ಸಮಾಚಾರ

ಸಿಸಿಬಿ ಪೊಲೀಸರಿಂದ ಸ್ಯಾಂಡಲ್​ವುಡ್​ ನಟನ ಬಂಧನ- ಕಾರಣವೇನು ಗೊತ್ತಾ?

ಅಕ್ರಮ ಪಿಸ್ತೂಲ್ ಹೊಂದಿದ್ದ ಆರೋಪದ ಮೇಲೆ ಚಿತ್ರನಟ ಜಗದೀಶ್ ಹೊಸ್ಮಠ ಅವರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಕ್ಟೋಬರ್ 23 ರಂದು ಸಂಜೆ ಖಚಿತ ಮಾಹಿತಿ ಆಧರಿಸಿ ಜಗದೀಶ್ ನಗರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಜಗದೀಶ್ ಹೊಸ್ಮಠ ಅಲಿಯಾಸ್​ ಜಾಗ್ವಾರ್ ಜಗ್ಗ ಹಾಗೂ ಮೊಹಮ್ಮದ್ ನಿಜಾಮ್​ನನ್ನು ಬಂಧಿಸಿದ್ದಾರೆ.

ಎಚ್.ಎ.ಎಲ್ ಠಾಣಾ ವ್ಯಾಪ್ತಿಯ ಜಗದೀಶ್ ನಗರದಲ್ಲಿ ಸಿಸಿಬಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಇವರನ್ನು ಬಂಧಿಸಿ ಬಂಧಿತರಿಂದ ಒಂದು ಪಿಸ್ತೂಲ್​ ಹಾಗೂ 10 ಬುಲೆಟ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಬಂಧಿತ ಆರೋಪಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇನ್ನು, ಬಂಧಿತ ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಸತೀಶ್ ಮತ್ತು ಸೈಯದ್ ಎಂಬುವವರನ್ನೂ ಪೊಲೀಸರು ವಶಕ್ಕೆ ಪಡೆಡಿದ್ದು ಅವರ ಬಳಿಯಿಂದ ಮತ್ತೊಂದು ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ. ಅಂದಹಾಗೆ ಜಗದೀಶ್​ ಅವ್ರು ಕನ್ನಡದ ‘ಸರ್ಕಾರ್’ ಚಿತ್ರದ ನಾಯಕನಟ. ಈ ಸಿನಿಮಾ ಕಳೆದ ಮಾರ್ಚ್​​ ತಿಂಗಳಿನಲ್ಲಿ ಬಿಡುಗಡೆಯಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top