ಮನೋರಂಜನೆ

ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದರಂತೆ ಎ ಆರ್ ರೆಹಮಾನ್

ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಎಂದರೆ ಯಾರಿಗೆ ಗೊತ್ತಿಲ್ಲ,ದೊಡ್ಡ ಸಂಗೀತ ನಿರ್ದೇಶಕರಾಗಿರುವ ಎಆರ್​ ರೆಹಮಾನ್​ ತಮ್ಮ ಸರಳತೆಗೆ ಹೆಸರುವಾಸಿ.ಅವರು ಮಾಡಿರುವ ಸಾಧನೆ ಅಷ್ಟಿಷ್ಟಲ್ಲ,ರೆಹಮಾನ್ ತಮ್ಮ ಸಂಗೀತದ ಮೂಲಕ ಜನರಿಗೆ ತುಂಬಾನೇ ಹತ್ತಿರ ಅವರು ಗಳಿಸಿರುವ ಫ್ಯಾನ್ ಫಾಲೋಯಿಂಗ್ ಕಮ್ಮಿ ಏನ್ ಇಲ್ಲ ,ಅವರ ಸಂಗೀತಕ್ಕೆ ಬೀಳದೆ ಇರುವವರೇ ಇಲ್ಲ ,ರೆಹಮಾನ್​ ಕ್ರೇಜ್ ಇರುವ ಅಭಿಮಾನಿಗಳು ತಮ್ಮದೇ ಆದ ಸ್ಟೈಲ್ ಮೂಲಕ ಅವರ ಅಭಿಮಾನ ವ್ಯಕ್ತ ಪಡಿಸುತ್ತಾರೆ ಕೆಲವರು ಗಿಫ್ಟ್ ಕೊಡುತ್ತಾರೆ ,ಇನ್ನು ಕೆಲವರು ಅವರದ್ದೇ ಚಿತ್ರವ್ನನು ಸ್ಕೆಚ್​ ಮಾಡಿ ಕೊಡುತ್ತಾರೆ ಮತ್ತು ಕೆಲವರು ಕೊಡುವ ಸಪ್ರೈಸ್ಡ್​ ಗಿಫ್ಟ್​ ನೀಡಿ ಅವರ ಅಭಿಮಾನವನ್ನು ತೋರುತ್ತಾರೆ.

 

 

 

ಎ.ಆರ್. ರೆಹಮಾನ್ ಅಂದ್ರೆ ಒಬ್ಬ ಸಂಗೀತ ಮಾಂತ್ರಿಕ ಎಂದು ದೊಡ್ಡ ಮಟ್ಟದಲ್ಲೇ ಯೋಚನೆ ಮಾಡ್ತಾರೆ ಅಂದ್ರೆ ಯಾರಿಗೂ ತಿಳಿಯದ ವಿಚಾರ ಏನು ಅಂದ್ರೆ ಎ.ಆರ್. ರೆಹಮಾನ್ ಅತ್ಮಹತ್ಯೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದರಂತೆ. ಹೌದು ಹಾಗಂತ ಸ್ವತಃ ಅವರೇ ಹೇಳಿಕೊಂಡಿದ್ದಾರೆ.ಕಳೆದ ಶನಿವಾರ ಚೆನ್ನೈನಲ್ಲಿ ಎ.ಆರ್. ರೆಹಮಾನ್ ಅವರ ಜೀವನಚರಿತ್ರೆ “ದ ನೋಟ್ ಆಫ್ ಡ್ರೀಮ್” ಬಿಡುಗಡೆ ಸಂದರ್ಭದಲ್ಲಿ ರೆಹಮಾನ್ ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡು ಮಾತನಾಡಿ ಬಹಳ ದುಃಖಿಸಿದ್ದರು.” ನನ್ನ ತಂದೆ ಆರ್.ಕೆ. ಶೇಖರ್(ಅವರೂ ಚಿತ್ರಗೀತೆ ಸಂಯೋಜಕರಾಗಿದ್ದರು) ನನಗೆ 9 ವರ್ಷಗಳಿದ್ದಾಗಲೇ ತೀರಿಹೋಗಿದ್ದರು.ತಂದೆಯವರ ನಿಧನದ ಕಾರಣದಿಂದ ನಾನು ತುಂಬಾ ನೊಂದಿದ್ದೆ. ಆ ಬಳಿಕ ನನ್ನ 12 ರಿಂದ 22ನೇ ವಯಸ್ಸಿನಲ್ಲಿ ಸಂಗೀತಕ್ಕೆ ಸೇರಿ ಅನೇಕ ವಿಷಯಗಳನ್ನು ಕಲಿತರೂ ನನಗೆ ಹೆಚ್ಚು ಸಿನಿಮಾಗಳಲ್ಲಿ ತೊಡಗಿಸಿಕೊಳ್ಳಲು ಆಗಿರಲಿಲ್ಲ. ಹೆಚ್ಚೂ ಕಡಿಮೆ ನನ್ನ 25ನೇ ವಯಸ್ಸಿನವರೆಗೂ ನನಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬ ಯೋಚನೆಗಳು ಬರುತ್ತಿದ್ದವು” ಎಂದು ಅವರು ಹೇಳಿಕೊಂಡಿದ್ದಾರೆ.

ಇನ್ನು ಅವರಿಗೆ ದಿಲೀಪ್‍ ಕುಮಾರ್ ಎಂದರೇ ಆಗುತ್ತಿರಲಿಲ್ಲವಂತೆ. ರೆಹಮಾನ್ ರವರ ಅಸಲಿ ಹೆಸರು ದಿಲೀಪ್‍ ಕುಮಾರ್ ,ಅವರಿಗೆ ವಿನಾಕಾರಣ ಒಂದು ಬೇಸರವಿತ್ತಂತೆ. ಹಳೆದೆಲ್ಲ ಮರೆತು ಹೊಸ ಬದುಕು ಶುರುವಾಗಲಿ ಎಂದು ಎ.ಆರ್. ರೆಹಮಾನ್ ಎಂದು ಹೆಸರು ಬದಲಿಸಿಕೊಂಡೆ ಎಂದು ಅವರ ಹಳೆಯ ಕಷ್ಟ ಕಾಲವನ್ನು ನೆನೆದಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top