fbpx
ದೇವರು

ಇಂದು ರಾಮ ಏಕಾದಶೀ ಈ ದಿನವನ್ನು ಹೀಗೆ ಆಚರಣಿ ಮಾಡಿದ್ರೆ ನಿಮ್ಮ ಸಕಲ ಕಷ್ಟಗಳು ಮಾಯವಾಗಿ ನೀವು ಲಕ್ಷ್ಮಿ ದೇವಿ ಕೃಪೆಗೆ ಪಾತ್ರರಾಗಬಹುದು

ನವೆಂಬರ್ ಮೂರನೇ ತಾರೀಖು ಅಂದ್ರೆ ಇಂದು ಅತ್ಯಂತ ಮಹತ್ವವಾದ ಏಕಾದಶಿ. ಈ ಏಕಾದಶಿಯ ದಿನದ, ಶುಭ ಮುಹೂರ್ತ, ವ್ರತದ ವಿಧಿ, ವಿಧಾನಗಳು ಏನೇನು ?
ಈ ಬಾರಿಯ ಏಕಾದಶಿ ನವಂಬರ್ ಮೂರನೇ ತಾರೀಕಿನಂದು ಬಂದಿದೆ ಇದನ್ನು ರಾಮ ಏಕಾದಶೀ ಎಂದು ಕರೆಯಲಾಗುತ್ತದೆ. ಕಾರ್ತಿಕ ಮಾಸದ ಕೃಷ್ಣ ಪಕ್ಷದಲ್ಲಿ ಈ ಏಕಾದಶಿಯನ್ನು ಆಚರಿಸಲಾಗುತ್ತದೆ.ಯಾರು ಏಕಾದಶಿಯ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ, ಅವರ ಮೇಲೆ ಭಗವಂತನಾದ ಶ್ರೀಹರಿ ವಿಷ್ಣು ಪ್ರಸನ್ನನಾಗುತ್ತಾನೆ ಮತ್ತು ಇದರ ಜೊತೆ ಜೊತೆಗೆ ಲಕ್ಷ್ಮಿ ದೇವಿಯ ಕೃಪೆಯ ಕೂಡ ನಿಮಗೆ ಲಭಿಸುತ್ತದೆ.ರಾಮ ಏಕಾದಶಿಯ ವ್ರತವನ್ನು ಆಚರಿಸುವುದರಿಂದ ಅಕಾಲ ಮೃತ್ಯುವಿನಿಂದ ಬಚಾವಾಗಬಹುದು ಮತ್ತು ಕಾರ್ತಿಕ ಮಾಸದಲ್ಲಿ ಮಹಾಲಕ್ಷ್ಮಿಯನ್ನು ವಿಶೇಷವಾಗಿ ಆರಾಧಿಸಲಾಗುತ್ತದೆ. ಕಾರ್ತಿಕ ಮಾಸದಲ್ಲಿ ಮಹಾಲಕ್ಷ್ಮಿ ದೇವಿಗೆ ನೈವೇದ್ಯವನ್ನು ಅರ್ಪಿಸುವುದರಿಂದ ತುಂಬಾ ಪ್ರಸನ್ನಳಾಗುತ್ತಾಳೆ ಎಂದು ಹೇಳಲಾಗುತ್ತದೆ.

 

 

 

ಏಕಾದಶಿಯ ದಿನ ತುಳಸಿ ಗಿಡದ ಬಳಿ ಕೆಳಗಡೆ ಶುದ್ಧ ಹಸುವಿನ ತುಪ್ಪದ ಒಂದು ದೀಪವನ್ನು ಬೆಳಗಿಸಿದರೆ ಭಗವಂತನಾದ ವಿಷ್ಣುವಿನ ಈ ಕೆಳಗಿನ ಮಂತ್ರವನ್ನು ಹೇಳುವುದರಿಂದ ವಿಷ್ಣುವು ಪ್ರಸನ್ನನಾಗುತ್ತಾನೆ. ಆ ಮಂತ್ರ ಹೀಗಿದೆ,
“ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ, ವಿಶ್ವದಾರಂ ಗಗನ ಸದೃಶಂ ಮೇಘವರ್ಣಂ ಶುಭಾಂಗಮ್, ಲಕ್ಷ್ಮೀಕಾಂತಂ ಕಮಲನಯನಂ ಯೋಗಿವಿದ್ಯಾನಗಮ್ಯಂ,ಒಂದೇ ವಿಷ್ನುಂ ಭವಭಯಹರಂ ಸರ್ವ ಲೋಕೈಕ ನಾಥಂ ” ಈ ಶ್ಲೋಕದಿಂದ ಭಗವಂತನಾದ ಶ್ರೀ ಹರಿಯ ನಾಮ ಸ್ಮರಣೆಯನ್ನು ಮಾಡಿ.ತುಳಸಿಯ ಮಾಲೆಯನ್ನು ಕೈಯಲ್ಲಿ ಹಿಡಿದು ಈ ಮಂತ್ರವನ್ನು ಜಪಿಸಿ “ ಓಂ ಹಂ ಪ್ರದ್ಯುಮ್ನಯೇ ನಮಃ” ಈ ಮಂತ್ರವನ್ನು 108 ಬಾರಿ ಜಪಿಸಬೇಕು ಮತ್ತು ನೈವೇದ್ಯವನ್ನು ಲಕ್ಷ್ಮೀ ದೇವಿಗೆ ಅರ್ಪಿಸಿ ನಂತರ ಅದನ್ನು ನೀವು ಕೂಡ ಸೇವಿಸಿ. ಇತರರಿಗೂ ಕೂಡ ಪ್ರಸಾದದ ರೂಪದಲ್ಲಿ ವಿನಿಯೋಗಿಸಿ. ಇದರಿಂದ ನಿಮ್ಮ ದುಃಖವೆಲ್ಲವೂ ದೂರವಾಗಿ ಜೀವನದಲ್ಲಿ ಸುಖ , ಸಮೃದ್ಧಿ ನಿಮ್ಮ ಪರಿವಾರದಲ್ಲಿ ನೆಲೆಸುತ್ತದೆ. ಮತ್ತು ಮಾನ ಸನ್ಮಾನಗಳು ದೊರೆಯುತ್ತವೆ .

ನಿಮ್ಮ ಹೆಸರು ಕೀರ್ತಿ ಹೆಚ್ಚುತ್ತದೆ, ನಿಮ್ಮ ಮತ್ತು ನಿಮ್ಮ ಕುಟುಂಬದವರ ಮೇಲೆ ಮಹಾ ಲಕ್ಷ್ಮಿ ದೇವಿಯ ಕೃಪೆ ಮತ್ತು ಶ್ರೀ ಹರಿಯೂ ಕೂಡ ಪ್ರಸನ್ನನಾಗಿ ಅವರ ಆಶೀರ್ವಾದವೂ ಕೂಡ ಲಭಿಸುತ್ತದೆ. ಯಾವುದೇ ಕೆಲಸದಲ್ಲಿ ಆದರೂ ಕೂಡ ಯಶಸ್ಸು ಪ್ರಾಪ್ತಿಯಾಗಲಿದೆ. ಈ ಏಕಾದಶಿಯ ಪವಿತ್ರವಾದ ದಿನದಂದು ,ವ್ರತವನ್ನು ಆಚರಿಸಿ ಭಕ್ತಿ, ಶ್ರದ್ಧೆಯಿಂದ ಶ್ರೀ ಮಹಾವಿಷ್ಣುವನ್ನು ಮತ್ತು ಲಕ್ಷ್ಮಿ ದೇವಿಯನ್ನು ಆರಾಧಿಸಿ. ಈ ದಿನ ಅನ್ನವನ್ನು ಸೇವಿಸಬೇಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top