ಮನೋರಂಜನೆ

ಕನ್ನಡಿಗರಿಗೆ ಕನ್ನಡದಲ್ಲೇ ರಾಜ್ಯೋತ್ಸವದ ಶುಭಾಶಯ ಕೋರಿದ ಸನ್ನಿ ಲಿಯೋನ್- ವಿಡಿಯೋ ನೋಡಿ

ಸಾಕಷ್ಟು ಕುತೂಹಲ ಹುಟ್ಟಿಸಿದ್ದ ಬಾಲಿವುಡ್ ಹಾಟ್ ಬೆಡಗಿ ಸನ್ನಿ ನೈಟ್ ಕಾರ್ಯಕ್ರಮ ಬೆಂಗಳೂರಿನಲ್ಲಿ ಮೊದಲ ಬಾರಿಗೆ ನಡೆದಿದೆ. ಸಾಕಷ್ಟು ವಿರೋಧದ ನಡುವೆಯೂ ಮಾನ್ಯತಾ ಟೆಕ್ ಪಾರ್ಕ್‍ನ ವೈಟ್ ಆರ್ಕಿಡ್‍ನಲ್ಲಿ ಟೈಮ್ ಕ್ರಿಯೇಷನ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಾಟ್ ಬೆಡಗಿ ಸನ್ನಿ ಲಿಯೋನ್ ಭಾಗವಹಿಸಿದ್ದರು.

ವಿಡಿಯೋ ನೋಡಿ

 

ಬಿಗಿ ಪೊಲೀಸ್‌ ಬಂದೋಬಸ್ತ್‌ ನಡುವೆ ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಅವರ ಸಂಗೀತ, ನೃತ್ಯ ಕಾರ್ಯಕ್ರಮ ‘ಫ್ಯೂಷನ್‌ ನೈಟ್ಸ್‌’ ನಾಗವಾರ ರಿಂಗ್‌ ರಸ್ತೆಯಲ್ಲಿರುವ ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿ ಶನಿವಾರ ರಾತ್ರಿ ನಡೆಯಿತು., ‘ನಾನು ನಿಮ್ಮನ್ನ ತುಂಬಾ, ತುಂಬಾ ಪ್ರೀತಿಸ್ತೀನಿ, ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು’ ಎಂದು ಕನ್ನಡದಲ್ಲೇ ಶುಭಾಶಯ ಕೋರಿದರು.

ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭವಾಗಿದ್ದು, ರಾತ್ರಿ 8.15ಕ್ಕೆ ವೇದಿಕೆ ಪ್ರವೇಶಿಸಿದ ಸನ್ನಿ ಲಿಯೋನ್‌ ಹಿಂದಿ, ಇಂಗ್ಲಿಷ್‌ ಜೊತೆಗೆ ಕನ್ನಡ ಹಾಡುಗಳಿಗೂ ನೃತ್ಯ ಹಾಕಿ ನೆರೆದಿದ್ದವರಿಗೆ ಮನರಂಜನೆ ನೀಡಿದರು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಯುವಕರು, ಸನ್ನಿ ನೃತ್ಯಕ್ಕೆ ಹುಚ್ಚೆದ್ದು ಕುಣಿದರು. ರಾತ್ರಿ 10 ಗಂಟೆವರೆಗೆ ಕಾರ್ಯಕ್ರಮ ನಡೆಯಿತು.

ಇತ್ತ ಸನ್ನಿ ಲಿಯೋನ್ ‘ಶೇಷಮ್ಮ’ ಹಾಡಿಗೆ ಹೆಜ್ಜೆ ಹಾಕುವಾಗ ಸನ್ನಿ ಮೇಲೆ ಬಾಟಲ್ ಎಸೆದು ಪುಂಡನೊಬ್ಬ ರಾದ್ಧಾಂತ ಮಾಡಿದ್ದಾನೆ. ತಕ್ಷಣ ಬಾಟೆಲ್ ಎಸೆದರೆ ಸಿಸಿಟಿವಿ ನೋಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ವೇದಿಕೆಯಲ್ಲೇ ಪುಂಡನಿಗೆ ನಿರೂಪಕ ರಿಯಾಜ್ ವಾರ್ನಿಂಗ್ ಕೊ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top