪಿ ಮುಖ್ಯಸ್ಥ ಮಹೇಂದ್ರನಾಥ್ ಪಾಂಡೆ ಈ ಹೇಳಿಕೆ ನೀಡಿದ್ದು ಅಯೋಧ್ಯೆ ರಾಮ ಜನ್ಮಭೂಮಿ ಒಡೆತನದ ವಿವಾದದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ 2019ರ ಜನವರಿಗೆ ಮುಂದೂಡಿದ ಎರಡೇ ದಿನಗಳಲ್ಲೆ ಈ ರೀತಿ ಹೇಳಿರುವುದು ಗಮನಾರ್ಹವಾಗಿದೆ.

ಈ ಯೋಜನೆಯ ವೆಚ್ಚ 330 ಕೋಟಿ ರೂಪಾಯಿಯಾಗಲಿದ್ದು, ರಾಜ್ಯದ ಪ್ರಮುಖ ಧಾರ್ಮಿಕ ಪ್ರವಾಸೋದ್ಯಮ ತಾಣ ಆಗಲಿದೆ ಎಂದು ಅವ್ರು ಹೇಳಿದ್ದಾರೆ… ಜೊತೆಗೆ ಆಯೋಧ್ಯೆಯಲ್ಲಿ ಶ್ರೀರಾಮನ ಮ್ಯೂಸಿಯಂ ನಿರ್ಮಿಸಲಾಗುತಂತೆ ಹಾಗೂ ವಿಮಾನ ನಿಲ್ದಾಣಕ್ಕೆ ಶ್ರೀರಾಮನ ಹೆಸರಿಡಲಾಗುವುದೆಂಬ ಸುಳಿವನ್ನ ಕೂಡ ಪಾಂಡೆ ನೀಡಿದ್ದಾರೆ… ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ ಪಾಂಡೆ, ಅದನ್ನು ಮಹಾನ್ ಸಂತ, ಯೋಗಿ ಆದಿತ್ಯನಾಥ್ ಅವರೇ ಪ್ರಕಟಿಸುವುದು ಸೂಕ್ತ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top