ಸಮಾಚಾರ

KXIP ತಂಡದಿಂದ ಹೊರಬಿದ್ದ ಸೆಹ್ವಾಗ್- ಪ್ರೀತಿ ಝಿಂಟಾ ಟೀಂಗೆ ವೀರೂ ಗುಡ್‍ಬೈ ಹೇಳಿದ್ಯಾಕೆ?

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ದಿಢೀರ್ ಗುಡ್ ಬೈ ಹೇಳಿದ್ದಾರೆ. 2016 ರಿಂದ 2018ರ ವರೆಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಮೆಂಟರ್ ಜವಾಬ್ದಾರಿ ನಿರ್ವಹಿಸಿದ ಸೆಹ್ವಾಗ್, ಇದೀಗ ಪ್ರೀತಿ ಜಿಂಟಾ ಮಾಲೀಕತ್ವದ ಫ್ರಾಂಚೈಸಿಯಿಂದ ಹೊರಬಂದಿದ್ದಾರೆ. ವೀರೇಂದ್ರ ಸೆಹ್ವಾಗ್ ಟ್ವೀಟರ್ ಮೂಲಕ ಈ ವಿಷ್ಯವನ್ನು ಹೇಳಿದ್ದಾರೆ.

 

 

ಸೆಹ್ವಾಗ್ ಅವರು ತಮ್ಮ ಟ್ವಿಟರ್ ಅಕೌಂಟ್‍ನಲ್ಲಿ ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಳ್ಳಬೇಕು ಮತ್ತು ನಾನು ಕಿಂಗ್ಸ್ ಇಲೆವೆನ್ ಪಂಜಾಬ್‍ನಲ್ಲಿ 2 ಸೀಸನ್ ನಲ್ಲಿ ಆಟಗಾರನಾಗಿ ಮತ್ತು 3 ಸೀಸನ್ ಗಳಲ್ಲಿ ಮೆಂಟರ್ ಆಗಿ ಅದ್ಭುತ ಸಮಯವನ್ನು ಕಳೆದಿದ್ದೇನೆ. ಕಿಂಗ್ಸ್ ಇಲೆವೆನ್ ಅವರೊಂದಿಗೆ ನನ್ನ ಸಹಯೋಗವು ಕೊನೆಗೊಳ್ಳುತ್ತದೆ. ನಾನು ಇಲ್ಲಿ ಒಳ್ಳೆಯ ಕ್ಷಣಗಳನ್ನು ಕಳೆದಿದ್ದೇನೆ ಅದಕ್ಕೆ ನಾನು ಕೃತಜ್ಞರಾಗಿರುತ್ತೇನೆ. ಮುಂದಿನ ದಿನಗಳಿಗೆ ಶುಭವಾಗಲಿ ಎಂದು ಟ್ವೀಟ್ ಮಾಡಿದ್ದಾರೆ.

ಸೆಹ್ವಾಗ್ ಕಿಂಗ್ಸ್ ಇಲೆವೆನ್ ಪಂಜಾನ್ ತಂಡ ಬಿಟ್ಟ ಕಾರಣವನ್ನು ಬಹಿರಂಗಪಡಿಸಿಲ್ಲ. ಹಿಂದಿನ ಸರಣಿಯಲ್ಲಿ ಸೆಹ್ವಾಗ್ ಹಾಗೂ ಕಿಂಗ್ಸ್ ಇಲವೆನ್ ಮಾಲೀಕಳಾದ ಪ್ರೀತಿ ಝಿಂಟಾ ಮಧ್ಯೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇತ್ತೀಚೆಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಫ್ರಾಂಚೈಸಿ, ನ್ಯೂಜಿಲೆಂಡ್ ಕೋಚ್ ಮೈಕ್ ಹೆಸನ್ ಅವರನ್ನ ಮುಖ್ಯ ಕೋಚ್ ಆಗಿ ನೇಮಿಸಿದೆ. ಇದರ ಬೆನ್ನಲ್ಲೇ, ಸೆಹ್ವಾಗ್ ಗುಡ್’ಬೈ ಹೇಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top