fbpx
ದೇವರು

ಶನಿ ಕಾಟ ನಿವಾರಣೆ,ಸಂತಾನ ಸಮಸ್ಯೆ ಹಾಗೂ ನಿಮ್ಮ ಮನಸಿನ ಯಾವುದೇ ಕೋರಿಕೆ ಸಿದ್ದಿಯಾಗಬೇಕು ಅಂದ್ರೆ ತಪ್ಪದೆ ಈ ಶಕ್ತಿಶಾಲಿ ಹನುಮಂತನ ದರ್ಶನ ಮಾಡಿ

ಇಲ್ಲಿದ್ದಾನೆ ಸಂತಾನ ಕರುಣಿಸುವ ಶಕ್ತಿಶಾಲಿ ವೈದ್ಯ ಹನುಮಂತ ದೇವರು. ಇಲ್ಲಿಗೆ ಬಂದರೆ ಶನಿ ಕಾಟ ನಿವಾರಣೆಯಾಗುತ್ತದೆ. ನೀವು ಏನೇ ಬೇಡಿಕೆಗಳನ್ನು ಕೋರಿಕೊಂಡರು ಅದು ಸಿದ್ದಿಸುತ್ತದೆ. ಇಲ್ಲಿಗೆ ಬಂದರೆ ಕಾಶಿ ರಾಮೇಶ್ವರಕ್ಕೆ ಹೋದಷ್ಟೇ ಫಲ ಲಭಿಸುತ್ತದೆ. ನಿಮ್ಮ ಮನೆಯಲ್ಲಿ ಮಕ್ಕಳ ಅಳು ಕೇಳಿ ಬರುತ್ತಿಲ್ಲವೇ ? ಅದಕ್ಕಾಗಿ ನೀವು ಹಂಬಲಿಸುತ್ತಾ ಇದ್ದೀರಾ ? ಇಲ್ಲಿಗೆ ಬಂದರೆ ನಿಮಗೆ ಸಂತಾನವಾಗುವುದು ಶತಸಿದ್ಧ.
ಮುದ್ದಾದ ಮಗು ಅದರ ತೊದಲು ನುಡಿ ತಾಯಿಯ ಬೆಚ್ಚನೆಯ ಅಪ್ಪುಗೆ ಅಪ್ಪನ ಬೆರಳು ಹಿಡಿದು ನೆಡೆಯುವ ಅನುಭವ , ಮಗುವಿನ ಆಟ, ತುಂಟಾಟ ಇವೆಲ್ಲವೂ ಮನೆಯಲ್ಲಿ ಮಗುವಿದ್ದಾಗ ಆಗುವ ಸುಮಧುರ ಅನುಭವಗಳು, ಮಕ್ಕಳು ಪ್ರತ್ಯಕ್ಷ ದೇವರಿದ್ದಂತೆ . ಶುದ್ಧವಾದ ಮನಸ್ಸು, ಕಲ್ಮಶ ಎಂದರೆ ಏನು ಎಂದೇ ಅರಿಯದ, ಕೆಟ್ಟ ಬುದ್ಧಿ ಇಲ್ಲದ, ಅನಂತದಿಂದ ಆಗತಾನೆ ಇಳಿದು ಬಂದ ಮುಕ್ತಿ ಜೀವಗಳೇ ಮಕ್ಕಳು. ಹಿಂದೆ ಮಕ್ಕಳಿರಲವ್ವ ಮನೆತುಂಬ ಎನ್ನುವ ವಾಡಿಕೆ ಇತ್ತು. ಆದರೆ ಈಗ ಕಾಲ ಬದಲಾಗಿದೆ “ಮನೆಗೊಂದು ಮಗುವಿರಲಿ, ಮನೆ ತುಂಬಾ ನಗುವಿರಲಿ” ಎಂಬಂತಾಗಿದೆ. ಹೀಗಾಗಿ ಅಳುವ ಕಂದನ ತುಟಿಯು ಹವಳದ ಹಂಗೆ ಎಂದು ಜಾನಪದ ಕವಿಗಳು ಅಳುವಿನಲ್ಲೂ ಮಗುವಿನ ಕೋಪವನ್ನು ಬಣ್ಣಿಸಿದ್ದಾರೆ. ಮಗು ಅತ್ತರೂ ಚೆಂದ, ನಕ್ಕರಂತೂ ಇನ್ನೂ ಚೆಂದ ಮಗುವಿನ ಆಗಮನ ಮನೆಯಲ್ಲಿ ವಿಶೇಷ ಸಂತಸ ತರುತ್ತದೆ.

 

 

 

ಆದರೆ ಅನೇಕರು ಸಂತಾನ ಭಾಗ್ಯದಿಂದ ವಂಚಿತರಾಗಿರುತ್ತಾರೆ. ಇಂಥವರು ಇನ್ನು ಮುಂದೆ ಯೋಚಿಸುವ ಹಾಗಿಲ್ಲ. ಯಾಕೆಂದರೆ ತಾಯಿತನದ ಹಂಬಲವಿರುವ ತಾಯಂದಿರಿಗೆ ಹನುಮ ನೆರವಾಗುತ್ತಾನೆ.ಹಾವೇರಿ ಜಿಲ್ಲೆಯ, ಹಿರೇಕೆರೂರು ತಾಲೂಕಿನ, ಸಾತೇನಹಳ್ಳಿ ಯಲ್ಲಿದೆ ಹನುಮನ ಮಂದಿರ ದಿವ್ಯಕ್ಷೇತ್ರ . ಇಲ್ಲಿರುವ ಹನುಮನನ್ನು ಭಕ್ತಿಯಿಂದ ಶಾಂತೇಶ ಎಂದು ಕರೆಯುತ್ತಾರೆ. ಸಂತಾನವನ್ನು ಅನುಗ್ರಹಿಸುವ ಈ ಶಾಂತೇಶನ ಮಹಿಮೆ ಅಪಾರ, ಬ್ರಹ್ಮಚಾರಿ ಆಂಜನೇಯನಿಗೂ ಮಕ್ಕಳ ಭಾಗ್ಯಕ್ಕೂ ಎಲ್ಲಿಂದ ಸಂಬಂಧ ಎಂದು ಯೋಚಿಸುತ್ತಿದ್ದೀರ. ಇವನು ಅಂತಿಂಥವನಲ್ಲ ಶಕ್ತಿಶಾಲಿ ದೈವ,ಇವನ ಕೃಪೆ ಇದ್ದರೆ ನಿಮ್ಮ ಮನೆ ನಂದನವನವಾಗುತ್ತದೆ. ಮಕ್ಕಲಿಲ್ಲದವರಿಗೆ ತಾಯ್ತನದಿಂದ ಓಡಲು ತುಂಬುತ್ತದೆ. ಸಾತೇನಹಳ್ಳಿಯ ಶಾಂತೇಶನ ಮಕ್ಕಳ ಭಾಗ್ಯ ಕರುಣಿಸುವ ಮಹಾನ್ ವೈದ್ಯ. ಇವನ ಕೃಪೆಯಿಂದ ವರ್ಷಾನುಗಟ್ಟಲೆ ಮಕ್ಕಳಿಲ್ಲದ ಅದೆಷ್ಟೋ ದಂಪತಿಗಳು ಮಕ್ಕಳನ್ನು ಪಡೆದಿದ್ದಾರೆ.
ಸಾತೇನಹಳ್ಳಿಯಲ್ಲಿ ಶಾಂತವಾಗಿ ನಿಂತಿದ್ದಾನೆ ಹನುಮ. ಶಾಂತೇಶ ಶಾಂತವಾಗಿದ್ದರೂ, ಅತ್ಯಂತ ಶಕ್ತಿಶಾಲಿ. ಮಕ್ಕಳಿಲ್ಲದವರ ಪಾಲಿಗೆ ಅದೃಷ್ಟದ ದೈವ .

ದೇವಸ್ಥಾನದ ತುಂಬಾ ಮಹಿಳೆಯರ ದಂಡು, ಒಂದು ಕಡೆ ಸಾಲುಗಟ್ಟಿ ನಿಂತಿರುವ ಮಹಿಳೆಯರು, ಇನ್ನೊಂದೆಡೆ ಬಾಳೆಹಣ್ಣಿನ ಪ್ರಸಾದವನ್ನು ವಿನಿಯೋಗಿಸುವ ಅರ್ಚಕರು, ಇನ್ನೊಂದೆಡೆ ಪ್ರಸಾದವನ್ನು ಸೇವನೆ ಮಾಡುತ್ತಿರುವ ಮಹಿಳೆಯರು. ಇದು ಪ್ರತಿವರ್ಷ ಶ್ರವಣ ನಕ್ಷತ್ರದಂದು ಶಾಂತೇಶನ ಸನ್ನಿಧಿಯಲ್ಲಿ ಕಂಡು ಬರುವ ದೃಶ್ಯಾವಳಿಗಳು. ಪ್ರತಿ ವರ್ಷ ದಸರಾ ಹಬ್ಬದ ಸಂದರ್ಭದಲ್ಲಿ ಶ್ರವಣ ನಕ್ಷತ್ರದ ದಿನ ಇಲ್ಲಿ ಮಕ್ಕಳಾಗದವರಿಗೆ ವಿಶೇಷ ಔಷಧಿ ನೀಡಲಾಗುತ್ತದೆ. ಬಾಳೆ ಹಣ್ಣಿನಲ್ಲಿ ನೀಡುವ ಔಷಧಿಯನ್ನು ಶ್ರದ್ಧೆ, ಭಕ್ತಿಯಿಂದ ಸೇವಿಸಿದರೆ ಮಕ್ಕಳ ಆಗುತ್ತದೆ ಎನ್ನುವ ನಂಬಿಕೆ ಅನಾದಿಕಾಲದಿಂದಲೂ ಸಹ ಇದೆ. ಇಲ್ಲಿ ಬಂದು ಆಂಜನೇಯ ಸ್ವಾಮಿಯ ಪ್ರಸಾದವನ್ನು ತೆಗೆದುಕೊಂಡ ಕೆಲವೇ ತಿಂಗಳಲ್ಲಿ ಮಕ್ಕಳಾಗುತ್ತದೆ ಎಂದು ನಂಬಿಕೆ ಇದೆ. ಹೀಗೆ ಇಲ್ಲಿಗೆ ಬಂದು ಸಂತಾನ ಭಾಗ್ಯ ಪಡೆದ ಅದೆಷ್ಟೋ ದಂಪತಿಗಳು ತಪ್ಪದೇ ಹರಕೆ ತೀರಿಸುತ್ತಾರೆ. ಸಂತಾನ ಭಾಗ್ಯ ಪಡೆದವರು ತಮ್ಮ ಮಕ್ಕಳ ತೂಕದಷ್ಟು ತೆಂಗಿನ ಕಾಯಿಗಳನ್ನು ಅರ್ಪಿಸಿ ತುಲಾಭಾರ ಸೇವೆ ನಡೆಸುತ್ತಾರೆ.

 

 

 

ಮೂರು ವರ್ಷಗಳ ಕಾಲ ಶಾಂತೇಶನ ಸನ್ನಿಧಾನಕ್ಕೆ ಬಂದು ಪ್ರಸಾದ ಸ್ವೀಕರಿಸಿದರೆ ಮಕ್ಕಳ ಆಗುತ್ತೆ ಎನ್ನುವ ನಂಬಿಕೆ ಇದೆ. ಹೀಗಾಗಿ ಪ್ರತಿವರ್ಷ ಮಕ್ಕಳ ಭಾಗ್ಯಕ್ಕಾಗಿ ಹರಕೆ ಹೊತ್ತು ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.ಶಾಂತೇಶನ ಸನ್ನಿಧಿಯಲ್ಲಿ ವಿಶೇಷ ಪ್ರಸಾದ ನೀಡುವುದರ ಹಿಂದೆ ಒಂದು ರೋಚಕ ಕಥೆಯಿದೆ. 1940 ನೇ ಇಸವಿಯಲ್ಲಿ ಬಡ ಬ್ರಾಹ್ಮಣ ದಂಪತಿಗಳು ಸಂತಾನ ಆಪೇಕ್ಷೆಯಿಂದ ಶಾಂತೇಶನ ಬಳಿ ಬಂದಿದ್ದರಂತೆ. ಪ್ರತಿನಿತ್ಯ ಪುರಾಣ ಪ್ರವಚನಗಳನ್ನು ಮಾಡುತ್ತಾ ಇಲ್ಲಿಯೇ 2 ವರ್ಷಗಳ ಕಾಲ ಉಳಿದು ಕೊಂಡಿದ್ದರಂತೆ. ಎರಡು ವರ್ಷದ ನಂತರ ಸಂತಾನ ಪಡೆದರಂತೆ.ನಂತರ ಪ್ರತಿವರ್ಷ ಇಲ್ಲಿಗೆ ಬಂದು ಈ ಸ್ವಾಮಿಯ ಮಹಿಮೆಗೆ ಬೆರಗಾಗಿ ಸ್ವಾಮಿಗೆ ನೈವೇದ್ಯ ಸಲ್ಲಿಸಿ ಪ್ರಸಾದ ವಿಸ್ತರಿಸಿ ಹೋಗಿದ್ದರಂತೆ. ಅಂದಿನಿಂದ ಇಲ್ಲಿ ಸಂತಾನಕ್ಕಾಗಿ ವಿಶೇಷ ಪ್ರಸಾದ ನೀಡುವ ಪರಿಪಾಠ ಬೆಳೆದು ಬಂದಿದೆ ಎನ್ನಲಾಗುತ್ತದೆ. ಹೀಗೆ ಹಲವಾರು ವರ್ಷಗಳಿಂದ ಈ ದೇವಸ್ಥಾನದಲ್ಲಿ ನಡೆದುಕೊಂಡು ಬಂದಿರುವ ನಂಬಿಕೆ ಈಗಲೂ ಜೀವಂತವಾಗಿದೆ.

ಈ ದೇವಸ್ಥಾನಕ್ಕೆ ಇದೆ ಹಲವಾರು ವರ್ಷಗಳ ಇತಿಹಾಸ. ಈ ಕ್ಷೇತ್ರಕ್ಕೆ ಬಂದರೆ ಕಾಶಿ ರಾಮೇಶ್ವರಕ್ಕೆ ಹೋದಷ್ಟೇ ಫಲ ಪ್ರಾಪ್ತಿಯಾಗುತ್ತದೆ. ಶಾಂತೇಶ ತಲೆಯ ಮೇಲಿದೆ ಶಕ್ತಿಶಾಲಿ ಸಾಲಿಗ್ರಾಮ.
ಸಾತೇನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಲ್ಯಾಣ ಚಾಲುಕ್ಯರು, ಹೊಯ್ಸಳರು, ಯಾದವರು ಮತ್ತು ವಿಜಯನಗರದ ಅರಸರು ಆಡಳಿತ ನಡೆಸಿದ ಬಗ್ಗೆ ಶಾಸನಗಳಲ್ಲಿ ಉಲ್ಲೇಖವಿದೆ. ಸಾತೇನಹಳ್ಳಿ ಎಂಬ ಈ ಸ್ಥಳ ಹಿಂದೆ ಸತ್ಯಾನಂದ ಎಂಬುವವನ ಆಳ್ವಿಕೆಗೆ ಒಳಪಟ್ಟಿದ್ದರಿಂದ ಈ ಗ್ರಾಮಕ್ಕೆ ಸತ್ಯನಪುರ, ಸತ್ಯಾನ ಹಳ್ಳಿ ,ಎಂಬ ಹೆಸರು ಇತ್ತು. ಕಾಲಕ್ರಮೇಣ ಇದು ಸಾತೇನಹಳ್ಳಿ ಎಂಬ ಹೆಸರಿಗೆ ಬದಲಾಯಿತು ಎಂದು ಹೇಳಲಾಗುತ್ತದೆ.ಈ ಗ್ರಾಮದಲ್ಲಿ ನೆಲೆಸಿರುವ ಶಾಂತೇಶನ ಬಗ್ಗೆ ಹೇಳುವುದಾದರೆ ಇದು ಮೊದಲು ಗಣಪತಿ ಮೂರ್ತಿಯಾಗಿತ್ತು. ಅನ್ಯ ಧರ್ಮೀಯರ ಹಾವಳಿಯ ಸಂದರ್ಭದಲ್ಲಿ ಇಲ್ಲಿರುವ ಗಣೇಶನ ಮೂರ್ತಿಯೂ ಸ್ವಲ್ಪ ಭಿನ್ನವಾಯಿತು. ಹೀಗಾಗಿ ಈ ಮೂರ್ತಿ ಪೂಜೆಗೆ ಯೋಗ್ಯವಲ್ಲ ಎಂದು ಹೇಳುತ್ತಾರೆ. ನಂತರ ಈ ಸ್ಥಳಕ್ಕೆ ಬೇರೆ ಮೂರ್ತಿ ಬೇಕೆಂದು ಕೇಳಿಕೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ ವ್ಯಾಸರಾಯರ ಗುರುಗಳಾದ ಬ್ರಹ್ಮಣ್ಯ ತೀರ್ಥರು ಇಲ್ಲಿಗೆ ತೀರ್ಥ ಯಾತ್ರೆಗಾಗಿ ಬರುತ್ತಾರೆ.ಆಗ ಅವರ ದಿವ್ಯ ಶಕ್ತಿಯಿಂದ ಭೂಗರ್ಭದಲ್ಲಿ ಇದ್ದ ಹನುಮಂತ ದೇವರ ಮೂರ್ತಿಯನ್ನು ಮೂರ್ತಿಯನ್ನು ಹೊರಗೆ ತೆಗೆಸಿ ಇಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ.ಈ ದಿವ್ಯವಾದ ಮೂರ್ತಿಗೆ ಶಾಂತನಾಗಿದ್ದು.
ಈ ಶಾಂತೇಶ ಅಂತಿಂಥವನಲ್ಲ ಈತ ಅತ್ಯಂತ ಮಹಿಮಾನ್ವಿತ. ಇವನ ನೆತ್ತಿಯಲ್ಲಿ ಶ್ರೇಷ್ಠ ಸಾಲಿಗ್ರಾಮವಿದೆ. ನೆತ್ತಿಯಲ್ಲಿ ಸಾಲಿಗ್ರಾಮ ಇರುವುದರಿಂದ ಈ ಹನುಮನಿಗೆ ಶಾಂತೇಶ ಎನ್ನುವ ಹೆಸರು ಬಂದಿದೆ,ಈ ಸಾಲಿಗ್ರಾಮದಿಂದಲೇ ಹನುಮಂತ ಶಕ್ತಿಯಿಂದ ಕೂಡಿದ್ದು, ಶಕ್ತಿಶಾಲಿಯಾಗಿದ್ದಾನೆ.

 

 

 

ಶಾಂತೇಶನ ಮೂರ್ತಿ ಅತ್ಯಂತ ಸುಂದರವಾಗಿದೆ. ನಿತ್ಯ ಈ ಸ್ವಾಮಿಗೆ ವಿಧಿಯುಕ್ತ ಪೂಜೆ-ಪುನಸ್ಕಾರ ನಡೆಯುತ್ತದೆ. ಅಭಿಷೇಕದ ವೇಳೆ ಅವನ ರೂಪವನ್ನು ಕಣ್ತುಂಬಿಕೊಳ್ಳುವುದು ನಿಜಕ್ಕೂ ಪೂರ್ವ ಜನ್ಮದ ಸುಕೃತ.ಇಲ್ಲಿ ಅಭಿಷೇಕವಾದ ನಂತರ ಈ ಸ್ವಾಮಿಗೆ ಅಲಂಕಾರ ಮಾಡಲಾಗುತ್ತದೆ. ಬೆಳ್ಳಿಯ ಕವಚ, ಗದೆ, ಹೂವಿನ ಹಾರ, ನಿಂಬೆ ಹಾರ ಮತ್ತು ವಿಶೇಷ ವಸ್ತ್ರಾ ಭರಣವನ್ನು ಧರಿಸಿದ ಈ ಸ್ವಾಮಿಯನ್ನು ನೋಡುವುದೇ ಕಣ್ಣಿಗೆ ಹಬ್ಬ. ಸರ್ವ ಅಲಂಕಾರಗೊಂಡ ಶಾಂತೇಶ ಅಶ್ವಾರೂಢನಾಗಿ ಬಂದಂತೆ ಭಾಸವಾಗುತ್ತದೆ.ಸಾಡೇಸಾತಿ, ಅಷ್ಟಮ ಶನಿ, ಅರ್ಧಾಷ್ಟಮ ಶನಿ, ಪಂಚಮ ಶನಿಕಾಟ ಇರುವವರು ಈ ಸ್ವಾಮಿಯ ದರ್ಶನ ಮಾಡಿದರೆ ತೊಂದರೆಗಳು ನಿವಾರಣೆಯಾಗುತ್ತವೆ. ಅಷ್ಟೇ ಅಲ್ಲದೆ ಈ ಕ್ಷೇತ್ರಕ್ಕೆ ಬಂದರೆ ಕಾಶಿ ರಾಮೇಶ್ವರಕ್ಕೆ ಹೋದಷ್ಟೇ ಫಲಗಳು ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top